ನವದೆಹಲಿ: ಜಾತಿ ಆಧಾರದ ಮೇಲೆ ದೇಶವನ್ನು ಭಾಗವಾಗಿಸಲು ಹೊರಟಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಅವರ ಜಾತಿ ಯಾವುದು ಎಂದು ಕೇಳುವುದರಲ್ಲಿ ತಪ್ಪೇನಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಪ್ರಶ್ನಿಸಿದ್ದಾರೆ.

ಮಂಗಳವಾರ ಲೋಕಸಭೆಯಲ್ಲಿ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು ನೀಡಿದ್ದ ‘ಜಾತಿ ಗೊತ್ತಿಲ್ಲದವರು ಜಾತಿ ಗಣತಿ ಬಗ್ಗೆ ಮಾತನಾಡುತ್ತಿದ್ದಾರೆ’ ಎನ್ನುವ ಹೇಳಿಕೆ ವಿರೋಧಿಸಿ ವಿಪಕ್ಷಗಳು ಸಂಸತ್ನಲ್ಲಿ ಪ್ರತಿಭಟನೆ ನಡೆಸಿವೆ.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರಿಜಿಜು, ‘ಜನರ ಬಳಿ ನಿಮ್ಮ ಜಾತಿ ಯಾವುದು ಎಂದು ಕೇಳಿ ದೇಶವನ್ನು ಇಬ್ಬಾಗವಾಗಿಸಲು ಕಾಂಗ್ರೆಸ್ ಹೊರಟಿದೆ. ಆದರೆ ರಾಹುಲ್ ಗಾಂಧಿಯ ಜಾತಿ ಯಾವುದು ಎಂದರೆ ಪ್ರತಿಭಟನೆ ಮಾಡುತ್ತಾರೆ’ ಎಂದರು.

‘ದಿನವೆಲ್ಲ ಕಾಂಗ್ರೆಸ್ ಜಾತಿ ಬಗ್ಗೆ ಮಾತನಾಡುತ್ತದೆ. ರಾಹುಲ್ ಗಾಂಧಿ ಮಾಧ್ಯಮದವರಿಗೂ ನಿಮ್ಮ ಜಾತಿ ಯಾವುದು ಎಂದು ಕೇಳುತ್ತಾರೆ. ಅಷ್ಟೆ ಯಾಕೆ ಸೇನಾ ಸಿಬ್ಬಂದಿ ಭೇಟಿಯಾದಾಗ, ಭಾರತ ಜೊಡೊ ಯಾತ್ರೆ ವೇಳೆಯೂ ಜಾತಿ ಬಗ್ಗೆ ಕೇಳಿದ್ದಾರೆ. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಕೂಡ ಇದ್ದಕ್ಕೆ ಸಹಮತ ನೀಡುತ್ತಾರೆ. ಇವರೆಲ್ಲ ದೇಶ ಮತ್ತು ಸಂಸತ್ಗಿಂತ ದೊಡ್ಡವರೇ? ಎಂದರು.

ಬೀದಿಯಿಂದ ಸಂಸತ್ತಿನವರೆಗೂ ಹಿಂಸಾಚಾರವನ್ನು ಹರಡಲು ಕಾಂಗ್ರೆಸ್ ಬಯಸುತ್ತದೆ. ಆದರೆ ಜನರನ್ನು ಬೇರೆ ಬೇರೆಯಾಗಲು ಬಿಜೆಪಿ ಎಂದಿಗೂ ಬಿಡುವುದಿಲ್ಲ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.