ಬೀಜಿಂಗ್: ಫುಕುಶಿಮಾ ಅಣ್ವಸ್ತ್ರ ಘಟಕದ ಕಲುಷಿತ ನೀರನ್ನು ಪೆಸಿಫಿಕ್ ಸಾಗರಕ್ಕೆ ಬಿಡುಗಡೆ ಮಾಡಿರುವ ಜಪಾನ್ ನಡೆಯನ್ನು ಚೀನಾ ಬಲವಾಗಿ ಖಂಡಿಸಿದೆ.

ಕಲುಷಿತ ನೀರನ್ನು ಸಾಗರಕ್ಕೆ ಹರಿಸುತ್ತಿರುವುದು ಜಪಾನ್ಗೆ ಮಾತ್ರವೇ ಸಂಬಂಧಿಸಿದ ವಿಚಾರವಲ್ಲ. ಅಣ್ವಸ್ತ್ರ ಸುರಕ್ಷತೆಯ ಕುರಿತ ಗಡಿಯಾಚೆಗಿನ ಬಹುದೊಡ್ಡ ಸಮಸ್ಯೆಯಾಗಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ.

ಫುಕುಶಿಮಾ ಘಟಕದ ಕಲುಷಿತ ನೀರನ್ನು ಇಂದು (ಗುರುವಾರ) ಬೆಳಗ್ಗೆಯಿಂದ ಹರಿಬಿಡಲಾಗುತ್ತಿದೆ. ಸುರಕ್ಷಿತ ಮಾನದಂಡಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ಹೇಳಿದೆ. ಆದಾಗ್ಯೂ, ಇದು ಜಪಾನ್ನ ಅತ್ಯಂತ ಸ್ವಾರ್ಥ ಮತ್ತು ಬೇಜವಾಬ್ದಾರಿಯ ನಡೆ ಎಂದು ಚೀನಾ ಕಿಡಿಕಾರಿದೆ.

ಅಷ್ಟಲ್ಲದೆ, ಜಪಾನ್ 10 ಪ್ರಾಂತ್ಯಗಳಿಂದ ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳುವುದನ್ನು ನಿರ್ಬಂಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.