ಬಾಸ್ಟನ್: 1969ರಲ್ಲಿ ಕೈಗೊಂಡಿದ್ದ ಬಾಹ್ಯಾಕಾಶ ಕಾರ್ಯಕ್ರಮದಡಿ ‘ಅಪೊಲೊ 11’ ಗಗನನೌಕೆಯು ಚಂದ್ರನಿಂದ ಸಂಗ್ರಹಿಸಿದ್ದ ದೂಳು ಮತ್ತು ಪ್ರಯೋಗಕ್ಕೆ ಬಳಸಿದ್ದ ಜಿರಳೆಗಳನ್ನು ಮಾರಾಟ ಮಾಡದಂತೆ ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ನಾಸಾ) ಬಾಸ್ಟನ್ ಮೂಲದ ಹರಾಜು ಕಂಪನಿ ಆರ್‌ಆರ್ ಆಕ್ಷನ್‌ಗೆ ಸೂಚಿಸಿದೆ.

ಸುಮಾರು 40 ಮಿಲಿ ಗ್ರಾಂ ಚಂದ್ರನ ದೂಳು ಮತ್ತು ಮೂರು ಮೃತ ಜಿರಳೆಗಳನ್ನು ಹೊಂದಿರುವ ಸೀಸೆ ಸೇರಿದಂತೆ ಪ್ರಯೋಗಕ್ಕೆ ಬಳಸಬೇಕಿದ್ದ ವಸ್ತುಗಳು ಕನಿಷ್ಠ ₹ 3.13 ಕೋಟಿಗೆ (4 ಲಕ್ಷ ಡಾಲರ್) ಮಾರಾಟವಾಗುವ ನಿರೀಕ್ಷೆಯಿತ್ತು. ಆದರೆ, ನಾಸಾದ ಸೂಚನೆ ಮೇರೆಗೆ ಅವುಗಳನ್ನು ಹರಾಜಿನಿಂದ ವಾಪಸ್ ಪಡೆಯಲಾಗಿದೆ ಆರ್‌ಆರ್ ಆಕ್ಷನ್ ತಿಳಿಸಿದೆ.

‘ಅಪೊಲೊ 11’ ಗಗನನೌಕೆಯು ಚಂದ್ರನಿಂದ 21.3 ಕೆ.ಜಿ ಶಿಲೆಗಳನ್ನು ಭೂಮಿಗೆ ಹೊತ್ತುತಂದಿತ್ತು. ಈ ಪೈಕಿ ಒಂದಿಷ್ಟನ್ನು ಕ್ರಿಮಿ ಕೀಟಗಳಿಗೆ ತಿನಿಸಿ, ಚಂದ್ರನ ಶಿಲೆಗಳಲ್ಲಿ ರೋಗಕಾರಕ ಅಂಶವಿದೆಯೇ ಎಂಬುದನ್ನು ಪತ್ತೆ ಮಾಡಲು ಪರೀಕ್ಷೆ ನಡೆಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.