ವಾಷಿಂಗ್ಟನ್: ಅಮೆರಿಕ ಮತ್ತು ಬಾಂಗ್ಲಾದೇಶ ಸೇರಿದಂತೆ ಜಗತ್ತಿನಾದ್ಯಂತ ಹಿಂದೂಗಳ ಮಾನವ ಹಕ್ಕುಗಳನ್ನು ರಕ್ಷಿಸುವ ಮತ್ತು ಮೂಲಭೂತ ಎಡಪಂಥೀಯರ ಧರ್ಮ ವಿರೋಧಿ ಕಾರ್ಯಸೂಚಿಯಿಂದ ರಕ್ಷಿಸುವ ಭರವಸೆ ನೀಡಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು ಹಿಂದೂ ಅಮೆರಿಕನ್ ಗುಂಪುಗಳು ಶ್ಲಾಘಿಸಿವೆ.

‘ಹಿಂದೂಸ್ ಫಾರ್ ಅಮೆರಿಕ ಫಸ್ಟ್’ನ ಸಂಸ್ಥಾಪಕ ಮತ್ತು ಅಧ್ಯಕ್ಷ ಉತ್ಸವ್ ಸಂದುಜಾ ಅವರು, ‘ಟ್ರಂಪ್ ಅವರಿಗೆ ನಾವು ಕೃತಜ್ಞರಾಗಿರುತ್ತೇವೆ. ಕಮಲಾ ಅವರು ಈ ವಿಷಯದ ಬಗ್ಗೆ ಏನನ್ನೂ ಹೇಳದಿರುವುದು ಬೇಸರ ತರಿಸಿದೆ. ಇದರಿಂದಾಗಿಯೇ ಈ ಚುನಾವಣೆಯಲ್ಲಿ ದೊಡ್ಡ ಬದಲಾವಣೆ ಆಗಲಿದೆ ಎಂದು ನಾನು ಭಾವಿಸುತ್ತೇವೆ’ ಎಂದು ಪಿಟಿಐಗೆ ಪ್ರತಿಕ್ರಿಯಿಸಿದ್ದಾರೆ.

‘ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಶೋಚನೀಯವಾಗಿದೆ. ಅಲ್ಲಿ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ’ ಎಂದೂ ಅವರು ಹೇಳಿದ್ದಾರೆ. ಟ್ರಂಪ್ ಹೇಳಿಕೆಗೆ ‘ಹಿಂದೂಆ್ಯಕ್ಷನ್’ ಸಹ ಕೃತಜ್ಞತೆ ಸಲ್ಲಿಸಿದೆ.

‘ಈ ವಿಷಯಕ್ಕೆ ಸಂಬಂಧಿಸಿದಂತೆ ಟ್ರಂಪ್ ಅವರು ನೈತಿಕವಾಗಿ ಬೆಂಬಲ ನೀಡಿದ್ದಾರೆ. ಅಲ್ಲದೆ ಬಾಂಗ್ಲಾದೇಶದಲ್ಲಿನ ಹಿಂದೂಗಳ ಹತ್ಯಾಕಾಂಡವನ್ನು ಖಂಡಿಸಿದ್ದಾರೆ. ಇದಕ್ಕಾಗಿ ಟ್ರಂಪ್ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ’ ಎಂದು ಭಾರತೀಯ ಅಮೆರಿಕನ್ ನಾಥನ್ ಪುನ್ವಾನಿ ತಿಳಿಸಿದ್ದಾರೆ.

‘ಭಾರತೀಯ ಅಮೆರಿಕನ್ನರಲ್ಲಿ ಶೇ 60ರಷ್ಟು ಮಂದಿ ಕಮಲಾ ಅವರನ್ನು ಬೆಂಬಲಿಸುತ್ತಿರುವುದನ್ನು ನಾವು ಗಮನಿಸಿದ್ದೇವೆ. ಕಳೆದ ಚುನಾವಣೆಯಲ್ಲಿ ಶೇ 68ರಷ್ಟು ಮಂದಿ ಬೈಡನ್ಗೆ ಬೆಂಬಲ ನೀಡಿದ್ದರು ಎಂದು ಭಾವಿಸುತ್ತೇನೆ. ಆದರೆ, ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಅವರಿಗೆ ಬೆಂಬಲ ಇಳಿಮುಖವಾಗುತ್ತಿದೆ. ಟ್ರಂಪ್ ಕಳೆದ ಶೇ 22ರಷ್ಟು ಭಾರತೀಯ ಅಮೆರಿಕನ್ನರ ಬೆಂಬಲ ಪಡೆದಿದ್ದರು. ಈ ಬಾರಿ ಅದು ಶೇ 32ಕ್ಕೆ ಏರಿಕೆಯಾಗಿದೆ ಎಂಬುದನ್ನು ಕಾರ್ನೆಗೀ ಎಂಡೋಮೆಂಟ್ನ ಸಮೀಕ್ಷೆ ತಿಳಿಸಿದೆ ಎಂದು ಸಂದುಜಾ ವಿವರಿಸಿದ್ದಾರೆ.

ಟ್ರಂಪ್ ಅವರ ಈ ಹೇಳಿಕೆಯು ಭಾರತೀಯ ಅಮೆರಿಕನ್ನರ ಮತ್ತು ಹಿಂದೂ ಅಮೆರಿಕನ್ನರ ಕಣ್ಣು ತೆರೆಸುತ್ತದೆ. ಅದು ಟ್ರಂಪ್ಗೆ ವರವಾಗಿ ಪರಿಣಮಿಸಬಹುದು ಎಂದು ಅವರು ಹೇಳಿದ್ದಾರೆ.

ಟ್ರಂಪ್ ಹೇಳಿದ್ದೇನು?

ಹಿಂದೂಗಳಿಗೆ ಗುರುವಾರ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದ ಡೊನಾಲ್ಡ್ ಟ್ರಂಪ್ ಬಾಂಗ್ಲಾದೇಶದಲ್ಲಿ ಹಿಂದೂಗಳು ಕ್ರಿಶ್ಚಿಯನ್ನರು ಮತ್ತು ಅಲ್ಪಸಂಖ್ಯಾತರ ವಿರುದ್ಧ ನಡೆದ ಹಿಂಸಾಚಾರವನ್ನು ತೀವ್ರವಾಗಿ ಖಂಡಿಸಿದ್ದರು. ಅಲ್ಲದೆ ಆ ದೇಶ ಸಂಪೂರ್ಣ ಅವ್ಯವಸ್ಥೆಯ ಸ್ಥಿತಿಯಲ್ಲಿಯೇ ಉಳಿದಿದೆ ಎಂದು ದೂರಿದ್ದರು.

‘ನನ್ನ ಅವಧಿಯಾಗಿದ್ದರೆ ಇದೆಲ್ಲ ಸಂಭವಿಸುತ್ತಿರಲಿಲ್ಲ’ ಎಂದ ಅವರು ‘ಕಮಲಾ ಮತ್ತು ಜೋ ಬೈಡನ್ ಅವರು ಅಮೆರಿಕ ಮತ್ತು ಪ್ರಪಂಚದಾದ್ಯಂತ ಹಿಂದೂಗಳನ್ನು ನಿರ್ಲಕ್ಷಿಸಿದ್ದಾರೆ. ಅವರು ಇಸ್ರೇಲ್ ಮತ್ತು ಉಕ್ರೇನ್ನಿಂದ ಹಿಡಿದು ನಮ್ಮ ದಕ್ಷಿಣ ಗಡಿಗೂ ವಿಪತ್ತು ತಂದಿದ್ದಾರೆ. ಆದರೆ ನಾವು ಅಮೆರಿಕವನ್ನು ಪುನಃ ಬಲಗೊಳಿಸುತ್ತೇವೆ ಮತ್ತು ಶಕ್ತಿಯ ಮೂಲಕ ಶಾಂತಿಯನ್ನು ಮರಳಿಸುತ್ತೇವೆ’ ಎಂದು ತಿಳಿಸಿದ್ದರು.

‘ಮೂಲಭೂತ ಎಡಪಂಥೀಯ ಧರ್ಮ ವಿರೋಧಿ ಕಾರ್ಯಸೂಚಿಗಳಿಂದ ಅಮೆರಿಕದಲ್ಲಿರುವ ಹಿಂದೂಗಳನ್ನು ರಕ್ಷಿಸುತ್ತೇವೆ. ನಿಮ್ಮ ಸ್ವಾತಂತ್ರ್ಯಕ್ಕಾಗಿ ನಾವು ಹೋರಾಡುತ್ತೇವೆ. ನನ್ನ ಆಡಳಿತದಲ್ಲಿ ಭಾರತ ಮತ್ತು ನನ್ನ ಉತ್ತಮ ಗೆಳೆಯ ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ಉತ್ತಮ ಪಾಲುದಾರಿಕೆಯನ್ನು ಬಲಪಡಿಸುತ್ತೇನೆ’ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.