ಚೆನ್ನೈ: ಬ್ಲಾಕ್ ಫಂಗಸ್ನಿಂದ (ಕಪ್ಪು ಶಿಲೀಂಧ್ರ) ಬಳಲುತ್ತಿರುವವರಿಗೆ ಲೋಹದ ’ತ್ರಿಡಿ’ ಮುದ್ರಿತ ಇಂಪ್ಲಾಂಟ್ ಅನ್ನು ಭಾರತೀಯ ತಂತ್ರಜ್ಞಾನ ಸಂಸ್ಥೆ–ಮದ್ರಾಸ್ (ಐಐಟಿ–ಎಂ) ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ನಂತರ ಬ್ಲಾಕ್ ಫಂಗಸ್ನಿಂದ ಬಳಲುತ್ತಿರುವವರ ಸಂಖ್ಯೆ ಏರಿಕೆಯಾಗಿದೆ. ಈ ಇಂಪ್ಲಾಂಟ್ಗಳನ್ನು ಕೈಗೆಟುಕುವ ದರದಲ್ಲಿ ಲಭಿಸುವಂತೆ ಅಭಿವೃದ್ಧಿಪಡಿಸಲಾಗಿದೆ. ಈ ಹೊಸ ತಂತ್ರಜ್ಞಾನ, ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರೋಗಿಗಳಿಗೆ ನೆರವಾಗಲಿದೆ ಎನ್ನುವ ನಿರೀಕ್ಷೆ ಮೂಡಿದೆ.

‘ಮ್ಯೂಕೋರ್ಮಿಕೋಸಿಸ್’ ಎಂದೂ ಕರೆಯಲ್ಪಡುವ ಶಿಲೀಂಧ್ರವು ಸಾಮಾನ್ಯವಾಗಿ ಮುಖದ ಅಂಗಾಂಶಗಳನ್ನು ಆಕ್ರಮಿಸಿಕೊಂಡು, ವಿರೂಪಗೊಳಿಸುತ್ತದೆ. ತೀವ್ರ ಸ್ವರೂಪದ ಪ್ರಕರಣಗಳಲ್ಲಿ ರೋಗಿಗಳ ಮೂಗು, ಕಣ್ಣು ಅಥವಾ ಸಂಪೂರ್ಣ ಮುಖಕ್ಕೆ ಹಾನಿಯಾದ ನಿದರ್ಶನಗಳಿವೆ. ಕೋವಿಡ್-19 ಸಾಂಕ್ರಾಮಿಕದ ನಂತರ ಸುಮಾರು 60 ಸಾವಿರ ಭಾರತೀಯರು ಕಪ್ಪು ಶಿಲೀಂಧ್ರ ಸಮಸ್ಯೆ ಎದುರಿಸುತ್ತಿರುವ ವರದಿ ಇದೆ. ಇಂತಹ ಸನ್ನಿವೇಶದಲ್ಲಿ ಈ ಹೊಸ ತಂತ್ರಜ್ಞಾನವು ಅಂತಹವರ ಪಾಲಿಗೆ ಒಂದಿಷ್ಟು ಭರವಸೆಯ ಬೆಳಕನ್ನೂ ಮೂಡಿಸಿದೆ.

ಚೆನ್ನೈನ ದಂತ ಶಸ್ತ್ರಚಿಕಿತ್ಸರೊಬ್ಬರ ನವೋದ್ಯಮ ‘ಝೋರಿಯೊಎಕ್ಸ್ ಇನ್ನೋವೇಶನ್ ಲ್ಯಾಬ್ಸ್’ ಸಹಭಾಗಿತ್ವದಲ್ಲಿ ಐಐಟಿಎಂ ಸಂಶೋಧಕರು ಲೋಹ ತ್ರಿಡಿ ಮುದ್ರಿತ ಇಂಪ್ಲಾಂಟ್ ಅನ್ನು ರೋಗಿಗಳಿಗೆ ಅಳವಡಿಸುವ ಕಾರ್ಯವನ್ನು ಕೈಗೊಳ್ಳುವ ಯೋಜನೆ ರೂಪಿಸಿದ್ದಾರೆ. ಈ ನವೋದ್ಯಮ ಸಂಸ್ಥೆಯು ಶಸ್ತ್ರಚಿಕಿತ್ಸೆ ನಿಭಾಯಿಸಿದರೆ, ಐಐಟಿಎಂ 3ಡಿ ವಿನ್ಯಾಸ ಮತ್ತು ಮುದ್ರಣವನ್ನು ನಿರ್ವಹಿಸಲಿದೆ.

ಆರ್ಥಿಕವಾಗಿ ದುರ್ಬಲ ವರ್ಗದ ರೋಗಿಗಳಿಗೆ ಲೋಹದ 3ಡಿ ಮುದ್ರಿತ ಸುಮಾರು 50 ಇಂಪ್ಲಾಂಟ್ಗಳನ್ನು ಈಗಾಗಲೇ ಅಳವಡಿಸಲಾಗಿದೆ. ದುಬಾರಿ ಇಂಪ್ಲಾಂಟ್ಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗದ ರೋಗಿಗಳನ್ನು ಗುರುತಿಸಿ, ಅವರಿಗೆ ಈ ಇಂಪ್ಲಾಂಟ್ಗಳನ್ನು ಉಚಿತವಾಗಿ ಅಳವಡಿಸುವ ಸಲುವಾಗಿ ರೈಟ್2ಫೇಸ್ (#Right2Face) ಅಭಿಯಾನವನ್ನು ನಡೆಸಲಾಗುತ್ತಿದೆ.

ಕಪ್ಪು ಶಿಲೀಂಧ್ರ ಸಮಸ್ಯೆಯಿಂದ ಬಳಲುತ್ತಿರುವ ಬಡ ಮತ್ತು ಅಗತ್ಯವಿರುವ ರೋಗಿಗಳಿಗೆ ನೆರವಾಗುವ ಉದ್ದೇಶವನ್ನು ರೈಟ್2ಫೇಸ್ ಉಪಕ್ರಮವು ಹೊಂದಿದೆ

-ಡಾ.ಮುರುಗೈಯನ್ ಅಮೃತಲಿಂಗಂ ಸಹ ಪ್ರಾಧ್ಯಾಪಕ ಐಐಟಿಎಂ

ಕಪ್ಪು ಶಿಲೀಂಧ್ರದ ರೋಗಿಗಳು ಮುಖದ ವಿರೂಪತೆಯಿಂದಾಗಿ ಮನೆಯಿಂದ ಹೊರಬರದಂತಾಗಿದೆ. ಮ್ಯಾಕ್ಸಿಲೊಫೇಶಿಯಲ್ ಶಸ್ತ್ರಚಿಕಿತ್ಸೆಯು ಅವರ ಮುಖದಲ್ಲಿ ಮತ್ತೆ ನಗು ಮೂಡಿಸಲಿದೆ

-ಡಾ. ಕಾರ್ತಿಕ್ ಬಾಲಾಜಿ ಸಿಇಒ ಝೋರಿಯೊಎಕ್ಸ್ ಇನ್ನೋವೇಶನ್ ಲ್ಯಾಬ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.