ಮ್ಯಾಡ್ರಿಡ್: ಭಾರಿ ಮಳೆಯಿಂದಾಗಿ ಸ್ಪೇನ್ನಲ್ಲಿ ಭೀಕರ ಪ್ರವಾಹ ಸಂಭವಿಸಿದ್ದು, ಸಾವಿಗೀಡಾದವರ ಸಂಖ್ಯೆ 202ಕ್ಕೆ ಏರಿಕೆಯಾಗಿದೆ. ಕನ್ವೆನ್ಷನ್ ಸೆಂಟರ್ನಲ್ಲಿ ತಾತ್ಕಾಲಿಕ ಶವಾಗಾರ ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಪತ್ತೆಯಾದವರ ಶೋಧಕ್ಕಾಗಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ. ಸ್ಪೇನ್ನಲ್ಲಿ ಈ ಶತಮಾನದಲ್ಲಿ ಸಂಭವಿಸಿದ ಭೀಕರ ದುರಂತ ಇದಾಗಿದೆ.

ನೂರಾರು ಕಾರುಗಳು ಮಣ್ಣಿನಡಿ ಸಿಲುಕಿದ್ದು, ಅದರೊಳಗೆ ಸಿಲುಕಿರುವ ಮೃತದೇಹಗಳನ್ನು ಹೊರತೆಗೆಯಲಾಗುತ್ತಿದೆ.

ನೂರಾರು ವಾಹನಗಳು ನೀರಿನಲ್ಲಿ ಕೊಚ್ಚಿಹೋಗಿದ್ದು, ಮರಗಳು ಬೇರು ಸಹಿತ ಬುಡಮೇಲಾಗಿವೆ. ವಲೆನ್ಸಿಯಾದಲ್ಲಿ ಭಾರಿ ಹಾನಿಯಾಗಿದೆ. ರಸ್ತೆಗಳು ಹಾನಿಗೊಂಡಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡಿವೆ.

‘ಕೇವಲ ಎಂಟು ಗಂಟೆಗಳಲ್ಲಿ ಒಂದು ವರ್ಷದ ಮಳೆ ಸುರಿದಿದೆ. ನದಿಗಳು ಉಕ್ಕಿ ಹರಿಯುತ್ತಿದ್ದು, ರಸ್ತೆಗಳು, ರೈಲುಮಾರ್ಗಗಳು ಮತ್ತು ಸೇತುವೆಗಳು ಕೊಚ್ಚಿಹೋಗಿವೆ. ಜತೆಗೆ, ಸಾವಿರಾರು ಹೆಕ್ಟೇರ್ ಕೃಷಿಭೂಮಿ ಜಲಾವೃತವಾಗಿದೆ’ ಎಂದು ಸ್ಪೇನ್ನ ಸಹಕಾರ ಸಚಿವ ಏಂಜೆಲ್ ವಿಕ್ಟರ್ ಟೊರೆಸ್ ತಿಳಿಸಿದ್ದಾರೆ.

ಸುಮಾರು 75,000 ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ವೆಲೆನ್ಸಿಯಾದ ಕೆಲವು ಪ್ರದೇಶಗಳಲ್ಲಿ ಇಂದು ಕೂಡ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.