ಚೈತ್ರಾ ಕುಂದಾಪುರದ ವಂಚನೆ ಪ್ರಕರಣದ ಹೆಚ್ಚಿನ ಮಾಹಿತಿ, ವಿಶ್ವಕಪ್ಗೆ ಟೀಂ ಇಂಡಿಯಾದ ಹೊಸ ಜೆರ್ಸಿ ಹಾಗೂ ಅಯೋಧ್ಯೆಯ ರಾಮಮಂದಿರಕ್ಕೆ ಬಾಂಬ್ ಬೆದರಿಕೆ ಸೇರಿ ಈ ದಿನ ಪ್ರಮುಖ ಹತ್ತು ಸುದ್ದಿಗಳು ಇಲ್ಲಿವೆ.

ಬೆಂಗಳೂರು: ಬಿಜೆಪಿ ಟಿಕೆಟ್ ವಂಚನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಒಂದನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರು, 10 ದಿನಗಳ ಸಿಸಿಬಿ ಪೊಲೀಸರ ಕಸ್ಟಡಿಗೆ ನೀಡಿ ಆದೇಶಿಸಿದ್ದಾರೆ.

ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಿಸುವ ಆಮಿಷವೊಡ್ಡಿ ಒಂದೂವರೆ ಕೋಟಿ ಹಣ ಪಡೆದು ವಂಚಿಸಿದ ಆರೋಪದ ಮೇಲೆ ಸ್ವಾಮೀಜಿಯನ್ನು ನಿನ್ನೆ ಒಡಿಶಾದಲ್ಲಿ ಬಂಧಿಸಲಾಗಿತ್ತು.
.BJP ಟಿಕೆಟ್ ವಂಚನೆ ಪ್ರಕರಣ: 10ದಿನ ಸಿಸಿಬಿ ಪೊಲೀಸರ ಕಸ್ಟಡಿಗೆ ಹಾಲಶ್ರೀ ಸ್ವಾಮೀಜಿ.
ಬೆಂಗಳೂರು: ಬಿಜೆಪಿ ಟಿಕೆಟ್ ವಂಚನೆ ಪ್ರಕರಣದಲ್ಲಿ ನನ್ನ ಹಾಗೂ ನನ್ನ ದತ್ತು ಪುತ್ರ ಬಳ್ಳೂರು ಉಮೇಶ್ ಹೆಸರು ಬಳಸಿಕೊಂಡು ಸುಳ್ಳು ಸುದ್ದಿ ಹಬ್ಬಿಸಿ ತೇಜೋವಧೆ ಮಾಡಲಾಗಿದ್ದು, ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪರಿಸರ ರಾಯಭಾರಿ ಸಾಲುಮರದ ತಿಮ್ಮಕ್ಕ, ನಗರದ ಪೊಲೀಸ್ ಕಮಿಷನರ್ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
.ಬೆಂಗಳೂರು: ಪೊಲೀಸ್ ಕಮಿಷನರ್ ಕಚೇರಿ ಎದುರು ಸಾಲುಮರದ ತಿಮ್ಮಕ್ಕ ಪ್ರತಿಭಟನೆ .
ನಾಗ್ಪುರ: ಗೋವುಗಳ ರಕ್ಷಣೆ ಧರ್ಮಾತೀತವಾಗಿ ಜಗತ್ತಿನ ಪ್ರತಿಯೊಬ್ಬರ ಕರ್ತವ್ಯ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಹಿರಿಯ ನಾಯಕ ಸುರೇಶ್ ಭಯ್ಯಾಜಿ ಜೋಶಿ ಬುಧವಾರ ಹೇಳಿದರು.
.ಗೋವುಗಳ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಆರ್ಎಸ್ಎಸ್ ನಾಯಕ ಭೈಯ್ಯಾಜಿ ಜೋಶಿ.
ಬರೇಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರವನ್ನು ಬಾಂಬ್ ಹಾಕಿ ಧ್ವಂಸಗೊಳಿಸಲಾಗುತ್ತದೆ ಎಂದು ದೂರವಾಣಿ ಕರೆ ಬಂದ ಹಿನ್ನೆಲೆಯಲ್ಲಿ ಬರೇಲಿ ಮೂಲದ 12 ವರ್ಷದ ಬಾಲಕ ಮತ್ತು ಆತನ ತಂದೆಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿ ನಂತರ ಮನೆಗೆ ಕಳುಹಿಸಿದ್ದಾರೆ.
.ಅಯೋಧ್ಯೆಯ ರಾಮಮಂದಿರಕ್ಕೆ ಬಾಂಬ್ ಬೆದರಿಕೆ: ಬಾಲಕನ ವಿಚಾರಣೆ.
ನವದೆಹಲಿ: ಮಹಿಳಾ ಮೀಸಲಾತಿ ಮಸೂದೆಗೆ ತಮ್ಮ ಸಂಪೂರ್ಣ ಬೆಂಬಲ ಘೋಷಿಸಿದ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ, ಮಸೂದೆಯನ್ನು ತಕ್ಷಣ ಜಾರಿಗೊಳಿಸುವುದರ ಜೊತೆಗೆ ಹಿಂದೂಳಿದ ವರ್ಗದ(ಒಬಿಸಿ) ಮಹಿಳೆಯರಿಗೂ ಸಮರ್ಪಕ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
.ಒಬಿಸಿ ಮಹಿಳೆಯರಿಗೂ ಮೀಸಲಾತಿ ಕೊಡಿ: ಸೋನಿಯಾ ಗಾಂಧಿ.
ಮುಂಬೈ: ಇಂಡಿಯಾ ರೇಟಿಂಗ್ಸ್ ಆ್ಯಂಡ್ ರಿಸರ್ಚ್ ಸಂಸ್ಥೆಯು ಭಾರತದ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಪ್ರಸಕ್ತ ಹಣಕಾಸು ವರ್ಷಕ್ಕೆ ಪರಿಷ್ಕರಣೆ ಮಾಡಿದ್ದು, ಶೇ 6.2ರಷ್ಟು ಆಗಲಿದೆ ಎಂದು ಹೇಳಿದೆ. ಈ ಮೊದಲು ಜಿಡಿಪಿ ಬೆಳವಣಿಗೆಯು ಶೇ 5.9ರಷ್ಟು ಆಗಲಿದೆ ಎನ್ನುವ ಅಂದಾಜನ್ನು ಸಂಸ್ಥೆ ಮಾಡಿತ್ತು.
.ಭಾರತದ ಜಿಡಿಪಿ ಬೆಳವಣಿಗೆ ಶೇ 6.2ರಷ್ಟು ಆಗಲಿದೆ: ಇಂಡಿಯಾ ರೇಟಿಂಗ್ಸ್.
ನವದೆಹಲಿ: ಪಂಜಾಬ್ ಮೂಲದ ಕೆನಡಾದ ಗಾಯಕ ಶುಭನೀತ್ ಸಿಂಗ್ ಅವರ ಭಾರತ ಪ್ರವಾಸವನ್ನು ಟಿಕೆಟ್ ಬುಕ್ಕಿಂಗ್ ಆ್ಯಪ್ ‘ಬುಕ್ ಮೈ ಷೋ’ ರದ್ದು ಮಾಡಿದೆ.

ಶುಭನೀತ್ ಸಿಂಗ್ ಖಾಲಿಸ್ತಾನಿಗಳ ಪರ ಸಹಾನುಭೂತಿ ಹೊಂದಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಳಕೆದಾರರು ಬುಕ್ ಮೈ ಷೋ ಆ್ಯಪ್ ಅನ್ನು ಬಹಿಷ್ಕರಿಸಿ ಎಂದು ಕರೆ ನೀಡಿದ್ದರು.
.ಕೆನಡಾ ಗಾಯಕ ಶುಭನೀತ್ ಸಿಂಗ್ ಕಾರ್ಯಕ್ರಮ ರದ್ದು ಮಾಡಿದ ಬುಕ್ ಮೈ ಷೋ.
ವಿಶ್ವಸಂಸ್ಥೆ: ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದರು.

ವಿಶ್ವಸಂಸ್ಥೆಯ ಸಾಮಾನ್ಯಸಭೆಯ 78ನೇ ಅಧಿವೇಶನದ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತ ಮತ್ತು ಪಾಕಿಸ್ತಾನ ಮಾತುಕತೆ ಮೂಲಕ ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡುಕೊಂಡರೆ ಕಣಿವೆ ರಾಜ್ಯದಲ್ಲಿ ಶಾಂತಿ ಸ್ಥಾಪನೆಯಾಗಲಿದೆ. ಜೊತೆಗೆ ಇದು ದಕ್ಷಿಣ ಏಷ್ಯಾದಲ್ಲಿ ಪ್ರಾದೇಶಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ದಾರಿ ಮಾಡಿಕೊಡಲಿದೆ ಎಂದು ಹೇಳಿದರು.
.ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಟರ್ಕಿ ಅಧ್ಯಕ್ಷ.
ವಾಷಿಂಗ್ಟನ್: ಸ್ವಯಂಚಾಲಿತ ರೋಬೊ ದೂರವಾಣಿ ಕರೆಗಳನ್ನು ಬಳಸಿಕೊಂಡು ಅಮೆರಿಕದಾದ್ಯಂತ ಹಲವು ಜನರನ್ನು ಬೆದರಿಸಿ ಸುಮಾರು ₹9.96 ಕೋಟಿ ಹಣ ವಸೂಲಿ ಮಾಡಿರುವ ‘ರೋಬೊಕಾಲ್ ಹಗರಣ’ದಲ್ಲಿ ಭಾಗಿಯಾದ ಇಬ್ಬರು ಭಾರತೀಯ ಪ್ರಜೆಗಳಿಗೆ 41 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

.ಅಮೆರಿಕ | ರೋಬೊಕಾಲ್ ಹಗರಣ: ಇಬ್ಬರು ಭಾರತೀಯರಿಗೆ ಜೈಲು ಶಿಕ್ಷೆ.
ಬೆಂಗಳೂರು: ಅಕ್ಟೋಬರ್ನಲ್ಲಿ ಪ್ರಾರಂಭವಾಗಲಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಹೊಸ ಜೆರ್ಸಿಯನ್ನು ಬಿಸಿಸಿಐ ಅನಾವರಣಗೊಳಿಸಿದೆ.

‘3 ಕಾ ಡ್ರೀಮ್’ ಹಾಡಿನ ಮೂಲಕ ನೂತನ ಜೆರ್ಸಿಯನ್ನು ಬಿಸಿಸಿಐ ಬಿಡುಗಡೆಗೊಳಿಸಿದೆ. ಖ್ಯಾತ ಗಾಯಕ ರಫ್ತಾರ್ ಅವರು ಹಾಡಿರುವ ಈ ಹಾಡಿಗೆ ಟೀಂ ಇಂಡಿಯಾದ ಆಟಗಾರರು ನೂತನ ಜೆರ್ಸಿ ತೊಟ್ಟು ಹೆಜ್ಜೆ ಹಾಕಿದ್ದಾರೆ.
.ICC World Cup 2023: ಟೀಂ ಇಂಡಿಯಾದ ನೂತನ ಜೆರ್ಸಿ ಅನಾವರಣಗೊಳಿಸಿದ ಬಿಸಿಸಿಐ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.