ಹುಬ್ಬಳ್ಳಿ: ಸಾರಿಗೆ ಮುಷ್ಕರದಿಂದ ಪ್ರಯಾಣಿಕರಿಗೆ ಪರ್ಯಾಯ ಸಂಚಾರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ವಿಶೇಷ ರೈಲು ಓಡಿಸಬೇಕು ಎಂಬ ರಾಜ್ಯ ಸರ್ಕಾರದ ಮನವಿಗೆ ನೈರುತ್ಯ ರೈಲ್ವೆ ವಲಯ ಸ್ಪಂದಿಸಿದೆ.

ಶುಕ್ರವಾರದಿಂದ ಒಂಬತ್ತು ವಿಶೇಷ ರೈಲುಗಳು ಪ್ರಯಾಣಿಕರ ಸೇವೆಗೆ ಲಭ್ಯವಾಗಲಿವೆ.

ಯಶವಂತಪುರ ಬೆಳಗಾವಿ ರೈಲು ಏ.9 ರಂದು ರಾತ್ರಿ 10.15ಕ್ಕೆ ಯಶವಂತಪುರ ದಿಂದ ಹೊರಟು ಮರುದಿನ ಬೆಳಿಗ್ಗೆ 9.10ಕ್ಕೆ ಬೆಳಗಾವಿ ತಲುಪಲಿದೆ. ಅದೇ ದಿನ ರಾತ್ರಿ 10ಕ್ಕೆ ಬೆಳಗಾವಿಯಿಂದ ಯಶವಂತಪುರಕ್ಕೆ ಹೊರಡಲಿದೆ.

ಏ.9ರಂದು ಸಂಜೆ 6.20ಕ್ಕೆ ಯಶವಂತಪುರದಿಂದ ವಿಜಯಪುರಕ್ಕೆ ರೈಲು ಹೊರಡಲಿದೆ.

ಏ.9 ರಂದು ಬೆಂಗಳೂರು ಮೈಸೂರು ನಡುವಿನ ರೈಲು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನಿಂದ, ಮಧ್ಯಾಹ್ನ 2.30ಕ್ಕೆ ಮೈಸೂರಿನಿಂದ ಹೊರಡಲಿದೆ.

ಏ. 9, 10 ರಂದು ಮೈಸೂರು ಯಶವಂತಪುರ ನಡುವೆ ಸಂಚರಿಸುವ ರೈಲು ಮೈಸೂರಿನಿಂದ ಬೆಳಿಗ್ಗೆ 8.25ಕ್ಕೆ, ಯಶವಂತಪುರದಿಂದ ಮಧ್ಯಾಹ್ನ 1.15ಕ್ಕೆ ಹೊರಡಲಿದೆ.

ಮೈಸೂರು ಬೀದರ್ ರೈಲು ಏ.9 ರಂದು ರಾತ್ರಿ 8ಕ್ಕೆ ಮೈಸೂರಿನಿಂದ, ಮರುದಿನ ಮಧ್ಯಾಹ್ನ 2ಕ್ಕೆ ಬೀದರ್ ನಿಂದ ಹೊರಡಲಿದೆ.

ಯಶವಂತಪುರ ಬೀದರ್ ರೈಲು ಕಲಬುರ್ಗಿ ಮಾರ್ಗವಾಗಿ ಸಂಚರಿಸಲಿದ್ದು, ಏ.10 ರಂದು ರಾತ್ರಿ 10.15ಕ್ಕೆ ಯಶವಂತಪುರ ದಿಂದ, ಮರುದಿನ ಮಧ್ಯಾಹ್ನ 2ಕ್ಕೆ ಬೀದರ್ ನಿಂದ ಹೊರಡಲಿದೆ.

ನಾನೇಕೆ ಕರೆಯಲಿ, ಮಾತುಕತೆಗೆ ಅವರೇ ಬರಲಿ: ಸಿಎಂ ಯಡಿಯೂರಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.