ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

78ನೇ ಸ್ವಾತಂತ್ರ್ಯೋತ್ಸವ | ವಿಕಸಿತ ಭಾರತ ಪರಿಕಲ್ಪನೆಯಡಿ ಆಚರಣೆ: ರಕ್ಷಣಾ ಸಚಿವಾಲಯ

Published 19 ಜುಲೈ 2024, 10:05 IST
Last Updated 19 ಜುಲೈ 2024, 10:05 IST
ಅಕ್ಷರ ಗಾತ್ರ

ನವದೆಹಲಿ: 78ನೇ ಸ್ವಾತಂತ್ರ್ಯೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈ ಬಾರಿ ‘ವಿಕಸಿತ ಭಾರತ’ ಎನ್ನುವ ಪರಿಕಲ್ಪನೆಯಡಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. 

ಈ ಪರಿಕಲ್ಪನೆ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿಸುವ ಕೇಂದ್ರ ಸರ್ಕಾರದ ಗುರಿಯನ್ನು ಆಧರಿಸಿದೆ ಎಂದು ಹೇಳಲಾಗಿದೆ. 

ಈ ಕುರಿತು ಕೆಂಪು ಕೋಟೆ ಮತ್ತು ವಿಕಸಿತ ಭಾರತದ ಘೋಷಣೆಯುಳ್ಳ ಪೋಸ್ಟರ್‌ ಅನ್ನು ರಕ್ಷಣಾ ಸಚಿವಾಲಯದ ವಕ್ತಾರ ಭರತ್‌ ಭೂಷಣ್ ಬಾಬು ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

2047ಕ್ಕೆ ಭಾರತ ವಸಾಹತು ಶಾಹಿ ಆಡಳಿತದಿಂದ ಮುಕ್ತವಾಗಿ 100 ವರ್ಷವಾಗಲಿದೆ ಎಂದು ಅವರು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT