ದೌಲತ್‌ದಿಯಾ (ಬಾಂಗ್ಲಾದೇಶ): ಕೊರೊನಾವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಕಳೆದ ಒಂದೂವರೆ ವರ್ಷದಿಂದ ನೆರೆಯ ಬಾಂಗ್ಲಾದೇಶದಲ್ಲಿ ಲಾಕ್‌ಡೌನ್ ಹಾಗೂ ಸೆಮಿ ಲಾಕ್‌ಡೌನ್‌ಗಳು ಜಾರಿಯಲ್ಲಿದ್ದವು. ಈಗಲೂ ಕೂಡ ಜನದಟ್ಟಣೆ ತಡೆಯಲು ಅಲ್ಲಲ್ಲಿ ಕಟ್ಟುನಿಟ್ಟಿನ ನಿಯಮಗಳು ಜಾರಿಯಲ್ಲಿವೆ.

ಇದರಿಂದ ವೇಶ್ಯಾವೃತ್ತಿಯನ್ನು ನಂಬಿ ಬದುಕುವ ಅಲ್ಲಿನ ಮಹಿಳೆಯರು ತೀವ್ರ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಸರ್ಕಾರವೇ ಮುಂದೆ ನಿಂತು ವೇಶ್ಯಾಗೃಹಗಳಿಗೆ ತೆರಳಿ ವೇಶ್ಯೆಯರಿಗೆ ಕೋವಿಡ್ ಲಸಿಕೆ ನೀಡುತ್ತಿದೆ.

17 ಕೋಟಿ ಜನಸಂಖ್ಯೆ ಇರುವ ಈ ಮುಸ್ಲಿಂ ರಾಷ್ಟ್ರದಲ್ಲಿ ವೇಶ್ಯಾವೃತ್ತಿಯನ್ನು ಕಾನೂನುಬದ್ಧಗೊಳಿಸಲಾಗಿದೆ. ದೇಶದ ತುಂಬ 11 ಅಧಿಕೃತ ವೇಶ್ಯಾಗೃಹಗಳಿದ್ದು, ಅಲ್ಲಿನ ನೂರಾರು ಮಹಿಳೆಯರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಸ್ವಯಂಪ್ರೇರಿತವಾಗಿ ಮುಂದೆ ಬರುತ್ತಿದ್ದಾರೆ.

ದೌಲತ್‌ದಿಯಾದಲ್ಲಿರುವ ಶತಮಾನಕ್ಕೂ ಹಳೆಯದಾದ ವೇಶ್ಯಾಗೃಹದಲ್ಲಿ 200 ವೇಶ್ಯೆಯರು ಲಸಿಕೆ ಹಾಕಿಸಿಕೊಂಡಿದ್ದು ಅವರಿಗೆ ಮೊದಲು ಲಸಿಕೆ ಲಭ್ಯತೆ ಕೊರತೆ ಕಾಡಿತ್ತು.

ಬಾಂಗ್ಲಾದೇಶ ಅಮೆರಿಕ ಹಾಗೂ ಚೀನಾದಿಂದ ಲಸಿಕೆ ಪಡೆದ ನಂತರ ಈಗ ಆ ದೇಶದಲ್ಲಿ ಸಾಕಷ್ಟು ಲಸಿಕೆ ಲಭ್ಯವಿದೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.

ವೇಶ್ಯಾಗೃಹಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ 18ಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳು ಇರುವುದರಿಂದ ಅವರಿಗೆ ಇನ್ನೂ ಲಸಿಕೆ ಸಿಗುತ್ತಿಲ್ಲ ಎಂದು ಆರೋಪಿಸಲಾಗಿದೆ. ಬಾಂಗ್ಲಾದೇಶದಲ್ಲಿ ಇದುವರೆಗೆ 14 ಲಕ್ಷ ಜನರಲ್ಲಿ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡಿದ್ದು 25000 ಜನ ಮೃತಪಟ್ಟಿದ್ದಾರೆ.

ಇದನ್ನೂ ಓದಿ:ತಾಲಿಬಾನ್ ಕಪಿಮುಷ್ಠಿಯಲ್ಲಿ ಅಫ್ಗಾನಿಸ್ತಾನ: ಎದುರಾಗಲಿದೆಯಂತೆ ಭೀಕರ ಆಹಾರ ಸಮಸ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.