ಬೆಂಗಳೂರು: ಭಾರತದ ಮೊದಲ ಸೂರ್ಯಯಾನದ ಆದಿತ್ಯ ಎಲ್–1 ಬಾಹ್ಯಾಕಾಶ ನೌಕೆಯು ಸೂರ್ಯನ ಸುತ್ತಲಿನ ಮೊದಲ ಹ್ಯಾಲೊ ಆರ್ಬಿಟ್ ಭೂಮಿ ಮತ್ತು ಸೂರ್ಯನ ಸುತ್ತಲಿನ ಎಲ್–1 ಪಾಯಿಂಟ್ನ ಪರಿಭ್ರಮಣೆಯನ್ನು ಪೂರ್ಣಗೊಳಿಸಿದೆ.

ಕಳೆದ ವರ್ಷದ ಸೆಪ್ಟೆಂಬರ್ 2ರಂದು ಉಡ್ಡಯನಗೊಂಡಿದ್ದ ದ್ದ ಆದಿತ್ಯ ಎಲ್–1 ನೌಕೆಯು ಈ ವರ್ಷದ ಜನವರಿ 6ರಿಂದ ಹ್ಯಾಲೊ ಆರ್ಬಿಟ್ ಪರಿಭ್ರಮಣೆಯನ್ನು ಆರಂಬಿಸಿತ್ತು.

ಎಲ್–1 ಪಾಯಿಂಟ್ ಪರಿಭ್ರಮಣೆ ಪೂರ್ಣಗೊಳಿಸಲು 178 ದಿನಗಳನ್ನು ಇದು ತೆಗೆದುಕೊಂಡಿದೆ.

ಪರಿಭ್ರಮಣೆ ವೇಳೆ ನೌಕೆಗೆ ಅಂತರಿಕ್ಷದಲ್ಲಿ ಅನಿರೀಕ್ಷಿತ ಅಡ್ಡಿಗಳು ಎದುರಾಗುವ ಸಾಧ್ಯತೆ ಇತ್ತು. ಅವೆಲ್ಲವನ್ನು ಮೀರಿ ಈಗ ಗುರಿ ಮುಟ್ಟಿದೆ.

ಎಲ್1 ಪಾಯಿಂಟ್ ಸುತ್ತಲಿನ ಹ್ಯಾಲೊ ಆರ್ಬಿಟ್ಗೆ ಒಂದು ವೀಕ್ಷಣಾಲಯವನ್ನು ಸೇರಿಸುವ ಮೂಲಕ ಗ್ರಹಣ ಸೇರಿದಂತೆ ಯಾವುದೇ ಸಂದರ್ಭದಲ್ಲಿ ಸೂರ್ಯನ ವಾತಾವರಣವನ್ನು ನಿರಂತರವಾಗಿ ಗಮನಿಸುವ ಯೋಜನೆ ಇಸ್ರೋ ಅಧಿಕಾರಿಗಳದ್ದಾಗಿತ್ತು. ಇದರಲ್ಲಿ ನೌಕೆ ಯಶಸ್ವಿಯಾಗಿದೆಯೇ ಎಂಬ ಮಾಹಿತಿ ಇನ್ನಷ್ಟೆ ಸಿಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.