ಬೈರೂತ್: ಲೆಬನಾನ್ನಲ್ಲಿ ಇಸ್ರೇಲ್ ನಡೆಸುತ್ತಿರುವ ಯುದ್ಧದಿಂದಾಗಿ ಮೂರು ವಾರಗಳಲ್ಲಿ 4 ಲಕ್ಷಕ್ಕೂ ಅಧಿಕ ಮಕ್ಕಳು ನಿರಾಶ್ರಿತರಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ಏಜೆನ್ಸಿಯ ಉನ್ನತ ಅಧಿಕಾರಿಯೊಬ್ಬರು ಸೋಮವಾರ ಹೇಳಿದ್ದಾರೆ.

ಈ ಪುಟ್ಟ ದೇಶವು ಯುದ್ಧದ ನಡುವೆ ಹಲವು ಬಿಕ್ಕಟ್ಟುಗಳನ್ನು ಎದುರಿಸಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ನಿರಾಶ್ರಿತ ಕುಟುಂಬಗಳಿಗೆ ಆಶ್ರಯ ಕಲ್ಪಿಸಿರುವ ಶಾಲೆಗಳಿಗೆ ಭೇಟಿ ನೀಡಿದ ಯುನಿಸೆಫ್ನ ಮಾನವೀಯ ಉಪಕ್ರಮಗಳ ಉಪ ಕಾರ್ಯನಿರ್ವಾಹಕ ನಿರ್ದೇಶಕ ಟೆಡ್ ಚೈಬನ್, ‘ಯುದ್ಧವು ಅನೇಕ ಮಕ್ಕಳ ಮೇಲೆ ಪರಿಣಾಮ ಬೀರಿದೆ. ಇದು ನಮಗೆ ಆಘಾತ ತಂದಿದೆ’ ಎಂದು ತಿಳಿಸಿದ್ದಾರೆ.

‘ಸುಮಾರು 12 ಲಕ್ಷ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಮಕ್ಕಳು ಶಾಲೆಗಳಿಗೆ ಹೋಗಲಾಗದ ಸನ್ನಿವೇಶ ಸೃಷ್ಟಿಸಲಾಗಿದೆ. ಯುದ್ಧದಿಂದ ಶಾಲಾ ಕಟ್ಟಡಗಳು ಹಾನಿಗೀಡಾಗಿವೆ. ಅಳಿದುಳಿದ ಶಾಲಾ ಕಟ್ಟಡಗಳನ್ನು ನಿರಾಶ್ರಿತರ ಆಶ್ರಯ ಕೇಂದ್ರಗಳಾಗಿ ಬಳಸಲಾಗುತ್ತಿದೆ. ಲೆಬನಾನ್, ಸಿರಿಯಾ, ಪ್ಯಾಲೆಸ್ಟೀನ್ನ ಲಕ್ಷಾಂತರ ಮಕ್ಕಳು ಕಲಿಕೆಯಿಂದ ದೂರವಾಗುವ ಅಪಾಯದಲ್ಲಿದ್ದಾರೆ. ಇದು ಚಿಂತೆಗೀಡು ಮಾಡುವ ವಿಷಯ’ ಎಂದು ಅವರು ಹೇಳಿದ್ದಾರೆ.

ಆರೋಗ್ಯ ಸಚಿವಾಲಯದ ಪ್ರಕಾರ, ಲೆಬನಾನ್ನಲ್ಲಿ 2,300ಕ್ಕೂ ಹೆಚ್ಚು ಜನರು ಇಸ್ರೇಲ್ ದಾಳಿಯಿಂದ ಸತ್ತಿದ್ದಾರೆ. ಮೂರು ವಾರಗಳಲ್ಲಿ 100ಕ್ಕೂ ಹೆಚ್ಚು ಮಕ್ಕಳು ಸತ್ತಿದ್ದಾರೆ ಮತ್ತು 800ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಚೈಬಾನ್ ಹೆಳಿದ್ದಾರೆ.

ಗಾಜಾದಲ್ಲಿ ಹಮಾಸ್ ಬಂಡುಕೋರರ ವಿರುದ್ಧ ವರ್ಷದಿಂದ ಯುದ್ಧದಲ್ಲಿ ತೊಡಗಿರುವ ಇಸ್ರೇಲ್, ಸದ್ಯ ಲೆಬನಾನ್ನಲ್ಲೂ ಹಿಜ್ಬುಲ್ಲಾ ಬಂಡುಕೋರರ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸುವ ಜತೆಗೆ ಭೂ ಆಕ್ರಮಣವನ್ನು ಪ್ರಾರಂಭಿಸಿದೆ. ಇದರಿಂದ 12 ಲಕ್ಷ ಜನರು ಮನೆಗಳನ್ನು ತೊರೆದಿದ್ದಾರೆ. ಇವರಲ್ಲಿ ಹೆಚ್ಚಿನವರು ಬೈರೂತ್ ನಗರ ಮತ್ತು ಲೆಬನಾನ್ನ ಉತ್ತರ ಭಾಗದಿಂದ ಇತರೆಡೆಗೆ ಮೂರು ವಾರಗಳಲ್ಲಿ ಪಲಾಯನ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.