ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಧ್ಯಕ್ಷತೆಯಲ್ಲಿ ಇಂದು (ಶುಕ್ರವಾರ) ನಡೆದ ದೇಶದ 75ನೇ ಗಣರಾಜ್ಯೋತ್ಸವದಲ್ಲಿ ಸೇನೆಯ ಶಕ್ತಿ, ನಾರಿ ಶಕ್ತಿ ಹಾಗೂ ದೇಶದ ಶ್ರೀಮಂತ ಸಂಸ್ಕೃತಿ ಅನಾವರಣಗೊಂಡಿತು.

ರಾಷ್ಟ್ರ ರಾಜಧಾನಿಯಲ್ಲಿರುವ ಕರ್ತವ್ಯ ಪಥದಲ್ಲಿ ನಡೆದ 90 ನಿಮಿಷಗಳ ಪರೇಡ್‌ನಲ್ಲಿ ದೇಶದ ನಾರಿ ಶಕ್ತಿ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ಅನಾವರಣಕ್ಕೆ ಮುಖ್ಯ ಅತಿಥಿ ಫ್ರಾನ್ಸ್‌ನ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರಾನ್ ಸಾಕ್ಷಿಯಾದರು.

ಸಶಸ್ತ್ರ ಪಡೆಗಳು ದೇಶೀಯವಾಗಿ ಅಭಿವೃದ್ಧಿಪಡಿಸಿದ ಶಸ್ತ್ರಾಸ್ತ್ರಗಳನ್ನು ಪ್ರದರ್ಶನಗೊಂಡವು. ಇದರಲ್ಲಿ ಕ್ಷಿಪಣಿ, ಡ್ರೋನ್ ಆಧಾರಿತ ಜಾಮರ್, ವಿಚಕ್ಷಣಾ ವ್ಯವಸ್ಥೆ ಸೇರಿದಂತೆ ಹಲವು ಹೊಸ ಅತ್ಯಾಧುನಿಕ ಸಾಧನಗಳು ಪರಿಚಯಗೊಂಡವು.

ದೇಶದ ಮೂರೂ ಸೇನೆಗಳ ಮಹಿಳಾ ತುಕಡಿಗಳು ಮೊಟ್ಟ ಮೊದಲ ಬಾರಿಗೆ ಪರೇಡ್‌ನಲ್ಲಿ ಪಾಲ್ಗೊಂಡಿದ್ದವು. ಲೆಫ್ಟೆನೆಂಟ್ ದೀಪ್ತಿ ರಾಣಾ ಹಾಗೂ ಪ್ರಿಯಾಂಕಾ ಸೇವ್ಡಾ ಸೇರಿದಂತೆ ಸಶಸ್ತ್ರ ಸೇನಾಪಡೆಗೆ ಕಳೆದ ವರ್ಷ ದಾಖಲಾದ 10 ಮಹಿಳಾ ಅಧಿಕಾರಿಗಳು ಶಸ್ತ್ರಾಸ್ತ್ರ ಪತ್ತೆ ಮಾಡುವ ರ‍್ಯಾಡಾರ್ ‘ಸ್ವಾತಿ’ ಹಾಗೂ ರಾಕೆಟ್ ವ್ಯವಸ್ಥೆ ‘ಪ್ರಿಯಾಂಕಾ’ ಅನ್ನು ಪ್ರತಿನಿಧಿದ್ದರು.

ಪರೇಡ್‌ನಲ್ಲಿ 100 ಮಹಿಳಾ ಕಲಾವಿದರು ಒಳಗೊಂಡ ಭಾರತೀಯ ಸಂಗೀತ ಸಾಧನಗಳನ್ನು ನುಡಿಸಿದರು. ಇದೇ ಮೊದಲ ಬಾರಿಗೆ ಮಿಲಿಟರಿ ಬ್ಯಾಂಡ್ ಬದಲು ಶಂಖ, ನಾದಸ್ವರ, ನಾಗದ ಸಂಗೀತ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮೊಳಗಿದವು.

15 ಮಹಿಳಾ ಪೈಲೆಟ್‌ರನ್ನು ಒಳಗೊಂಡ ಭಾರತೀಯ ವಾಯುಪಡೆಯ ವಿಮಾನಗಳು ಪೆರೇಡ್ ಸಂದರ್ಭದಲ್ಲಿ ಫ್ಲೈ ಪಾಸ್ಟ್ ನಡೆಸಿದವು. ಮಹಿಳಾ ಅಧಿಕಾರಿಗಳನ್ನೇ ಒಳಗೊಂಡ ಕೇಂದ್ರ ಸಶಸ್ತ್ರ ಮೀಸಲುಪಡೆಯ ತುಕಡಿ ಈ ಬಾರಿ ಪರೇಡ್‌ನಲ್ಲಿ ಭಾಗವಹಿಸಿತ್ತು.

ಬೆಳಿಗ್ಗೆ 10.30ಕ್ಕೆ ಪರೇಡ್ ಆರಂಭ

ಗಣರಾಜ್ಯೋತ್ಸವ ಪರೇಡ್ ಬೆಳಿಗ್ಗೆ 10.30ಕ್ಕೆ ಆರಂಭವಾಗಿ 90 ನಿಮಿಷಗಳ ಕಾಲ ನಡೆಯಿತು. ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿ ದೇಶಕ್ಕಾಗಿ ಪ್ರಾಣ ಸಮರ್ಪಿಸಿದ ಯೋಧರಿಗೆ ಗೌರವ ನಮನ ಸಲ್ಲಿಸುವ ಮೂಲಕ ಗಣರಾಜ್ಯೋತ್ಸವ ಕಾರ್ಯಕ್ರಮ ಆರಂಭವಾಯಿತು.

40 ವರ್ಷಗಳ ನಂತರ ಸಾಂಪ್ರದಾಯಿಕ ಸಾರೋಟು ಬಳಕೆ

ಇದಾದ ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಮುಖ್ಯ ಅತಿಥಿ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ಅವರು ಸಾಂಪ್ರದಾಯಿಕ ಸಾರೋಟಿನಲ್ಲಿ ಕರ್ತವ್ಯ ಪಥಕ್ಕೆ ಆಗಮಿಸಿದರು. 40 ವರ್ಷಗಳ ಹಿಂದೆ ಇದು ಸ್ಥಗಿತಗೊಂಡಿತ್ತು. 2024ರಲ್ಲಿ ಇದನ್ನು ಮರಳಿ ಪರಿಚಯಿಸಲಾಗುತ್ತಿದೆ ಎಂದು ರಕ್ಷಣಾ ಸಚಿವಾಲಯ ಹೇಳಿತ್ತು.

ರಾಷ್ಟ್ರಧ್ವಜಾರೋಹಣ, ರಾಷ್ಟ್ರಗೀತೆ, ದೇಶೀಯವಾಗಿ ನಿರ್ಮಾಣಗೊಂಡ 105 ಮಿ.ಮೀ. ಬಂದೂಕಿನಿಂದ 21 ಕುಶಾಲತೋಪು, ಕರ್ತವ್ಯಪಥದ ಮೇಲೆ 105 ಹೆಲಿಕಾಪ್ಟರ್ ತುಕಡಿಯ ನಾಲ್ಕು ಎಂಐ–17IV ಹೆಲಿಕಾಪ್ಟರ್‌ಗಳಿಂದ ಹೂಮಳೆ, 100 ಮಹಿಳಾ ಕಲಾವಿದರಿಂದ ಸಂಗೀತ ಕಾರ್ಯಕ್ರಮ ‘ಆವಾಹನ್’ ನಡೆಯಿತು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗೌರವ ವಂದನೆ ಸ್ವೀಕರಿಸಿದರು. ಪರೇಡ್ ನೇತೃತ್ವವನ್ನು ಲೆಫ್ಟಿನೆಂಟ್ ಜನರಲ್ ಭವನೀಶ್ ಕುಮಾರ್ ವಹಿಸಿದ್ದರು.

ಫ್ರೆಂಚ್ ತುಕಡಿ, ವಿಮಾನಗಳು ಭಾಗಿ

ಫ್ರೆಂಚ್ ಸಶಸ್ತ್ರ ಮೀಸಲುಪಡೆಯ ಬ್ಯಾಂಡ್ ಹಾಗೂ ಮಾರ್ಚ್‌ಗೆ ಕರ್ತವ್ಯ ಪಥ ಸಾಕ್ಷಿಯಾದವು. 30 ಸದಸ್ಯಬಲದ ಬ್ಯಾಂಡ್ ತಂಡ ಹಾಗೂ 90 ಸದಸ್ಯಬಲದ ಮಾರ್ಚಿಂಗ್ ತಂಡವು ಪಾಲ್ಗೊಂಡಿತ್ತು. ಈ ತಂಡವನ್ನು ಕ್ಯಾಪ್ಟನ್ ಖೌರ್ಡಾ ಮುನ್ನಡೆಸಿದ್ದು, ಇದರಲ್ಲಿ ಆರು ಭಾರತೀಯರೂ ಇದ್ದರು.

ಮಲ್ಟಿ ರೋಲರ್ ಟ್ಯಾಂಕ್ ಸಾಗಿಸುವ ವಿಮಾಣ ಹಾಗೂ 2 ರಾಫೆಲ್ ಯುದ್ಧ ವಿಮಾನಗಳು ಈ ಬಾರಿ ಕರ್ತವ್ಯ ಪಥದ ಮೇಲೆ ಹಾರಾಟ ನಡೆಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.