ಜೆರುಸಲೇಂ: ಹಮಾಸ್ ಮುಖ್ಯಸ್ಥ ಯಹ್ಯಾ ಸಿನ್ವರ್ ಹತ್ಯೆ ಬೆನ್ನಲ್ಲೇ, ಇಸ್ರೇಲ್ ಉತ್ತರ ಭಾಗದ ಸೆಸೆರಿಯಾ ನಗರದಲ್ಲಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಮನೆಯನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಲಾಗಿದೆ ಎಂದು ಅವರ ವಕ್ತಾರ ತಿಳಿಸಿದ್ದಾರೆ. ಆದರೆ ಪ್ರಧಾನಿಯವರು ಮನೆಯಲ್ಲಿ ಇರಲಿಲ್ಲ. ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
.ಗಾಜಾ ಆಸ್ಪತ್ರೆ ಸುತ್ತುವರಿದು ಇಸ್ರೇಲ್ ದಾಳಿ: ರೋಗಿಗಳಿಗೆ ಗಾಯ.
ಇದಕ್ಕೂ ಮುನ್ನ ಲೆಬನಾನ್ನಿಂದ ನಡೆಸಲಾದ ಡ್ರೋನ್ ದಾಳಿ ಕಟ್ಟಡವೊಂದನ್ನು ಹಾನಿಗೊಳಿಸಿತ್ತು ಎಂದು ಇಸ್ರೇಲ್ ಸೇನೆ ತಿಳಿಸಿತ್ತು. ಆದರೆ ಯಾವ ಕಟ್ಟಡ ಎನ್ನುವ ಮಾಹಿತಿಯನ್ನು ಸೇನಾಪಡೆಗಳು ಸ್ಪಷ್ಟಪಡಿಸಿಲ್ಲ. ಇನ್ನೂ ಎರಡು ಡ್ರೋನ್ಗಳು ಇಸ್ರೇಲ್ ಭೂಪ್ರದೇಶವನ್ನು ನುಸುಳಿತ್ತು. ಅದನ್ನು ಹೊಡೆದುರಳಿಸಲಾಗಿದೆ ಎಂದು ಸೇನೆ ಹೇಳಿದೆ.
.ಇಸ್ರೇಲ್, ನಮ್ಮ ನಾಯಕ ಯಹ್ಯಾ ಸಿನ್ವರ್ರನ್ನು ಹತ್ಯೆಗೈದಿದೆ: ಖಚಿತಪಡಿಸಿದ ಹಮಾಸ್.
ನೆತನ್ಯಾಹು ಅವರ ರಜಾ ದಿನಗಳ ಮನೆ ಇರುವ ಕರಾವಳಿ ಪಟ್ಟಣದಲ್ಲಿ ಸ್ಫೋಟಗಳು ಕೇಳಿಬಂದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಇಸ್ರೇಲಿ ಆ್ಯಂಬುಲೆನ್ಸ್ ಸೇವೆ ಮತ್ತು ಪೊಲೀಸ್ ವರದಿ ಹೇಳಿದೆ.

ಹಿಜ್ಬುಲ್ಲಾ ಅಥವಾ ಇತರ ಯಾವುದೇ ಸಂಘಟನೆಗಳು ತಕ್ಷಣವೇ ಡ್ರೋನ್ ದಾಳಿಯ ಹೊಣೆ ಹೊತ್ತಿಲ್ಲ.
.ಗಾಜಾ ಶಾಲೆಯ ಮೇಲೆ ಇಸ್ರೇಲ್ ದಾಳಿ; ಮಕ್ಕಳೂ ಸೇರಿದಂತೆ ಕನಿಷ್ಠ 28 ಮಂದಿ ಸಾವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.