ಚಂಡೀಗಢ: ಸತತ ಎರಡನೇ ಬಾರಿಗೆ ಹರಿಯಾಣದ ಮುಖ್ಯಮಂತ್ರಿಯಾಗಿರುವ ನಾಯಬ್ ಸಿಂಗ್ ಸೈನಿ ಅವರ ಸಲಹೆ ಮೇರೆಗೆ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ಸಚಿವ ಸಂಪುಟದ ಸದಸ್ಯರಿಗೆ ಖಾತೆಗಳನ್ನು ಹಂಚಿಕೆ ಮಾಡಿ ಭಾನುವಾರ ತಡರಾತ್ರಿ ಆದೇಶ ಹೊರಡಿಸಿದ್ದಾರೆ.

ಈಚೆಗೆ ಪಂಚಕುಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎನ್ಡಿಎ ನಾಯಕರು ಮತ್ತು ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದ ಸಮಾರಂಭದಲ್ಲಿ 54 ವರ್ಷದ ಸೈನಿ ಅವರು ಸತತ ಎರಡನೇ ಬಾರಿಗೆ ಮುಖ್ಯಮಂತ್ರಿ ಹುದ್ದೆಗೆ ಏರಿದ್ದರು. ಜತೆಗೆ ಇಬ್ಬರು ಮಹಿಳೆಯರು ಸೇರಿದಂತೆ 13 ಮಂದಿ ನೂತನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ನಾಯಬ್ ಸಿಂಗ್ ಸೈನಿ ಅವರು ಗೃಹ ಮತ್ತು ಹಣಕಾಸು ಸೇರಿದಂತೆ ಪ್ರಮುಖ 12 ಖಾತೆಗಳನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಮನೋಹರ್ ಲಾಲ್ ಖಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಗೃಹ ಖಾತೆಯನ್ನು ಹೊಂದಿದ್ದ ಅನಿಲ್ ವಿಜ್ ಅವರಿಗೆ ಈ ಬಾರಿ ಇಂಧನ, ಸಾರಿಗೆ ಮತ್ತು ಕಾರ್ಮಿಕ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.

ಯಾರಿಗೆ ಯಾವ ಖಾತೆ?

ನಾಯಬ್ ಸಿಂಗ್ ಸೈನಿ (ಮುಖ್ಯಮಂತ್ರಿ): ಗೃಹ, ಹಣಕಾಸು, ಕಾನೂನು, ಯೋಜನೆ, ಅಬಕಾರಿ ಮತ್ತು ತೆರಿಗೆ, ನಗರಾಭಿವೃದ್ಧಿ, ಮಾಹಿತಿ ತಂತ್ರಜ್ಞಾನ, ಭಾಷೆ ಮತ್ತು ಸಂಸ್ಕೃತಿ, ಸಾರ್ವಜನಿಕ ಸಂಪರ್ಕ ಇಲಾಖೆ ಸೇರಿದಂತೆ ಒಟ್ಟು 12 ಖಾತೆಗಳನ್ನು ಹೊಂದಿದ್ದಾರೆ.

ಅನಿಲ್ ವಿಜ್: ಇಂಧನ, ಸಾರಿಗೆ ಮತ್ತು ಕಾರ್ಮಿಕ ಇಲಾಖೆ

ಆರ್ತಿ ಸಿಂಗ್ ರಾವ್: ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ, ಸಂಶೋಧನೆ ಮತ್ತು ಆಯುಷ್ ಇಲಾಖೆ

ರಾವ್ ನರಬೀರ್ ಸಿಂಗ್: ಕೈಗಾರಿಕೆ ಮತ್ತು ವಾಣಿಜ್ಯ, ಪರಿಸರ, ಅರಣ್ಯ ಮತ್ತು ವನ್ಯಜೀವಿ ಇಲಾಖೆ

ವಿಪುಲ್ ಗೋಯೆಲ್: ಕಂದಾಯ ಮತ್ತು ವಿಪತ್ತು ನಿರ್ವಹಣೆ ಮತ್ತು ನಾಗರಿಕ ವಿಮಾನಯಾನ ಇಲಾಖೆ

ಮಹಿಪಾಲ್ ಧಂಡಾ: ಶಾಲಾ ಶಿಕ್ಷಣ ಇಲಾಖೆ

ಅರವಿಂದ್ ಶರ್ಮಾ: ಸಹಕಾರ ಖಾತೆ

ಶ್ಯಾಮ್ ಸಿಂಗ್ ರಾಣಾ: ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ

ರಣಬೀರ್ ಗಂಗ್ವಾ: ಸಾರ್ವಜನಿಕ ಆರೋಗ್ಯ ಮತ್ತು ಎಂಜಿನಿಯರಿಂಗ್

ಕ್ರಿಶನ್ ಕುಮಾರ್ ಬೇಡಿ: ಪರಿಶಿಷ್ಟ ಪಂಗಡಗಳ ಕಲ್ಯಾಣ

ಕ್ರಿಶನ್ ಲಾಲ್ ಪನ್ವಾರ್: ಪಂಚಾಯತ್ ರಾಜ್, ಗಣಿ ಮತ್ತು ಭೂವಿಜ್ಞಾನ ಇಲಾಖೆ

ಶೃತಿ ಚೌಧರಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ರಾಜೇಶ್ ನಗರ್: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಖಾತೆ

ಗೌರವ್ ಗೌತಮ್: ಯುವ ಸಬಲೀಕರಣ, ಉದ್ಯಮಶೀಲತೆ ಮತ್ತು ಕ್ರೀಡಾ ಇಲಾಖೆ

ಅಕ್ಟೋಬರ್ 5ರಂದು ನಡೆದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ 90 ಸ್ಥಾನಗಳ ಪೈಕಿ 48 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.