ವಾಷಿಂಗ್ಟನ್: ಅಮೆರಿಕದಲ್ಲಿ ಸ್ಥಗಿತಗೊಂಡಿದ್ದ ಆಡಳಿತ ಸೋಮವಾರದಿಂದ ಪುನರಾರಂಭವಾಗಿದ್ದು, ಎಂಟು ಲಕ್ಷ ಸರ್ಕಾರಿ ನೌಕರರು ಕೆಲಸಕ್ಕೆ ಹಾಜರಾದರು.

ಅಮೆರಿಕ–ಮೆಕ್ಸಿಕೊ ಗಡಿಯಲ್ಲಿ ತಡೆಗೋಡೆ ನಿರ್ಮಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರ ವಿರೋಧಿಸಿ, 35 ದಿನಗಳಿಂದ ಸರ್ಕಾರದ ಆಡಳಿತ ಸ್ಥಗಿತಗೊಂಡಿತ್ತು.ಅಮೆರಿಕದ ಇತಿಹಾಸದಲ್ಲಿಯೇ ಇದು ಅತಿ ದೀರ್ಘಾವಧಿ ಆಡಳಿತ ಸ್ಥಗಿತವೆನಿಸಿದೆ. ಸರ್ಕಾರದ ಹಣವನ್ನು ಈ ಗೋಡೆ ನಿರ್ಮಾಣಕ್ಕೆ ಬಳಸಿಕೊಳ್ಳುವುದಿಲ್ಲ ಎಂದು ಡೊನಾಲ್ಡ್ ಟ್ರಂಪ್ ಮತ್ತು ಸಂಸತ್ತು ಭರವಸೆ ನೀಡಿದ ನೀಡಿದ ನಂತರ, ನೌಕರರು ಕೆಲಸಕ್ಕೆ ಹಾಜರಾಗಿದ್ದಾರೆ.

ಅಕ್ರಮ ವಲಸೆ, ಮಾದಕ ವಸ್ತು ಕಳ್ಳಸಾಗಣೆ, ಮಾನವ ಸಾಗಣೆಯನ್ನು ತಡೆಯುವ ಉದ್ದೇಶದಿಂದ ಅಮೆರಿಕ–ಮೆಕ್ಸಿಕೊ ಗಡಿಯಲ್ಲಿ ₹4,061 ಕೋಟಿ (5.7 ಶತಕೋಟಿ ಡಾಲರ್) ವೆಚ್ಚದ ಬೃಹತ್ ತಡೆಗೋಡೆ ನಿರ್ಮಿಸಲು ಟ್ರಂಪ್ ಉದ್ದೇಶಿಸಿದ್ದರು.

‘ಗೋಡೆ ನಿರ್ಮಾಣವನ್ನು ವಿರೋಧಿಸುವ ನಮ್ಮ ನಿಲುವಿನಲ್ಲಿ ಯಾವುದೇ ರಾಜಿ ಇಲ್ಲ. ಸಹೋದ್ಯೋಗಿ ಸಂಸದರು ಕೂಡ ಟ್ರಂಪ್ ಅವರ ಈ ನಿರ್ಧಾರವನ್ನು ವಿರೋಧಿಸಬೇಕು’ ಎಂದು ವಿರೋಧ ಪಕ್ಷದ ನಾಯಕ ಡ್ಯಾನ್ ಕಿಲ್ದಿ ಹೇಳಿದ್ದಾರೆ.

ಗೋಡೆ ನಿರ್ಮಾಣಕ್ಕೆ ಹಣ ಸಂಗ್ರಹಿಸಲು ರಾಷ್ಟ್ರೀಯ ತುರ್ತುಪರಿಸ್ಥಿತಿ ಘೋಷಣೆಗೂ ಟ್ರಂಪ್ ಸಿದ್ಧತೆ ನಡೆಸಿದ್ದರು. ವಿರೋಧ ಪಕ್ಷ ಡೆಮಾಕ್ರಟಿಕ್‌ನ ಸದಸ್ಯರಲ್ಲದೆ, ಆಡಳಿತ ಪಕ್ಷ ರಿಪಬ್ಲಿಕ್‌ನ ಕೆಲವು ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.