ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ನೇತೃತ್ವದಲ್ಲಿ ಅಮೆರಿಕನ್ನರು ಗುರುವಾರ ದೇಗುಲ ಮತ್ತು ಪ್ರಮುಖ ಸ್ಥಳಗಳಲ್ಲಿ ದೀಪಾವಳಿ ಹಬ್ಬ ಆಚರಿಸಿದರು.

‘ದೀಪಾವಳಿಯು ಬೆಳಕಿನ ಮಹತ್ವವನ್ನು ತಿಳಿಸುತ್ತದೆ. ಜ್ಞಾನ, ಏಕತೆ ಮತ್ತು ಸತ್ಯದ ಬೆಳಕು ಪಸರಿಸುತ್ತಿದೆ. ಈ ಬೆಳಕು ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಅಮೆರಿಕಕ್ಕೆ ಎಲ್ಲವನ್ನೂ ಸಾಧ್ಯವಾಗಿಸಬಲ್ಲದು’ ಎಂದು ಬೈಡನ್ ಅವರು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.

‘ಅಮೆರಿಕ ಮತ್ತು ವಿಶ್ವದ ಕೋಟ್ಯಂತರ ಜನರು ದೀಪಗಳನ್ನು ಬೆಳಗುವ ಮೂಲಕ ದುಷ್ಟತನದ ವಿರುದ್ಧ ಒಳ್ಳೆತನ, ಆಲಸ್ಯದ ವಿರುದ್ಧ ಜ್ಞಾನದ ಮತ್ತು ಅಂಧಕಾರದ ವಿರುದ್ಧದ ಹೋರಾಟವನ್ನು ಸಂಭ್ರಮಿಸಲಿದ್ದಾರೆ’ ಎಂದು ಹ್ಯಾರಿಸ್ ಅವರು ಎಕ್ಸ್ ಮೂಲಕ ತಿಳಿಸಿದ್ದಾರೆ.

ಕಮಲಾ ಅವರು ಹಲವು ವರ್ಷಗಳಿಂದ ತಮ್ಮ ಅಧಿಕೃತ ನಿವಾಸದಲ್ಲಿ ದೀಪಾವಳಿಯನ್ನು ಆಚರಿಸುತ್ತಿದ್ದರು. ಆದರೆ ಈ ಬಾರಿ ಚುನಾವಣಾ ಪ್ರಚಾರದ ಒತ್ತಡದಿಂದಾಗಿ ಅವರು ತಮ್ಮ ನಿವಾಸದಲ್ಲಿ ದೀಪಾವಳಿ ಆಚರಣೆ ಮಾಡುತ್ತಿಲ್ಲ.

‘ಪ್ರತಿಯೊಬ್ಬರು ನಮ್ಮ ಸಮುದಾಯಯಕ್ಕೆ ದೀಪಗಳ ಮೂಲಕ ಶಕ್ತಿ ತುಂಬುವ ಸಾಮರ್ಥ್ಯ ಹೊಂದಿದ್ದಾರೆ ಎಂಬುವುದಕ್ಕೆ ದೀಪಾವಳಿ ಸಾಕ್ಷಿಯಾಗಿದೆ. ಈ ಹಬ್ಬದ ಸಂದರ್ಭದಲ್ಲಿ ಎಲ್ಲ ಜನರ ಧಾರ್ಮಿಕ ಸ್ವಾತಂತ್ರ್ಯ ಮತ್ತು ನಂಬಿಕೆಯ ಮಹತ್ವವನ್ನು ತಿಳಿಸಲು ಬಯಸುತ್ತೇವೆ’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಹೇಳಿದ್ದಾರೆ.

ಮಿನ್ನೆಸೋಟ ರಾಜ್ಯಪಾಲ ಟಿಮ್ ವಾಲ್ಝ್ ಮತ್ತು ಕಮಲಾ ಹ್ಯಾರಿಸ್ ಅವರು ಪೆನ್ಸಿಲ್ವೇನಿಯಾದ ಮೋಂಟೆಗೊಮೇರಿ ಕೌಂಟಿಯಲ್ಲಿನ ಭಾರತದ ದೇಗುಲವೊಂದಕ್ಕೆ ಭೇಟಿ ನೀಡಿ ದೀಪಾವಳಿ ಹಬ್ಬವನ್ನು ಆಚರಿಸಿದರು.

ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದ ಗೂಗಲ್ ಸಿಇಒ ಸುಂದರ್ ಪಿಚೈ ಅವರು, ‘ದೀಪಾವಳಿಯು ಸಂತೋಷ ಮತ್ತು ಉತ್ಸಾಹವನ್ನು ತುಂಬಲಿ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.