ಬ್ಯಾಂಕಾಕ್: ಮ್ಯಾನ್‌ಮಾರ್‌ನ ಮಾನವ ಹಕ್ಕು ಹೋರಾಟಗಾರ್ತಿ ಆ್ಯಂಗ್ ಸಾನ್ ಸೂ ಕಿ ಅವರನ್ನು 15 ವರ್ಷಗಳ ಕಾಲ ಗೃಹಬಂಧನದಲ್ಲಿ ಇರಿಸಿದ್ದ ಮನೆಯನ್ನು ಕೋರ್ಟ್ ಆದೇಶದ ಅನುಸಾರ ಬುಧವಾರ ಹರಾಜು ಕೂಗಲಾಯಿತು. ಆದರೆ ಅದನ್ನು ಖರೀದಿಸಲು ಯಾರೂ ಮುಂದೆ ಬರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ!

ಸೂ ಕಿ ಅವರನ್ನು ಈ ಮನೆಯಲ್ಲಿ ಸರಿಸುಮಾರು 15 ವರ್ಷ ಬಂಧನದಲ್ಲಿ ಇರಿಸಲಾಗಿತ್ತು. ಈ ಮನೆಯು ಸೂ ಕಿ ಅವರು ಮ್ಯಾನ್‌ಮಾರ್‌ನ ಮಿಲಿಟರಿ ವಿರುದ್ಧ ನಡೆಸಿದ ಅಹಿಂಸಾತ್ಮಕ ಹೋರಾಟದ ಹೆಗ್ಗುರುತು ಎಂದು ಹಲವರು ಭಾವಿಸಿದ್ದಾರೆ.

ಯಾಂಗೋನ್‌ನಲ್ಲಿ ಇರುವ ಈ ಮನೆ ಹಾಗೂ 1.9 ಎಕರೆ ಆಸ್ತಿಯನ್ನು ಕನಿಷ್ಠ ₹748 ಕೋಟಿಗೆ ಮಾರಾಟ ಮಾಡಬೇಕು. ಅದರಿಂದ ಬರುವ ಹಣವನ್ನು ಸೂ ಕಿ ಮತ್ತು ಅವರ ಹಿರಿಯ ಅಣ್ಣನ ನಡುವೆ ಹಂಚಬೇಕು ಎಂದು ನ್ಯಾಯಾಲಯವೊಂದು ಜನವರಿಯಲ್ಲಿ ಆದೇಶಿಸಿದೆ. ಈ ಆದೇಶವನ್ನು ಸೂ ಕಿ ಅವರ ವಕೀಲರು ಪ್ರಶ್ನಿಸಿದ್ದಾರೆ.

ಮನೆಯ ಗೇಟಿನ ಎದುರಿನಲ್ಲಿ ಹರಾಜು ನಡೆಯಿತು. 2021ರಲ್ಲಿ ಮ್ಯಾನ್‌ಮಾರ್ ಮಿಲಿಟರಿಯು, ಸೂ ಕಿ ಅವರ ಚುನಾಯಿತ ಸರ್ಕಾರದಿಂದ ಅಧಿಕಾರವನ್ನು ಕಸಿದುಕೊಂಡಿತು. ಸೂ ಕಿ ಅವರ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಲಾಯಿತು. ಅವರು ಈಗ 27 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.

‘ಹರಾಜು ಪ್ರಕ್ರಿಯೆಯ ವೇಳೆ ಯಾರೂ ಬಿಡ್ ಸಲ್ಲಿಸಿಲ್ಲ. ಹರಾಜು ವಿಫಲವಾಗಿದೆ’ ಎಂದು ಜಿಲ್ಲಾ ನ್ಯಾಯಾಲಯದ ಅಧಿಕಾರಿಯೊಬ್ಬರು ಪ್ರಕಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.