ಮೆಲ್ಬರ್ನ್: 16 ವರ್ಷದ ಒಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಗೆ ನಿರ್ಬಂಧ ಹೇರಲು ಉದ್ದೇಶಿಸಿರುವ ಸರ್ಕಾರದ ಕ್ರಮಕ್ಕೆ ಆಸ್ಟ್ರೇಲಿಯಾದ ಎಲ್ಲ ರಾಜ್ಯಗಳು ಹಾಗೂ ಪ್ರಾಂತ್ಯಗಳು ಸರ್ವಾನುಮತದಿಂದ ಶುಕ್ರವಾರ ಬೆಂಬಲ ಸೂಚಿಸಿವೆ.

ದೇಶದ ಎಂಟು ಪ್ರಾಂತ್ಯಗಳ ನಾಯಕರೊಂದಿಗೆ ಪ್ರಧಾನಿ ಆ್ಯಂಟೊನಿ ಅಲ್ಬನೀಸ್ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದರು. ‘ಜಗತ್ತಿನಲ್ಲಿಯೇ ಮೊದಲ ಬಾರಿಗೆ ಇಂಥದ್ದೊಂದು ಕ್ರಮವನ್ನು ಆಸ್ಟ್ರೇಲಿಯಾ ಸರ್ಕಾರ ಕೈಗೊಳ್ಳಲು ಸಿದ್ಧವಾಗಿದೆ’ ಎಂದು ಪ್ರಧಾನಿ ಆ್ಯಂಟೊನಿ ಹೇಳಿದ್ದಾರೆ.

ವಯೋಮಿತಿಯನ್ನು 14 ಅಥವಾ 16ಕ್ಕೆ ನಿಗದಿಪಡಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಾಗ ತಸ್ಮಾನಿಯಾ ರಾಜ್ಯವು ವಯೋಮಿತಿಯನ್ನು 14ಕ್ಕೆ ನಿಗದಿಪಡಿಸಿ ಎಂಬ ಸಲಹೆ ನೀಡಿತ್ತು. ಆದರೆ, ದೇಶದಲ್ಲಿ ಒಂದೇ ರೀತಿಯ ಕಾನೂನು ಜಾರಿಯಾಗಬೇಕು ಎನ್ನುವ ಉದ್ದೇಶದಿಂದ ಈ ಸಲಹೆಯನ್ನು ನಿರಾಕರಿಸಲಾಗಿತ್ತು.

ಆಸ್ಟ್ರೇಲಿಯಾದ ಮುಖ್ಯ ವಿರೋಧ ಪಕ್ಷವು ಈಗಾಗಲೇ ಈ ಕ್ರಮವನ್ನು ಬೆಂಬಲಿಸಿದೆ. ಆದರೆ, ಗ್ರೀನ್ಸ್ ಪಕ್ಷ ಮಾತ್ರ ಇದನ್ನು ವಿರೋಧಿಸಿದೆ. ‘ಇಂಥ ಕ್ರಮಗಳಿಂದ ಸ್ವೀಡನ್ನ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್ಬರ್ಗ್ ಅಂತಹವರು ನಮ್ಮ ನೆಲದಲ್ಲಿ ಹುಟ್ಟುವುದಕ್ಕೇ ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟಿದೆ.

ಮಾನಸಿಕ ಆರೋಗ್ಯ ವೈದ್ಯರು, ತಜ್ಞರು ಕೂಡ ಈ ಕ್ರಮವನ್ನು ವಿರೋಧಿಸಿದ್ದಾರೆ. ಆದರೆ, ಪ್ರಮುಖ ವಿರೋಧ ಪಕ್ಷವು ಈ ಕ್ರಮವನ್ನು ಬೆಂಬಲಿಸಿರುವುದರಿಂದ ಸಂಸತ್ತಿನಲ್ಲಿ ಈ ಕುರಿತ ಮಸೂದೆಯು ಸುಲಭವಾಗಿ ಪಾಸಾಗಲಿದೆ ಎನ್ನಲಾಗುತ್ತಿದೆ.
.16 ವರ್ಷದೊಳಗಿನವರಿಗೆ ಜಾಲತಾಣ ನಿರ್ಬಂಧ: ಕಾನೂನು ಜಾರಿಗೆ ಆಸ್ಟ್ರೇಲಿಯಾ ಸಿದ್ಧತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.