ನವದೆಹಲಿ: ರಾಷ್ಟ್ರದ ರಾಜಧಾನಿಯಲ್ಲಿ ಸತತ ಮೂರನೇ ದಿನವಾದ ಮಂಗಳವಾರವೂ ದಟ್ಟವಾದ ವಿಷಕಾರಿ ಹೊಗೆ ಹಾಗೂ ಮಂಜು (ಹೊಂಜು) ಮುಸುಕಿದ ವಾತಾವರಣ ಮುಂದುವರಿಯಿತು. ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) 488ಕ್ಕೆ ಮುಟ್ಟಿ, ‘ತೀವ್ರ ಅಪಾಯ’ದ ಹಂತ ತಲುಪಿತ್ತು.

ಮಾಲಿನ್ಯದ ನಡುವೆಯೇ ತಾಪಮಾನ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ದೆಹಲಿ ಸುತ್ತಲಿನ ಪ್ರದೇಶಗಳಲ್ಲಿ ಕೃಷಿ ಜಮೀನಲ್ಲಿ ಕೂಳೆ ಸುಡುತ್ತಿರುವ ಪ್ರಮಾಣವು ಗಮನಾರ್ಹ ಮಟ್ಟದಲ್ಲಿರುವ ಕಾರಣ, ಜನಜೀವನ ಮತ್ತಷ್ಟು ಬಿಗಡಾಯಿಸಿದೆ.

ತಾಪಮಾನ ಇಳಿಕೆ: ದೆಹಲಿಯ ತಾಪಮಾನವು ಸೋಮವಾರ ರಾತ್ರಿ 12.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ನಗರದ ವಾಯು ಗುಣಮಟ್ಟ ಸೂಚ್ಯಂಕವು ಮಂಗಳವಾರ ಬೆಳಿಗ್ಗೆ 9ಕ್ಕೆ 488 ದಾಖಲಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ದತ್ತಾಂಶಗಳು ದೃಢಪಡಿಸಿವೆ.

ರಾಜಧಾನಿಯಲ್ಲಿರುವ 32 ಮೇಲ್ವಿಚಾರಣಾ ಕೇಂದ್ರಗಳ ಪೈಕಿ 31ರಲ್ಲಿ ಎಕ್ಯೂಐ ಪ್ರಮಾಣವು 480ಕ್ಕಿಂತಲೂ ಹೆಚ್ಚು ದಾಖಲಾಗಿದೆ. ಅಲಿಪುರ್ ಹಾಗೂ ಸೋನಿಯಾ ವಿಹಾರ್ನಲ್ಲಿ 500ರ ಗಡಿ ದಾಟಿದೆ. ಕಳೆದ ಆರು ವರ್ಷದ ಬಳಿಕ ನ.18ರಂದು ದೆಹಲಿಯಲ್ಲಿ ಎಕ್ಯೂಐ ಪ್ರಮಾಣವು 494 ಗಡಿದಾಟಿತ್ತು ಎಂದು ತಿಳಿಸಿದೆ.

‘ಪಂಜಾಬ್, ಹರಿಯಾಣ, ದೆಹಲಿಯಲ್ಲಿ ವಾಯವ್ಯ ಮಾರುತಗಳಿದ್ದು, ತೇವಾಂಶವು ಮಾಲಿನ್ಯಕಾರಕ ವಸ್ತುಗಳನ್ನು ಹಿಡಿದಿಟ್ಟುಕೊಳ್ಳುತ್ತಿವೆ’ ಎಂದು ಸ್ಕೈಮೆಟ್ ವೆದರ್ ಸಂಸ್ಥೆಯ ಉಪಾಧ್ಯಕ್ಷ ಮಹೇಶ್ ಪಲಾವತ್ ತಿಳಿಸಿದರು.

‘ಗಾಳಿಯ ವೇಗವೂ ಏರಿಕೆಯಾಗದಿದ್ದರೆ ಮುಂದಿನ ಮೂರು ದಿನಗಳ ಕಾಲ ಮಾಲಿನ್ಯವೂ ಇದೇ ರೀತಿ ಮುಂದುವರಿಯಲಿದೆ. ಈ ವಾರಾಂತ್ಯದಲ್ಲಿ ಮಳೆಯಾಗುವ ನಿರೀಕ್ಷೆಯಿದ್ದು, ಮಾಲಿನ್ಯದ ಪ್ರಮಾಣವು ಇಳಿಕೆಯಾಗಬಹುದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಂಗಳವಾರ ನಗರದ ಪ್ರಮುಖ ರಸ್ತೆಗಳಲ್ಲಿ ಬೆಳಿಗ್ಗೆ 8.30ರ ಸುಮಾರಿಗೆ 400 ಮೀಟರ್ವರೆಗೆ ರಸ್ತೆ ಗೋಚರತೆ ಇತ್ತು. ದಿನದ ಗರಿಷ್ಠ ತಾಪಮಾನವು 24 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಐಎಂಡಿ ತಿಳಿಸಿದೆ.

ಹೆಚ್ಚಿದ ಮಾಲಿನ್ಯ; ಬದಲಾವಣೆಗಳು ಏನೇನು?

ನ.18ರಂದು ದೆಹಲಿ ಮೆಟ್ರೊದಲ್ಲಿ 78.67 ಲಕ್ಷ ಪ್ರಯಾಣಿಕರು ಪ್ರಯಾಣ– ಈ ವರ್ಷದಲ್ಲೇ ಇದು ಗರಿಷ್ಠ ಸಂಖ್ಯೆಯಾಗಿದೆ

ವರ್ಕ್ ಫ್ರಮ್ ಹೋಮ್ ನಡೆಸಲು ಕಂಪನಿಗಳಿಗೆ ದೆಹಲಿ ಸರ್ಕಾರ ಮನವಿ

ಸಮ–ಬೆಸ ಸಂಖ್ಯೆಯ ನೋಂದಣಿ ಹೊಂದಿದ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲು ಚಿಂತನೆ

ಕಟ್ಟಡ ನಿರ್ಮಾಣ ಸ್ಥಗಿತ– ಕಾರ್ಮಿಕರಿಗಿಲ್ಲ ಉದ್ಯೋಗ

ಎನ್ಸಿಆರ್ ವ್ಯಾಪ್ತಿಯಲ್ಲಿ ಶಾಲೆಗಳಲ್ಲಿ ಆನ್ಲೈನ್ ತರಗತಿ

ಮೀರತ್ (ಉತ್ತರಪ್ರದೇಶ): ಮಾಲಿನ್ಯ ಮಿತಿಮೀರಿದ್ದರಿಂದ ರಾಷ್ಟ್ರ ರಾಜಧಾನಿ ಪ್ರದೇಶ (ಎನ್ಸಿಆರ್) ವ್ಯಾಪ್ತಿಗೆ ಒಳಪಡುವ ಉತ್ತರಪ್ರದೇಶ ಪಶ್ಚಿಮ ಭಾಗದ 8 ಜಿಲ್ಲೆಗಳ ಶಾಲೆಗಳ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿ ನಡೆಸುವಂತೆ ಸೂಚಿಸಲಾಗಿದೆ. ಮೀರತ್ ಗಾಜಿಯಾಬಾದ್ ಗೌತಮ್ ಬುದ್ಧ್ ನಗರ ಬುಲಂದ್ಶಹರ ಬಾಗ್ಪತ್ ಹಾಪುರ್ (ಮೀರತ್ ವಿಭಾಗ) ಹಾಗೂ ಮುಜಾಫುರ್ನಗರ ಶಾಮಲಿ ಜಿಲ್ಲೆಗಳಲ್ಲಿ ಭೌತಿಕ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ. ಎನ್ಸಿಆರ್ ದೆಹಲಿ ವ್ಯಾಪ್ತಿಗೆ ಹರಿಯಾಣದ 14 ಜಿಲ್ಲೆಗಳು ರಾಜಸ್ಥಾನದ ಎರಡು ಜಿಲ್ಲೆ ಉತ್ತರ ಪ್ರದೇಶದ 8 ಜಿಲ್ಲೆಗಳು ಒಳಪಡುತ್ತವೆ. ಈ ಭಾಗಗಳಲ್ಲಿ ತ್ಯಾಜ್ಯಕ್ಕೆ ಬೆಂಕಿ ಹಾಕುವುದು ಕಟ್ಟಡಗಳ ನಿರ್ಮಾಣಕ್ಕೆ ನಿರ್ಬಂಧ ವಿಧಿಸಿದ್ದು ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು ಎಂದು ಜಿಲ್ಲಾಡಳಿತಗಳು ಎಚ್ಚರಿಕೆ ನೀಡಿದೆ. ಡಿಯು–ಜೆಎನ್ಯುನಲ್ಲಿ ಆನ್ಲೈನ್ ತರಗತಿ: ಇಲ್ಲಿನ ದೆಹಲಿ ವಿಶ್ವವಿದ್ಯಾಲಯವು ನ.23 ಜವಾಹರ್ಲಾಲ್ ನೆಹರೂ ವಿಶ್ವವಿದ್ಯಾಲಯವು ನ.22 ಜಾಮಿಯಾ ಮಿಲಿಯಾ ಇಸ್ಲಾಮಿಯಾ ನ.24 ರವರೆಗೆ ಆನ್ಲೈನ್ ತರಗತಿ ನಡೆಸಲು ನಿರ್ಧರಿಸಿವೆ. ನ.25ರಿಂದ ಭೌತಿಕ ತರಗತಿಗಳು ಆರಂಭವಾಗಲಿವೆ ಎಂದು ದೆಹಲಿ ವಿಶ್ವವಿದ್ಯಾಲಯದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಕೃತಕ ಮಳೆ ಸುರಿಸಲು ಅವಕಾಶ ನೀಡಿ– ಕೇಂದ್ರಕ್ಕೆ ಆಗ್ರಹ

‘ಕೃತಕ ಮಳೆಗಾಗಿ ಮೋಡ ಬಿತ್ತನೆ ನಡೆಸಲು ತುರ್ತಾಗಿ ಅವಕಾಶ ನೀಡಬೇಕು ಎಂದು ಕೋರಿ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರಿಗೆ ನಾಲ್ಕು ಬಾರಿ ಪತ್ರ ಬರೆಯಲಾಗಿದೆ ಯಾವುದೇ ಉತ್ತರ ಬಂದಿಲ್ಲ’ ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರಾಯ್ ತಿಳಿಸಿದ್ದಾರೆ. ವಾಯುಮಾಲಿನ್ಯ ಮಿತಿಮೀರಿದ್ದು ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಿದ್ದಾರೆ. ‘ಆ.30 ಅ.10 ಅ.23ಕ್ಕೆ ಪತ್ರ ಬರೆದು ಪರಿಸ್ಥಿತಿಯ ಕುರಿತು ತಿಳಿಸಿದ್ದರೂ ಯಾವುದೇ ಉತ್ತರ ಬಂದಿಲ್ಲ. ಮೋಡ ಬಿತ್ತನೆಗೆ ತಗುಲುವ ಖರ್ಚು ನಿಭಾಯಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ಆದರೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಕೇಂದ್ರ ಗೃಹ ಸಚಿವಾಲಯ (ಎಂಎಚ್ಎ) ರಕ್ಷಣಾ ಇಲಾಖೆಯ ಅನುಮತಿಯೂ ಅಗತ್ಯ’ ಎಂದು ಅವರು ತಿಳಿಸಿದರು.

ವರ್ಚುವಲ್ ಅರ್ಜಿ ವಿಚಾರಣೆ: ಸಿಜೆಐ ಸೂಚನೆ

‘ಎಲ್ಲೆಲ್ಲಿ ಸಾಧ್ಯವೋ ಅಂತಹ ನ್ಯಾಯಾಲಯಗಳಲ್ಲಿ ವರ್ಚುವಲ್ (ಆನ್ಲೈನ್ ಮೂಲಕ) ವಿಚಾರಣೆಗೆ ಅನುಮತಿ ನೀಡಬಹುದು’ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಮಂಗಳವಾರ ಇತರೆ ನ್ಯಾಯಮೂರ್ತಿಗಳಿಗೆ ಸೂಚನೆ ನೀಡಿದ್ದಾರೆ. ಖನ್ನಾ ಹಾಗೂ ನ್ಯಾಯಮೂರ್ತಿ ಸಂಜಯ್ ಕುಮಾರ್ ಪೀಠದ ಮುಂದೆ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ (ಎಸ್ಸಿಬಿಎ) ಕಪಿಲ್ ಸಿಬಲ್ ಇತರೆ ವಕೀಲರು ಮನವಿ ಮಾಡಿಕೊಂಡರು. ‘ನ್ಯಾಯಾಲಯದಲ್ಲಿ ಸಂಪೂರ್ಣ ವರ್ಚುವಲ್ ವಿಚಾರಣೆ ನಡೆಸಲು ಅನುಮತಿ ನೀಡಬೇಕು ಎಂಬ ಮನವಿ ತಿರಸ್ಕರಿಸಿದ ಸಿಜೆಐ ವಕೀಲರು ಆನ್ಲೈನ್ ಮೂಲಕ ಹಾಜರಾಗಲು ಅವಕಾಶವಿದೆ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.