ಅಗರ್ತಲಾ: ಇಬ್ಬರು ಸ್ನೇಹಿತರೊಂದಿಗಿನ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ವಿಷಯಕ್ಕೆ ಕೋಪಗೊಂಡ ಪತಿ ತನ್ನ ಪತ್ನಿ ಮತ್ತು ಅತ್ತೆಯನ್ನು ಕೊಂದಿರುವ ಘಟನೆ ತ್ರಿಪುರಾದ ನೇತಾಜಿನಗರದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಒಂದೂವರೆ ವರ್ಷದಿಂದ ದಂಪತಿ ಬೇರೆ ಬೇರೆ ಇದ್ದರು. ಪತ್ನಿ ವಿಚ್ಛೇಧನ ಕೋರಿ ಪತಿಯ ವಿರುದ್ಧ ದೂರು ದಾಖಲಿಸಿದ್ದರು. ವ್ಯಕ್ತಿ ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ಸೆಪಹಿಜಾಲ ಜಿಲ್ಲೆಯ ಮಧುಪುರದಲ್ಲಿ ವಾಸವಾಗಿದ್ದರು. ಪತ್ನಿ ಆಕೆಯ ತಾಯಿಯೊಂದಿಗೆ ತ್ರಿಪುರಾದ ನೇತಾಜಿನಗರದಲ್ಲಿ ಒಂದೂವರೆ ವರ್ಷಗಳಿಂದ ಜೊತೆಗಿದ್ದರು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ದುರ್ಗಾ ಪೂಜೆಯ ಹಬ್ಬದ ಸಂದರ್ಭದಲ್ಲಿ ತನ್ನ ಇಬ್ಬರು ಸ್ನೇಹಿತರೊಂದಿಗಿನ ಫೋಟೊವನ್ನು ಪತ್ನಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಫೋಟೊ ನೋಡಿ ಕೋಪಗೊಂಡ ಪತಿ ಆಕೆಯನ್ನು ಸಾಯಿಸಲು ಸಂಚು ರೂಪಿಸಿದ್ದಾನೆ. ಬಳಿಕ ಮನೆಗೆ ಹಿಂದಿರುಗಿದ ತಾಯಿ ಮತ್ತು ಮಗಳ ಮೇಲೆ ಚೂಪಾದ ಆಯುಧದಿಂದ ಹಲ್ಲೆ ನಡೆಸಿದ್ದಾನೆ. ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಕುಮಾರ್ ತಿಳಿಸಿದ್ದಾರೆ.

ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.