ಕ್ಯಾಲಿಫೋರ್ನಿಯಾ: ಅಮೆರಿಕದಲ್ಲಿನ ಥೀಮ್ ಪಾರ್ಕ್ನಲ್ಲಿ 28,000 ಸಿಬ್ಬಂದಿಯನ್ನು ಕೆಲಸದಿಂದ ಬಿಡುಗಡೆ ಮಾಡುವುದಾಗಿ ಮನರಂಜನಾ ಕ್ಷೇತ್ರದ ದಿಗ್ಗಜ ಡಿಸ್ನಿ ಮಂಗಳವಾರ ಹೇಳಿದೆ.

ಕೊರೊನಾ ವೈರಸ್ ಸಾಂಕ್ರಾಮಿಕದಿಂದ ಬಿಕ್ಕಟ್ಟು ಎದುರಾಗಿದ್ದು, ನೌಕರರನ್ನು ಕೆಲಸದಿಂದ ತೆಗೆಯಲು ಡಿಸ್ನಿ ನಿರ್ಧರಿಸಿದೆ.

'ಇಂಥ ಕ್ರಮಕೈಗೊಳ್ಳುವುದು ಘಾಸಿಯಾಗಿದೆ. ಆದರೆ, ದೀರ್ಘಕಾಲದ ಕೋವಿಡ್–19 ಪರಿಣಾಮವಾಗಿ ಉದ್ಯಮದ ಮೇಲೆ ಹೊರೆಯಾಗಿದ್ದು, ಇದೊಂದೆ ಆಯ್ಕೆಯು ನಮಗೆ ಉಳಿದಿದೆ. ಅಂತರ ಕಾಯ್ದುಕೊಳ್ಳಬೇಕಾದ ಅವಶ್ಯಕತೆಯಿಂದಾಗಿ ಕಾರ್ಯನಿರ್ವಹಿಸಬಹುದಾದ ಸಿಬ್ಬಂದಿ ಪ್ರಮಾಣದಲ್ಲೂ ಇಳಿಕೆ ಮಾಡಬೇಕಿದೆ ಹಾಗೂ ಸಾಂಕ್ರಾಮಿಕದ ಅವಧಿ ಅನಿಶ್ಚಿತತೆಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ' ಎಂದು ಡಿಸ್ನಿ ಪಾರ್ಕ್ನ ಮುಖ್ಯಸ್ಥ ಜೋಶ್ ಡಿ ಅಮೆರೊ ಹೇಳಿರುವುದಾಗಿ ದಿ ನ್ಯೂ ಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಥೀಮ್ ಪಾರ್ಕ್ನಲ್ಲಿ 28,000 ಸಿಬ್ಬಂದಿಯನ್ನು ಅಥವಾ ನಾಲ್ಕನೇ ಒಂದು ಭಾಗ ನೌಕರರನ್ನು ಕೆಲಸದಿಂದ ತೆಗೆಯುವುದಾಗಿ ಕಂಪನಿ ಹೇಳಿದೆ.

ಕೋವಿಡ್ಗೂ ಮುನ್ನ ಕ್ಯಾಲಿಫೋರ್ನಿಯಾ ಮತ್ತು ಫ್ಲೋರಿಡಾದಿಂದ ಡಿಸ್ನಿ ಥೀಮ್ ಪಾರ್ಕ್ಗಳಲ್ಲಿ ಸುಮಾರು 1,10,000 ಜನರು ಕಾರ್ಯನಿರ್ವಹಿಸುತ್ತಿದ್ದರು. ಉದ್ಯೋಗ ಕಡಿತದಿಂದ ಆ ಪ್ರಮಾಣ 82,000ಕ್ಕೆ ಇಳಿಯಲಿದೆ.

ಜುಲೈ ಮಧ್ಯದಲ್ಲಿ ಫ್ಲೋರಿಡಾದಲ್ಲಿನ 'ವಾಲ್ಟ್ ಡಿಸ್ನಿ ವರ್ಲ್ಡ್' ಭಾಗಶಃ ಕಾರ್ಯಾರಂಭಿಸಿದೆ. ಆದರೆ, ಕೋವಿಡ್ ಕಾರಣಗಳಿಂದಾಗಿ ಪಾರ್ಕ್ಗೆ ತೀರಾ ವಿರಳ ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಿದ್ದಾರೆ.

ಜಾನ್ ಹಾಪ್ಕಿನ್ಸ್ ಯೂನಿವರ್ಸಿಟಿ ಪ್ರಕಾರ, ಅಮೆರಿಕದಲ್ಲಿ ಒಟ್ಟು 71,80,411 ಪ್ರಕರಣಗಳು ದಾಖಲಾಗಿದ್ದು, 2,05,774 ಮಂದಿ ಸಾವಿಗೀಡಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.