ನವದೆಹಲಿ: ಆದಿತ್ಯ ಎಲ್1 ಸೂರ್ಯ ವೀಕ್ಷಣಾಲಯವು ‘ನಾಸಾ’ದ ಇಎಸ್‌ಎ ಸೂರ್ಯ ಮತ್ತು ಸೌರಮಾರುತ ವೀಕ್ಷಣಾಲಯಕ್ಕೆ (ಎಸ್ಒಎಚ್‌ಒ) ಪರ್ಯಾಯವಾಗಬಹುದು ಎಂದು ಹೇಳಲಾಗಿದೆ.

ಆದಿತ್ಯ ಎಲ್1ನ ಸೂರ್ಯನ ಹೊರಮೇಲ್ಮೈಯ ವಾತಾವರಣವನ್ನು ನಿರಂತರವಾಗಿ ನಿಗಾವಹಿಸುವ ಮತ್ತು ದೂರಸಂವೇದಿ ಸಮೀಕ್ಷೆ ಸಾಮರ್ಥ್ಯ ಇದಕ್ಕೆ ಕಾರಣ ಎನ್ನುತ್ತಾರೆ ಈ ಯೋಜನೆಯಲ್ಲಿ ಭಾಗಿಯಾಗಿರುವ ವಿಜ್ಞಾನಿಗಳು.

ಅಂತಿಮ ಗಮ್ಯ ಸ್ಥಾನದಲ್ಲಿ ಆದಿತ್ಯ ಎಲ್1 ಅಲ್ಲದೇ ಇತರೆ ನಾಲ್ಕು ವೀಕ್ಷಣಾಲಯಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಗಾತ್ರದಲ್ಲಿ ಸಣ್ಣದಾಗಿರುವ ಮೂರು ವೀಕ್ಷಣಾಲಯಗಳು ‘ನಾಸಾ’ಗೆ ಸೇರಿದ್ದಾಗಿದ್ದು, ಸೀಮಿತ ಕಾರ್ಯವ್ಯಾಪ್ತಿ ಹೊಂದಿವೆ.

ಎಸ್‌ಒಎಚ್‌ಒ ವೀಕ್ಷಣಾಲಯವು ಬೃಹತ್ ಗಾತ್ರದ್ದಾಗಿದ್ದು, ಅಮೆರಿಕ ಮತ್ತು ಐರೋಪ್ಯ ಬಾಹ್ಯಾಕಾಶ ಏಜೆನ್ಸಿಯ ಜಂಟಿ ಸಹಭಾಗಿತ್ವದಲ್ಲಿದೆ. ಇದರಲ್ಲಿ ಸದ್ಯ ಕೊರೊನಾಗ್ರಾಫ್ಸ್ ಮಾತ್ರವೇ ಕಾರ್ಯನಿರತವಾಗಿದೆ.

ಸೌರಮಾರುತ ಮತ್ತು ಕಣಗಳ ಅಧ್ಯಯನ ಸಾಮರ್ಥ್ಯದಿಂದಾಗಿ ಆದಿತ್ಯ ಎಲ್1 ಈಗ ಎಸ್‌ಒಎಚ್‌ಒಗೆ ಪರ್ಯಾಯ ಆಗಲಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಸೌರ ಭೌತಶಾಸ್ತ್ರಜ್ಞ ದಿಬಯೇಂದು ನಂದಿ ಅವರು ತಿಳಿಸಿದರು.

ಎಸ್‌ಒಎಚ್‌ಒ 15 ನಿಮಿಷಕ್ಕೆ ಒಂದು ಚಿತ್ರ ಸೆರೆಹಿಡಿಯಲಿದೆ. ಆದಿತ್ಯದ ವಿಎಲ್‌ಸಿ ಉಪಕರಣ 15 ಸೆಕೆಂಡ್‌ಗೆ ಒಂದು ಚಿತ್ರ ಸೆರೆಹಿಡಿವ ಸಾಮರ್ಥ್ಯವೊಂದಿದ್ದು, ನಿತ್ಯ 5,760 ಚಿತ್ರಗಳನ್ನು ಸೆರೆಹಿಡಿಯಲಿದೆ ಎಂದು ಐಐಎ ಅಧಿಕಾರಿ ಆರ್.ರಮೇಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.