ಕಾಶಿಪುರ (ಉತ್ತರಾಖಂಡ): ಉತ್ತರಾಖಂಡ ವಿಧಾನಸಭೆಯ 70 ಸ್ಥಾನಗಳಿಗೆ ಮತ ಎಣಿಕೆ ಆರಂಭವಾಗಿದ್ದು, ರಾಷ್ಟ್ರೀಯ ಪಕ್ಷಗಳಾದ ಜಿಜೆಪಿ –ಕಾಂಗ್ರೆಸ್ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಸದ್ಯ 46ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ 20ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡರೆ, 4 ಕ್ಷೇತ್ರಗಳಲ್ಲಿಸ್ವತಂತ್ರ ಅಭ್ಯರ್ಥಿಗಳು ಮುನ್ನಡೆ ಗಳಿಸಿದ್ದಾರೆ.

ಉತ್ತರಾಖಂಡದ ಬಿಜೆಪಿ ಮುಖಂಡ, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹಾಗೂ ಕಾಂಗ್ರೆಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಹಿನ್ನಡೆ ಅನುಭವಿಸಿದ್ದಾರೆ.

ಮಧ್ಯಾಹ್ನ 1 ಗಂಟೆ ವೇಳೆಗೆ ಬಿಜೆಪಿ ಶೇ 43.9ರಷ್ಟು ಹಾಗೂ ಕಾಂಗ್ರೆಸ್ ಶೇ 39.3ರಷ್ಟು ಮತಗಳನ್ನು ಪಡೆದುಕೊಂಡಿದೆ.

ಬಹುಜನ ಸಮಾಜ ಪಕ್ಷ (ಬಿಎಸ್ಪಿ) 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದು, ಶೇ 4.64ರಷ್ಟು ಮತಗಳನ್ನು ಪಡೆದಿದೆ.

ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ 17,071 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಭುವನ್ ಕಾಪ್ರಿ ವಿರುದ್ಧ 2,287 ಮತಗಳ ಅಂತರದಿಂದ ಹಿನ್ನೆಡೆ ಅನುಭವಿಸಿದ್ದಾರೆ.

ಉತ್ತರಾಖಂಡದಲ್ಲಿ ಫೆಬ್ರುವರಿ 14ರಂದು ಮತದಾನ ನಡೆದಿತ್ತು. ಉತ್ತರಾಖಂಡದಲ್ಲಿ ಬಿಜೆಪಿ–ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಆದರೂ, ಬಿಜೆಪಿ ಗೆಲ್ಲುವ ಸಾಧ್ಯತೆಹೆಚ್ಚುಎಂದು ಸಮೀಕ್ಷೆಗಳು ಹೇಳಿದ್ದವು.

ಚುನಾವಣೆಗೂ ಮುನ್ನಉತ್ತರಾಖಂಡದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿತ್ತು.50 ಶಾಸಕರ ಬೆಂಬಲದೊಂದಿಗೆ ಬಿಜೆಪಿಯ ಪುಷ್ಕರ್ ಸಿಂಗ್ ದಾಮಿ ಅವರು ಮುಖ್ಯಮಂತ್ರಿಯಾಗಿದ್ದರು.

ಓದಿ...Assembly Poll Results Live | ಪಂಚರಾಜ್ಯ ಚುನಾವಣೆ ಫಲಿತಾಂಶ: ಪಂಜಾಬ್ನಲ್ಲಿ ಮ್ಯಾಜಿಕ್ ಸಂಖ್ಯೆಯ ಸನಿಹಕ್ಕೆ ಎಎಪಿ

ಬಿಜೆಪಿಯಸತ್ಪಾಲ್ ಮಹಾರಾಜ್, ಧನ್ ಸಿಂಗ್ ರಾವತ್, ಅರವಿಂದ್ ಪಾಂಡೆ,ರೇಖಾ ಆರ್ಯ, ಮದನ್ ಕೌಶಿಕ್ ಸೇರಿದಂತೆ ಪ್ರಮುಖರು ಕಣದಲ್ಲಿದ್ದಾರೆ.

ಯಾವ ಸಮೀಕ್ಷೆಯಲ್ಲಿ ಯಾರಿಗೆ ಎಷ್ಟು ಸ್ಥಾನ? ಇಲ್ಲಿದೆ ಮಾಹಿತಿ

ಎಬಿಪಿ ನ್ಯೂಸ್ – ಸಿವೋಟರ್
ಬಿಜೆಪಿ 26–32
ಕಾಂಗ್ರೆಸ್ 32–38
ಎಎಪಿ 0–2

ಇಟಿಜಿ ರಿಸರ್ಚ್
ಬಿಜೆಪಿ 37–40
ಕಾಂಗ್ರೆಸ್ 29–32
ಎಎಪಿ 0–1

ನ್ಯೂಸ್ 24
ಬಿಜೆಪಿ 43
ಕಾಂಗ್ರೆಸ್ 24
ಎಎಪಿ 0

ನ್ಯೂಸ್ಎಕ್ಸ್–ಪೋಲ್ಸ್ಟರ್
ಬಿಜೆಪಿ 31–33
ಕಾಂಗ್ರೆಸ್ 33–35
ಎಎಪಿ 0–3

ರಿಪಬ್ಲಿಕ್ ಟಿ.ವಿ
ಬಿಜೆಪಿ 35–39
ಕಾಂಗ್ರೆಸ್ 28–34
ಎಎಪಿ 0–3

ಟೈಮ್ಸ್ ನವ್ – ವಿಇಟಿಒ
ಬಿಜೆಪಿ 37
ಕಾಂಗ್ರೆಸ್ 31
ಎಎಪಿ 1

ಝೀ ನ್ಯೂಸ್– ಡಿಸೈನ್ಬಾಕ್ಸ್ಡ್
ಬಿಜೆಪಿ 26–30
ಕಾಂಗ್ರೆಸ್ 35–40
ಎಎಪಿ 0

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.