ನವದೆಹಲಿ: ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್ಪಿಸಿ) ಸೆಕ್ಷನ್ 125ರಡಿ ಮುಸ್ಲಿಂ ಮಹಿಳೆ ಕೂಡ ತನ್ನ ಪತಿಯಿಂದ ಜೀವನಾಂಶ ಪಡೆಯಲು ಅರ್ಹಳು ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.

ಇದು ಧರ್ಮದ ಹಂಗಿಲ್ಲದೆ ಎಲ್ಲಾ ಮಹಿಳೆಯರಿಗೂ ಅನ್ವಯಿಸುತ್ತದೆ ಎಂದು ಕೋರ್ಟ್ ಹೇಳಿದೆ.
.ಅಂಗವಿಕಲರ ಬಗ್ಗೆ ಪೂರ್ವಗ್ರಹ ಸಲ್ಲದು: ಸುಪ್ರೀಂ ಕೋರ್ಟ್ .
ನ್ಯಾಯಮೂರ್ತಿಗಳಾದ ಬಿ.ವಿ ನಾಗರತ್ನ ಹಾಗೂ ಅಗಸ್ಟಿನ್ ಜಾರ್ಜ್ ಮೈಶ್ ಅವರಿದ್ದ ಪೀಠವು ಈ ಬಗ್ಗೆ ಬೇರೆ ಬೇರೆ ತೀರ್ಪು ಪ್ರಕಟಿಸಿದರೂ, ಒಮ್ಮತದ ತೀರ್ಪು ನೀಡಿತು. ಸಿಆರ್ಪಿಸಿಯ ಸೆಕ್ಷನ್ 125ರಡಿ ಎಲ್ಲಾ ಮಹಿಳೆಯರಿಗೆ ಜೀವನಾಂಶದ ಹಕ್ಕುಇದ್ದು, ಮುಸ್ಲಿಂ ಮಹಿಳೆಯರೂ ಇದರಲ್ಲಿ ಸೇರುತ್ತಾರೆ ಎಂದು ಹೇಳಿದೆ.

‘ಸೆಕ್ಷನ್ 125 ಕೇವಲ ವಿವಾಹವಾದ ಮಹಿಳೆಯರಿಗೆ ಮಾತ್ರವಲ್ಲ, ಎಲ್ಲಾ ಮಹಿಳೆಯರಿಗೂ ಅನ್ವಯವಾಗುತ್ತದೆ’ ಎಂದು ತೀರ್ಪು ಪ್ರಕಟಿಸುವ ವೇಳೆ ನ್ಯಾ. ನಾಗರತ್ನ ಹೇಳಿದರು.
.ಸಂದೇಶ್ಖಾಲಿ ಪ್ರಕರಣ: ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ.
‘ಜೀವನಾಂಶ ಪಡೆಯುವುದು ವಿವಾಹವಾದ ಎಲ್ಲಾ ಮಹಿಳೆಯರ ಹಕ್ಕು. ಅದು ದಾನವಲ್ಲ. ಇದು ಧರ್ಮದ ಹಂಗಿಲ್ಲದೆ ಎಲ್ಲಾ ಮಹಿಳೆಯರಿಗೂ ಅನ್ವಯ’ ಎಂದು ಪೀಠ ಹೇಳಿತು.

ಆ ಮೂಲಕ ಪತ್ನಿಗೆ ಜೀವನಾಂಶ ನೀಡಬೇಕು ಎಂದು ಕೌಟುಂಬಿಕ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದ ತೆಲಂಗಾಣ ಹೈಕೋರ್ಟ್ನ ನಿರ್ಧಾರ ಪ್ರಶ್ನಿಸಿ ಮೊಹಮದ್ ಅಬ್ದುಲ್ ಸಮದ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತು.
.ಮದುವೆ ಆಗದ ಮಗಳಿಗೆ ಪಾಲಕರಿಂದ ಜೀವನಾಂಶ ಪಡೆಯುವ ಹಕ್ಕಿದೆ– ಅಲಹಾಬಾದ್ ಹೈಕೋರ್ಟ್.
ವಿಚ್ಚೇದನಗೊಂಡ ಮುಸ್ಲಿಂ ಮಹಿಳೆ ಈ ಸೆಕ್ಷನ್ನಡಿ ಜೀವನಾಂಶ ಪಡೆಯಲು ಅರ್ಹರಲ್ಲ ಎಂದು ಅರ್ಜಿದಾರರು ವಾದಿಸಿದ್ದರು.
.‘ನಿರುದ್ಯೋಗಿ’ ಪತಿಗೆ ಜೀವನಾಂಶ ನೀಡಲು ಪತ್ನಿಗೆ ಕೌಟುಂಬಿಕ ನ್ಯಾಯಾಲಯ ಸೂಚನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.