ಪ್ರಧಾನಿ ಮೋದಿ ಅವರು ತಮ್ಮ 2.5 ತಿಂಗಳ ಬಿಡುವಿಲ್ಲದ ವೇಳಾಪಟ್ಟಿಯಿಂದ ಸ್ವಲ್ಪ ವಿರಾಮ ತೆಗೆದುಕೊಂಡಿದ್ದಾರೆ. ಅವರ ಇಡೀ ಜೀವನವು ಭಾರತಕ್ಕೆ ಮುಡಿಪಾಗಿದೆ. ಅವರು 10 ವರ್ಷಗಳ ಕಾಲ ದೇಶದ ಸೇವೆ ಸಲ್ಲಿಸಿದ್ದಾರೆ. ವಿಶ್ವದಲ್ಲಿ ಭಾರತದ ಗೌರವವನ್ನು ಹೆಚ್ಚಿಸಿದ್ದಾರೆ.– ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶ ಮುಖ್ಯಮಂತ್ರಿ
ಲೋಕಸಭಾ ಚುನಾವಣೆಯ ಏಳನೇ ಹಾಗೂ ಕೊನೆಯ ಹಂತದ ಮತದಾನ ಶನಿವಾರ ನಡೆಯಲಿದ್ದು, 57 ಕ್ಷೇತ್ರಗಳಲ್ಲಿ ಮತದಾನಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಣದಲ್ಲಿರುವ ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರದಲ್ಲೂ ಇಂದು ಮತದಾನ ನಡೆಯಲಿದೆ.
ಇಂದು ಬೆಳಿಗ್ಗೆ 6.40 ಗಂಟೆಗೆ ಬೇನಿಮಾಧವಪುರ ಎಫ್‌ಪಿ ಶಾಲೆಯ ಬಳಿ ಸೆಕ್ಟರ್ ಆಫೀಸರ್‌ನ ಮೀಸಲು ಇವಿಎಂಗಳು ಮತ್ತು ಪೇಪರ್‌ಗಳನ್ನು, ಸ್ಥಳೀಯ ಜನರು ಲೂಟಿ ಮಾಡಿದ್ದಾರೆ. 2 VVPAT ಯಂತ್ರಗಳನ್ನು ಚರಂಡಿಗೆ ಎಸೆಯಲಾಗಿದೆ. ಸೆಕ್ಟರ್ ಅಧಿಕಾರಿ ಎಫ್‌ಐಆರ್ ದಾಖಲಿಸಿದ್ದಾರೆ. ಸೆಕ್ಟರ್‌ನ ಎಲ್ಲಾ ಆರು ಬೂತ್‌ಗಳಲ್ಲಿ ಹೊಸ ಇವಿಎಂ ಮತ್ತು ಪೇಪರ್‌ಗಳನ್ನು ಅಧಿಕಾರಿಗೆ ಒದಗಿಸಲಾಗಿದೆ– ಪಶ್ಚಿಮ ಬಂಗಾಳ ಚುನಾವಣಾ ಆಯೋಗ
ಪ್ರಧಾನಿ ಮೋದಿಯವರಿಗೆ ಜನ ಆಶೀರ್ವಾದ ಮಾಡಲಿದ್ದಾರೆ. ಎನ್‌ಡಿಎ 400 ಸೀಟು ದಾಟಲಿದೆ. ಇಡೀ ದೇಶವೇ 400 ಗಡಿ ದಾಟುವ ಬಗ್ಗೆ ಚರ್ಚೆ ನಡೆಸುತ್ತಿದೆ. ಆದರೆ ಋಣಾತ್ಮಕ ರಾಜಕೀಯ ಮಾಡಿದವರು ಸಂವಿಧಾನ ಬದಲಾವಣೆಗೆ 400 ಸೀಟು ಬೇಕು ಎನ್ನುತ್ತಿದ್ದಾರೆ. ಅವರು ಕಳೆದ 75 ವರ್ಷಗಳಿಂದ ಒಡೆದು ಆಳುವ ತತ್ವದ ಮೇಲೆ ಕೆಲಸ ಮಾಡಿದ್ದಾರೆ. ಪ್ರಧಾನಿ ಮೋದಿಯವರು ತಮ್ಮ ಸಕಾರಾತ್ಮಕ ರಾಜಕೀಯದಿಂದ ವಿಕಸನಗೊಂಡ ಭಾರತವನ್ನು ಮುನ್ನಡೆಸುವ ಕೆಲಸವನ್ನು ಮಾಡಿದ್ದಾರೆ.– ಜೆ.ಪಿ ನಡ್ಡಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ
ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನ ಇಂದು ನಡೆಯುತ್ತಿದೆ. ಪ್ರಜಾಪ್ರಭುತ್ವದ ಈ ಮಹಾನ್ ಹಬ್ಬದಲ್ಲಿ ಎಲ್ಲಾ ಮತದಾರರು ಉತ್ಸಾಹದಿಂದ ಭಾಗವಹಿಸಬೇಕೆಂದು ನಾನು ವಿನಂತಿಸುತ್ತೇನೆ. ಯುವ ಮತ್ತು ಮಹಿಳಾ ಮತದಾರರು ದಾಖಲೆ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ನಾವೆಲ್ಲರೂ ಒಟ್ಟಾಗಿ ನಮ್ಮ ಪ್ರಜಾಪ್ರಭುತ್ವವನ್ನು ಇನ್ನಷ್ಟು ಶಕ್ತಿಯುತಗೊಳಿಸೋಣ.- ನರೇಂದ್ರ ಮೋದಿ, ಪ್ರಧಾನಿ
ಹಿಮಾಚಲದ ಜನತೆಗೆ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ನಾನು ಮನವಿ ಮಾಡುತ್ತೇನೆ. ಕಳೆದ 14 ತಿಂಗಳುಗಳಲ್ಲಿ ನಮ್ಮ ಸರ್ಕಾರವನ್ನು ಉರುಳಿಸಲು ಪ್ರಯತ್ನಗಳು ನಡೆದಿವೆ. ಬಿಜೆಪಿ ರಚನೆಗೆ ಪ್ರಯತ್ನಿಸಿದೆ. ಸರ್ಕಾರ ಕೆಡವಲು ಹಣಬಲವನ್ನು ಬಳಸುತ್ತಿದೆ. ನಮ್ಮ ಸರ್ಕಾರ ಮುಂದಿನ ಮೂರುವರೆ ವರ್ಷಗಳ ಕಾಲ ಅಧಿಕಾರದಲ್ಲಿ ಇರಲಿದೆ.– ಸುಖ್ವಿಂದರ್ ಸಿಂಗ್ ಸುಖು, ಹಿಮಾಚಲ ಪ್ರದೇಶ ಮುಖ್ಯಮಂತ್ರಿ