ಮುಂಬೈ: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ 0–3 ಅಂತರದಲ್ಲಿ ಸೋಲನುಭವಿಸಿದೆ. ಈ ಸೋಲಿನ ಜವಾಬ್ದಾರಿಯನ್ನು ಸಂಪೂರ್ಣವಾಗಿ ಹೊರುತ್ತೇನೆ ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮೂರನೇ ಮತ್ತು ಕೊನೆಯ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು 25 ರನ್ಗಳಿಂದ ಸೋಲು ಕಂಡಿದ್ದು, ಇದೇ ಮೊದಲ ಬಾರಿಗೆ ತವರಿನಲ್ಲಿ 0–3ರ ಅಂತರದಲ್ಲಿ ಸೋತಿದೆ.

‘ಇದು ನನ್ನ ವೃತ್ತಿ ಜೀವನದ ಅತ್ಯಂತ ಕೆಟ್ಟ ಸರಣಿ. ತವರಿನಲ್ಲಿ ಈ ರೀತಿ ಸೋತಿದ್ದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ’ ಎಂದು ರೋಹಿತ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

‘ಸರಣಿ ಪಂದ್ಯಗಳಲ್ಲಿ ಸೋಲುವುದು ಸುಲಭವಲ್ಲ, ಅದನ್ನು ಸುಲಭವಾಗಿ ಅರಗಿಸಿಕೊಳ್ಳಲೂ ಸಾಧ್ಯವಿಲ್ಲ. ಅತ್ಯುತ್ತಮವಾಗಿ ಆಡಲು ನಮಗೆ ಸಾಧ್ಯವಾಗಲಿಲ್ಲ. ಸರಣಿಯುದ್ದಕ್ಕೂ ನ್ಯೂಜಿಲೆಂಡ್ ಉತ್ತಮವಾಗಿ ಆಡಿದೆ. ನಾವು ಬಹಳಷ್ಟು ತಪ್ಪುಗಳನ್ನು ಮಾಡಿದ್ದೇವೆ. ಮೊದಲ ಎರಡು ಟೆಸ್ಟ್ಗಳಲ್ಲಿ ಮೊದಲ ಇನಿಂಗ್ಸ್ನಲ್ಲಿ ಸಾಕಷ್ಟು ರನ್ ಗಳಿಸಲಿಲ್ಲ. ಈ ಪಂದ್ಯದಲ್ಲಿ ನಾವು 30 ರನ್ (28) ಮುನ್ನಡೆ ಸಾಧಿಸಿದ್ದೆವು. ಹೀಗಾಗಿ ಗುರಿಯನ್ನು ಬೆನ್ನಟ್ಟಲು ಸಾಧ್ಯವಾಯಿತು. ಆದರೆ ಒಗ್ಗಟ್ಟಾಗಿ ಆಡವಾಡಲು ಸಾಧ್ಯವಾಗಲಿಲ್ಲ. ಈ ರೀತಿಯ ಗುರಿಯನ್ನು ಬೆನ್ನಟ್ಟುವಾಗ ಸ್ಕೋರ್ ಬೋರ್ಡ್ನಲ್ಲಿ ಕಾಣುವ ರನ್ಗಳನ್ನು ನೀವು ನೋಡುತ್ತೀರಿ. ಅದು ನನ್ನ ತಲೆಯಲ್ಲಿತ್ತು. ಅದನ್ನು ಗಳಿಸಲು ಸಾಧ್ಯವಾಗಲಿಲ್ಲ’ ಎಂದು ಬೇಸರಿಸಿಕೊಂಡರು.

‘ಕೆಲವು ಯೋಜನೆಗಳೊಂದಿಗೆ ನಾನು ಪಂದ್ಯವಾಡಲು ಹೋಗಿದ್ದೆ, ಆದರೆ ಸರಣಿಯಲ್ಲಿ ಅದನ್ನು ಹೊರತರಲು ಸಾಧ್ಯವಾಗಲಿಲ್ಲ. ಹೀಗಾಗಿ ಅತ್ಯುತ್ತಮ ಆಟ ನೀಡಲು ಸಾಧ್ಯವಾಗಲಿಲ್ಲ. ಪರಿಣಾಮ ಈ ಸ್ಥಿತಿಯನ್ನು ಎದುರಿಸಬೇಕಾಯಿತು. ನಾನು ನಾಯಕನಾಗಿ ತಂಡವನ್ನು ಮುನ್ನಡೆಸುವಲ್ಲಿ ಮತ್ತು ಬ್ಯಾಟಿಂಗ್ ಮಾಡುವಲ್ಲಿಯೂ ಅತ್ಯುತ್ತಮನಾಗಲಿಲ್ಲ. ಒಟ್ಟಾರೆ ನಮ್ಮ ಪ್ರದರ್ಶನ ಕಳಪೆಯಾಗಿತ್ತು’ ಎಂದರು.

ತಂಡದ ಕೋಚ್ ಗೌತಮ್ ಗಂಭೀರ್, ನೆರವು ಸಿಬ್ಬಂದಿಯಾದ ನೆದರ್ಲೆಂಡ್ಸ್ನ ರಯಾನ್ ಟೆನ್ ಡೋಷೆ ಮತ್ತು ಅಭಿಷೇಕ್ ನಾಯರ್ ಅವರನ್ನು ರೋಹಿತ್ ಸಮರ್ಥಿಸಿಕೊಂಡರು. ‘ತರಬೇತಿ ಸಿಬ್ಬಂದಿ ಉತ್ತಮವಾಗಿದ್ದಾರೆ. ಅವರು ಆಟಗಾರರನ್ನು ಅರ್ಥ ಮಾಡಿಕೊಳ್ಳುವ ಮತ್ತು ತಂಡ ಕಾರ್ಯನಿರ್ವಹಿಸುವ ರೀತಿ ಅರಿತುಕೊಳ್ಳುತ್ತಿದ್ದಾರೆ. ಅವರನ್ನು ಉತ್ತಮ ಮನಃಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವುದು ಆಟಗಾರರ ಹೊಣೆ’ ಎಂದರು.
.IND vs NZ | ಎಜಾಜ್ ಮ್ಯಾಜಿಕ್; ಭಾರತದ ಎದುರು ಕ್ಲೀನ್ ಸ್ವೀಪ್ ಸಾಧಿಸಿದ ಕಿವೀಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.