ವಾಷಿಂಗ್ಟನ್: ಸೇನಾ ನಾಯಕತ್ವದ ವಿರುದ್ಧ ದಂಗೆ ಎದ್ದಿದ್ದ ಖಾಸಗಿ ಸೇನಾ ಪಡೆ 'ವ್ಯಾಗ್ನರ್' ಗುಂಪಿನ ನಾಯಕ ಯೆವ್ಗೆನಿ ಪ್ರಿಗೋಷಿನ್ ಯೋಜನೆಯು ರಷ್ಯಾ ಸೇನಾಧಿಕಾರಿಗೆ ಮೊದಲೇ ಗೊತ್ತಿತ್ತು ಎಂದು 'ನ್ಯೂ ಯಾರ್ಕ್ ಟೈಮ್ಸ್' ಪತ್ರಿಕೆ ಮಂಗಳವಾರ ವರದಿ ಮಾಡಿದೆ.

ಉ್ರಕೇನ್ನಲ್ಲಿ ಮಿಲಿಟರಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಉಪ ಕಮಾಂಡರ್ ಸೆರ್ಗೇ ಸುರೊವಿಕಿನ್ ಅವರಿಗೆ 'ವ್ಯಾಗ್ನರ್' ಗುಂಪಿನ ದಂಗೆ ಯೋಜನೆ ಮೊದಲೇ ತಿಳಿದಿತ್ತು ಎಂದು ಹೇಳಲಾಗಿದೆ.

ಗುಪ್ತಚರ ಮಾಹಿತಿ ಆಧರಿಸಿ ಅಮೆರಿಕ ಅಧಿಕಾರಿಗಳು ಮಾತನಾಡಿದ್ದು, ಉಕ್ರೇನ್ನಲ್ಲಿ ರಷ್ಯಾ ಸೇನೆಯ ಕಮಾಂಡರ್ ಆಗಿದ್ದ ಸೆರ್ಗೇ ಸುರೊವಿಕಿನ್ ಅವರು ಕಳೆದವಾರ ದಂಗೆ ಏಳಲು ಪ್ರಿಗೋಷಿನ್ಗೆ ನೆರವಾಗಿದ್ದರೇ ಎಂಬುದನ್ನು ತಿಳಿಯಲು ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ರಷ್ಯಾ ಸೇನೆಯ ಇತರ ಅಧಿಕಾರಿಗಳಿಗೂ ಈ ವಿಚಾರ ಗೊತ್ತಿರುವ ಸಾಧ್ಯತೆ ಇದೆ ಎಂದೂ ಅಧಿಕಾರಿಗಳು ಹೇಳಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.

ಈ ಕುರಿತಂತೆ ಯುಎಸ್ ರಕ್ಷಣಾ ಇಲಾಖೆ ಪ್ರಧಾನ ಕಚೇರಿ ಪೆಂಟಗಾನ್, ರಷ್ಯಾ ಅಧ್ಯಕ್ಷರ ಅಧಿಕೃತ ನಿವಾಸ ಕ್ರೆಮ್ಲಿನ್ ಹಾಗೂ ರಷ್ಯಾ ರಕ್ಷಣಾ ಸಚಿವಾಲಯ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕಳೆದ ವಾರಾಂತ್ಯದಲ್ಲಿ ವ್ಯಾಗ್ನರ್ ಗುಂಪು ನಡೆಸಿದ ಕ್ಷಿಪ್ರ ದಂಗೆಯು ಮಾತುಕತೆ ಮೂಲಕ ಅಂತ್ಯಗೊಂಡಿದೆ. ಇದರ ಬೆನ್ನಲ್ಲೇ ವ್ಯಾಗ್ನರ್ ನಾಯಕ ಪ್ರಿಗೋಷಿನ್ ಅವರನ್ನು ಬೆಲಾರಸ್ಗೆ ಗಡಿಪಾರು ಮಾಡಲಾಗಿದೆ.

ದೇಶದಲ್ಲಿ ಅಂತರ್ಯುದ್ಧ ಕೊನೆಗೊಳಿಸಿದ್ದಕ್ಕಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇನಾ ಪಡೆಗಳನ್ನು ಶ್ಲಾಘಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.