ಮಾಸ್ಕೊ: ರಷ್ಯಾದ ವಿರುದ್ಧದ ಪಾಶ್ಚಾತ್ಯ ರಾಷ್ಟ್ರಗಳ ನಿರ್ಬಂಧಗಳು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ಐಎಸ್ಎಸ್) ಪತನಕ್ಕೆ ಕಾರಣವಾಗಬಹುದು ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ‘ರೋಸ್ಕೋಸ್ಮೊಸ್ನ’ ಮುಖ್ಯಸ್ಥ ಡಿಮಿಟ್ರಿ ರಗೋಜಿನ್ ಶನಿವಾರ ಎಚ್ಚರಿಸಿದ್ದಾರೆ.

ರಷ್ಯಾ ವಿರುದ್ಧದ ದಂಡನಾತ್ಮಕ ಕ್ರಮಗಳನ್ನು ಜಗತ್ತು ಹಿಂಪಡೆಯಬೇಕು ಎಂದೂ ಅವರು ಆಗ್ರಹಿಸಿದ್ದಾರೆ.

ಐಎಸ್ಎಸ್ಗೆ ಸೇವೆ ಒದಗಿಸುತ್ತಿರುವ ರಷ್ಯಾದ ಗಗನ ನೌಕೆಗಳ ಕಾರ್ಯಾಚರಣೆಗೆ ಜಗತ್ತಿನ ನಿರ್ಬಂಧಗಳು ಅಡ್ಡಿಯಾಗಲಿವೆ. ಇದು, ಬಾಹ್ಯಾಕಾಶ ನಿಲ್ದಾಣದ ನಿರ್ವಹಣೆಯಲ್ಲಿನ ರಷ್ಯಾದ ಪಾತ್ರದ ಮೇಲೆ ಪರಿಣಾಮ ಬೀರಲಿದೆ. ಅಂತಿಮವಾಗಿ 500 ಟನ್ ತೂಕದ ಐಎಸ್ಎಸ್ ಸಮುದ್ರಕ್ಕೆ ಅಥವಾ ಭೂಮಿಗೆ ಬೀಳಬಹುದು ಎಂದು ರಗೋಜಿನ್ ಎಚ್ಚರಿಸಿದ್ದಾರೆ.

ಉಕ್ರೇನ್ ವಿರುದ್ಧ ಸಮರ ಸಾರಿದ ರಷ್ಯಾದ ವಿರುದ್ಧ ಪಾಶ್ಚಾತ್ಯ ರಾಷ್ಟ್ರಗಳು ನಿರ್ಬಂಧಗಳನ್ನು ವಿಧಿಸುತ್ತಲೇ, ರಗೋಜಿನ್ ಅವರು ಐಎಸ್ಎಸ್ನ ಪತನದ ಮಾತುಗಳನ್ನು ಈ ಹಿಂದೆಯೇ ಆಡಿದ್ದರು. ತಮ್ಮ ಮಾತುಗಳನ್ನು ಅವರು ಪುನರುಚ್ಚರಿಸಿರುವುದು ಆತಂಕಕ್ಕೆ ಕಾರಣವಾಗಿದೆ.

ರಷ್ಯಾ ಐಎಸ್ಎಸ್ನ ಸಂಚಲನೆ, ತೇಲುವಿಕೆ ಮತ್ತು ನಿರ್ವಹಣೆಯ ಹೊಣೆಯನ್ನು ಹೊಂದಿದೆ.

ಐಎಸ್ಎಸ್ ಪತನವಾದರೆ ಭಾರತ ಅಥವಾ ಚೀನಾದ ಮೇಲೆಯೇ ಬೀಳುವ ಸಾಧ್ಯತೆಗಳು ಹೆಚ್ಚಿವೆ ಎಂದು ರಗೋಜಿನ್ ಈ ಹಿಂದೆಯೇ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.