ಬೂಮ್ರಾ vs ಗಿಲ್, ಪಂತ್
ಅತ್ಯುತ್ತಮ ಫಿಟ್ನೆಸ್ ಕಾಪಾಡಿಕೊಂಡಿರುವ ಕೊಹ್ಲಿ, ಬಹುತೇಕ ನಾಲ್ಕು ವರ್ಷಗಳಿಂದ ಎದುರಿಸುತ್ತಿರುವ ಫಾರ್ಮ್ ಸಮಸ್ಯೆಯಿಂದ ಹೊರಬರಬಹುದೆಂಬ ನಿರೀಕ್ಷೆ ಇಟ್ಟುಕೊಳ್ಳಬಹುದು. ಆದರೆ, ರೋಹಿತ್ ಶರ್ಮಾ ಅವರನ್ನು ಮುಂದಿನ ಡಬ್ಲ್ಯುಟಿಸಿ ಆವೃತ್ತಿಯಲ್ಲಿ ಕಾಣುವುದು ಅನುಮಾನ. ನಂತರ ಹೊಸ ನಾಯಕನ ಆಯ್ಕೆಯಾಬೇಕಿದೆ. ಜಸ್ಪ್ರೀತ್ ಬೂಮ್ರಾ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ. ಆದರೆ, ಕಾರ್ಯಭಾರ ನಿರ್ವಹಣೆಗೆ ಅನುಗುಣವಾಗಿ ಅವರು ದೀರ್ಘಾವಧಿಗೆ ಪರಿಹಾರವಾಗಲಾರರು. ಅವರಿಗೆ ಬದಲಾಗಿ, ಶುಭುಮನ್ ಗಿಲ್ ಮತ್ತು ರಿಷಭ್ ಪಂತ್ ಅವರು ಟೆಸ್ಟ್ ನಾಯಕತ್ವ ವಹಿಸಿಕೊಳ್ಳಲು ಮುಂಚೂಣಿಯಲ್ಲಿದ್ದಾರೆ.