ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು, ಚೀನಾ 'ಕ್ವಾಡ್' ಸದಸ್ಯ ರಾಷ್ಟ್ರಗಳನ್ನು ಪರೀಕ್ಷಿಸುತ್ತಿದೆ ಎಂದು ಹೇಳಿರುವುದು ಹಾಟ್ ಮೈಕ್ನಲ್ಲಿ ಸೆರೆಯಾಗಿದೆ. ಚೀನಾ ಶಕ್ತಿಶಾಲಿಯಾಗಿ ಹೊರಹೊಮ್ಮುತ್ತಿರುವುದನ್ನು ಅಮೆರಿಕ ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎಂಬುದು ಇದರಿಂದ ಬಹಿರಂಗವಾಗಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಹಾಗೂ ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಅವರು ಹಾಜರಿದ್ದ 'ಕ್ವಾಡ್' ಶೃಂಗ ಸಭೆಯಲ್ಲಿ ಬೈಡನ್ ಹೇಳಿಕೆ ಪ್ರಕಟವಾಗಿದೆ.

'ಕ್ಸಿ ಜಿನ್ಪಿಂಗ್ (ಚೀನಾ ಅಧ್ಯಕ್ಷ) ದೇಶೀಯ ಆರ್ಥಿಕ ಸವಾಲುಗಳು ಹಾಗೂ ಪ್ರಕ್ಷುಬ್ಧತೆಯನ್ನು ನಿಯಂತ್ರಿಸುವುದರ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ ಎಂದು ಭಾವಿಸಿದ್ದೇವೆ. ಚೀನಾ ಅಧ್ಯಕ್ಷರು ರಾಜತಾಂತ್ರಿಕ ಅವಕಾಶಗಳನ್ನೇ ಖರೀದಿಸಲು ನೋಡುತ್ತಿದ್ದಾರೆ. ದೇಶದ ಹಿತದೃಷ್ಟಿಯಿಂದ ಅವರು ಆಕ್ರಮಣಕಾರಿಯಾಗಿ ಸಾಗುತ್ತಿದ್ದಾರೆ ಎಂದು ನನಗನಿಸುತ್ತಿದೆ' ಎಂದಿದ್ದಾರೆ.

ಮುಂದುವರಿದು, 'ಆಕ್ರಮಣಕಾರಿಯಾಗಿ ನಡೆದುಕೊಳ್ಳುವುದು ಇಂಡೋ–ಪೆಸಿಫಿಕ್ ಭಾಗದ ನಮ್ಮನ್ನೆಲ್ಲ ಆರ್ಥಿಕತೆ, ತಂತ್ರಜ್ಞಾನ ಸೇರಿದಂತೆ ವಿವಿಧ ರೀತಿಯಲ್ಲಿ ಪರೀಕ್ಷಿಸುತ್ತಿದೆ. ಅದೇ ವೇಳೆ, ತೀವ್ರ ಸ್ಪರ್ಧೆಗೆ ತೀವ್ರ ರಾಜತಾಂತ್ರಿಕತೆ ಅಗತ್ಯವಾಗುತ್ತದೆ ಎಂಬುದನ್ನು ನಂಬಿದ್ದೇವೆ' ಎಂದು ತಿಳಿಸಿದ್ದಾರೆ.

ದಕ್ಷಿಣ ಚೀನಾ ಸಮುದ್ರ ಮತ್ತು ಪೂರ್ವ ಚೀನಾ ಸಮುದ್ರ ಪ್ರದೇಶಗಳಲ್ಲಿ ಪ್ರಾದೇಶಿಕ ವಿವಾದಗಳನ್ನು ಚೀನಾ ಸೃಷ್ಟಿಸಿದೆ.

ದಕ್ಷಿಣ ಚೀನಾ ಸಮುದ್ರದ ಮೇಲೆ ಸಾರ್ವಭೌಮತ್ವ ಪ್ರತಿಪಾದಿಸುತ್ತಿರುವ ಚೀನಾ ನಡೆಯನ್ನು ವಿಯೆಟ್ನಾಂ, ಮಲೇಷ್ಯಾ, ಫಿಲಿಪ್ಪೀನ್ಸ್, ಬ್ರೂನೈ ಮತ್ತು ತೈವಾನ್ ತೀವ್ರವಾಗಿ ವಿರೋಧಿಸುತ್ತಿವೆ.

ಭಾಷಣಕಾರರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಮತ್ತು ಪ್ರಸಾರ ಮಾಡಲು ಹಾಟ್ ಮೈಕ್ ಅಥವಾ ಮೈಕ್ರೊಫೋನ್ ಬಳಸಲಾಗುತ್ತದೆ. ಭಾಷಣಕಾರರು ಇಲ್ಲದ ಸಂದರ್ಭದಲ್ಲಿಯೂ ಅವುಗಳನ್ನು ಬಳಸಬಹುದು. ದಾಖಲಿಸಲಾಗಿರುವ ಧ್ವನಿ ಕೆಲವೊಮ್ಮೆ ಭಾಷಣಕಾರರ ಅರಿವಿಗೆ ಬಾರದೆ ಪ್ರಸಾರವಾಗುತ್ತವೆ.
.ನಮ್ಮ ಸಂದೇಶ ಸ್ಪಷ್ಟವಾಗಿದೆ: 'ಕ್ವಾಡ್' ಶೃಂಗ ಸಭೆಯಲ್ಲಿ ಪ್ರಧಾನಿ ಮೋದಿ ಮಾತು.Quad Summit | ಕ್ಯಾನ್ಸರ್ ತಡೆಗಟ್ಟಲು ಮಹತ್ವದ ಯೋಜನೆ ಘೋಷಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.