ಢಾಕಾ: ಉದ್ಯೋಗ ಮೀಸಲಾತಿ ಸಂಬಂಧ ಇಂದು ಬಾಂಗ್ಲಾದೇಶ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದ್ದು, ಕರ್ಫ್ಯೂವನ್ನು ಭಾನುವಾರವೂ ವಿಸ್ತರಿಸಲಾಗಿದೆ.

ಶುಕ್ರವಾರದಿಂದ ಜಾರಿಯಲ್ಲಿದ್ದ ಕರ್ಫ್ಯೂವನ್ನು ಭಾನುವಾರ ಮಧ್ಯಾಹ್ನ 3 ಗಂಟೆವರೆಗೆ ವಿಸ್ತರಿಸಲಾಗಿದೆ. ಅನಿರ್ದಿಷ್ಟಾವಧಿವರೆಗೆ ಮುಂದುವರಿಯಲಿದ್ದು, ಅಗತ್ಯ ವಸ್ತುಗಳ ಖರೀದಿಗೆ ಎರಡು ಗಂಟೆಗಳ ಬಿಡುವು ಇರಲಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
.ಬಾಂಗ್ಲಾದೇಶ ಹಿಂಸಾಚಾರ: ತಮಿಳರಿಗಾಗಿ ಸಹಾಯವಾಣಿ ಅರಂಭಿಸಿದ ಸ್ಟಾಲಿನ್ ಸರ್ಕಾರ.
ಸರ್ಕಾರಿ ನೇಮಕಾತಿಗಳಲ್ಲಿ ಮೀಸಲಾತಿ ವಿರೋಧಿಸಿ ಹಲವು ದಿನಗಳಿಂದ ಬಾಂಗ್ಲಾದೇಶದಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿದ್ದು, ಈವರೆಗೂ 114 ಮಂದಿ ಸಾವಿಗೀಡಾಗಿದ್ದಾರೆ.

ಭದ್ರತಾ ಪಡೆಗಳು ಹಾಗೂ ಪ್ರತಿಭಟನಾಕಾರರ ನಡುವೆ ಸಂಘರ್ಷ ನಡೆದ ರಾಜಧಾನಿ ಢಾಕಾದ ಬೀದಿಗಳಲ್ಲಿ ಸೈನಿಕರು ಗಸ್ತು ತಿರುಗುತ್ತಿದ್ದಾರೆ. ಗುರುವಾರದಿಂದ ಇಂಟರ್ನೆಟ್ ಹಾಗೂ ಟೆಕ್ಸ್ಟ್ ಮೆಸೇಜ್ ಸೌಲಭ್ಯಗಳನ್ನು ನಿರ್ಬಂಧಿಸಲಾಗಿದೆ.
.ಬಾಂಗ್ಲಾದೇಶ: ನಿಷೇಧಾಜ್ಞೆ ನಡುವೆಯೇ ಪ್ರತಿಭಟನೆ .
ಬುಧವಾರದಿಂದಲೇ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳು ಮುಚ್ಚಿವೆ.

ಪಾಕಿಸ್ತಾನ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕುಟುಂಬಗಳಿಗೆ ಶೇ 30 ಸೇರಿ ಸರ್ಕಾರಿ ನೇಮಕಾತಿಗಳಲ್ಲಿ ಮೀಸಲಾತಿ ನೀಡುವ ಸರ್ಕಾರ ನಿರ್ಧಾರದ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ.
.ಬಾಂಗ್ಲಾದೇಶ: ನಿಲ್ಲದ ಹಿಂಸಾಚಾರ, 25 ಜನ ಸಾವು.
2018ರಲ್ಲಿ ಶೇಖ್ ಹಸೀನಾ ಸರ್ಕಾರ ಈ ಕೋಟಾ ಪದ್ಧತಿಯನ್ನು ರದ್ದು ಮಾಡಿತ್ತು. ಆದರೆ ಕಳೆದ ತಿಂಗಳು ಸುಪ್ರೀಂ ಕೋರ್ಟ್ ಅದನ್ನು ಮರುಸ್ಥಾಪಿಸಿತ್ತು.
.ಮೀಸಲಾತಿ ವಿರೋಧಿಸಿ ಪ್ರತಿಭಟನೆ: ಪ್ರತಿಭಟನಕಾರರ ಮೇಲೆ ಗ್ರೆನೇಡ್, ಗುಂಡಿನ ದಾಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.