ತಿರುವನಂತಪುರಂ: ಕೇರಳದ ತಿರುವನಂತಪುರಂನ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ 10 ಅರ್ಚಕರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಅಕ್ಟೋಬರ್ 15 ರವರೆಗೆ ದೇವಸ್ಥಾನವನ್ನು ಬಂದ್ ಮಾಡಲಾಗಿದೆ.

ದೇಗುಲಯದ ಅಧಿಕಾರಿಗಳ ಪ್ರಕಾರ, ದೈನಂದಿನ ಪೂಜೆಯನ್ನು ತಂತ್ರಿಗಳು ನೆರವೇರಿಸುತ್ತಾರೆ. ಆದರೆ ಅಕ್ಟೋಬರ್ 15 ರವರೆಗೆ ದೇವಾಲಯ ಪ್ರವೇಶಿಸಲು ಭಕ್ತರಿಗೆ ಅನುಮತಿ ನೀಡಲಾಗಿಲ್ಲ.

ಲಾಕ್ಡೌನ್ ನಂತರ ಆಗಸ್ಟ್ 27ರಿಂದ ದೇವಾಲಯವನ್ನು ಮತ್ತೆ ತೆರೆಯಲಾಗಿತ್ತು. ಒಂದು ಬಾರಿಗೆ 35 ಭಕ್ತರಿಗೆ ಮಾತ್ರ ದೇವಾಲಯ ಪ್ರವೇಶಿಸಲು ಅನುಮತಿ ನೀಡಲಾಗಿತ್ತು ಮತ್ತು ದಿನದಲ್ಲಿ ಒಟ್ಟು 665 ಭಕ್ತರು ಮಾತ್ರ ದೇವರ ದರ್ಶನ ಪಡೆಯಲು ಅವಕಾಶ ನೀಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ದೇಗುಲದ ಹಲವು ಸಿಬ್ಬಂದಿಗೆ ಮತ್ತು ಅರ್ಚಕರಿಗೆ ಕೋವಿಡ್-19 ಸೋಂಕು ದೃಢಪಟ್ಟಿರುವುದರಿಂದಾಗಿ ದೇವಸ್ಥಾನವನ್ನು ಮತ್ತೆ ಕೆಲವು ದಿನಗಳವರೆಗೆ ಬಂದ್ ಮಾಡಲು ತೀರ್ಮಾನಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.