ಹಿಂದೂಗಳ ಭಾವನೆ ಮತ್ತು ನಮ್ಮ ಹಬ್ಬಗಳ ಬಗ್ಗೆ ಟೀಕೆ ಮಾಡುತ್ತಿರುವ ವಿರೋಧ ಪಕ್ಷದ ನಾಯಕರ ನಿಲುವನ್ನು ಖಂಡಿಸುತ್ತೇನೆ.–ಪೀಯೂಷ್ ಗೋಯಲ್, ಕೇಂದ್ರ ಸಚಿವ
‘ಇಂತಹ ಘಟನೆಯನ್ನು (ಪ್ರಧಾನಿ ಸಿಜೆಐ ಮನೆಗೆ ಭೇಟಿ ನೀಡುವುದು) ಕೇಳಿರಲಿಲ್ಲ. ಆದ್ದರಿಂದ ಅಚ್ಚರಿ ಉಂಟಾಯಿತು. ಆದರೆ, ನನಗೆ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆ ಇದೆ. ಸಿಜೆಐ ಅವರು ಪ್ರಧಾನಿ ಅವರನ್ನು ಆಹ್ವಾನಿಸುವುದಕ್ಕೂ ಮುನ್ನ ಸಾಕಷ್ಟು ಯೋಚಿಸಿರಬಹುದು.–ಸುಪ್ರಿಯಾ ಸುಳೆ, ಎನ್‌ಸಿಪಿ (ಶರದ್ ಪವಾರ್ ಬಣ) ಸಂಸದೆ
‘ಸಿಜೆಐ ಮನೆಯಲ್ಲಿ ನಡೆದ ಗಣಪತಿ ಪೂಜೆ ಮತ್ತು ಆರತಿ ದೇಶದಾದ್ಯಂತ ಅನೇಕರ ನಿದ್ದೆಗೆಡಿಸಿದೆ. ಪ್ರಧಾನಿ ಅವರು ಅಲ್ಲಿ ಸ್ನೇಹಕೂಟಕ್ಕೆ ತೆರಳಿದ್ದಲ್ಲ. ಶ್ರದ್ಧೆಯಿಂದ ನಡೆದ ಗಣಪತಿ ಪೂಜೆಯನ್ನೂ ಕೆಲವರಿಗೆ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತಿದೆ.–ಬಿ.ಎಲ್.ಸಂತೋಷ್, ಬಿಜೆಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ)
ಸಿಜೆಐ ಅವರ ವಿಶ್ವಾಸಾರ್ಹತೆಯನ್ನು ಹಾಳುಮಾಡುವ ವಿಪಕ್ಷಗಳ ‘ನಿರ್ಲಕ್ಷ್ಯದ ಹೇಳಿಕೆ’ ಬೇಜವಾಬ್ದಾರಿಯಿಂದ ಕೂಡಿದ್ದಾಗಿದೆ. ತೀರ್ಪುಗಳು ತಮ್ಮ ಪರವಾಗಿ ಬಂದಾಗ, ವಿರೋಧ ಪಕ್ಷಗಳು ಸುಪ್ರೀಂ ಕೋರ್ಟ್‌ನ ವಿಶ್ವಾಸಾರ್ಹತೆಯನ್ನು ಹೊಗಳುತ್ತವೆ. ಆದರೆ ತಮಗೆ ವಿರುದ್ಧವಾದ ಬೆಳವಣಿಗೆ ನಡೆದಾಗ ನ್ಯಾಯಾಂಗವು ರಾಜಿಯಾಗಿದೆ ಎಂದು ಆರೋಪಿಸುತ್ತವೆ.–ಮಿಲಿಂದ್ ದೇವ್ರಾ, ಶಿವಸೇನಾ (ಶಿಂದೆ ಬಣ) ರಾಜ್ಯಸಭಾ ಸದಸ್ಯ
ಗಣಪತಿ ಪೂಜೆಯಲ್ಲಿ ಪಾಲ್ಗೊಳ್ಳುವುದು ಅಪರಾಧವಲ್ಲ. ಮದುವೆ ಮತ್ತು ಇತರ ಶುಭ ಸಮಾರಂಭಗಳಲ್ಲಿ ನ್ಯಾಯಾಂಗದವರು ಮತ್ತು ರಾಜಕಾರಣಿಗಳು ಹಲವು ಸಲ ಜತೆಯಾಗಿ ಕಾಣಿಸಿಕೊಂಡಿದ್ದಾರೆ. ನ್ಯಾಯಾಂಗ ವ್ಯವಸ್ಥೆಯನ್ನು ದೂಷಿಸುವುದು ನಾಚಿಕೆಗೇಡಿನ ಸಂಗತಿ.–ಶೆಹಜಾದ್ ಪೂನಾವಾಲಾ, ಬಿಜೆಪಿ ವಕ್ತಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.