ಕ್ಯೊಟೊ: ಚಂದ್ರ ಹಾಗೂ ಮಂಗಳನ ಅಂಗಳದಲ್ಲಿನ ಸಂಶೋಧನೆಯಲ್ಲಿ ಮರವನ್ನು ಬಳಸುವ ಉದ್ದೇಶದಿಂದ ಜಪಾನ್ನ ಬಾಹ್ಯಾಕಾಶ ಸಂಶೋಧಕರು ಮರದಿಂದ ತಯಾರಿಸಿದ ಉಪಗ್ರಹವನ್ನು ಮಂಗಳವಾರ ನಸುಕಿನಲ್ಲಿ ಸ್ಪೇಸ್ಎಕ್ಸ್ನ ರಾಕೆಟ್ ಮೂಲಕ ಹಾರಿಸಿದ್ದಾರೆ. ಇಂಥ ಪ್ರಯತ್ನ ಜಗತ್ತಿನಲ್ಲೇ ಮೊದಲನೆಯದು ಎಂದು ವರದಿಯಾಗಿದೆ.

ಮರ ಎಂಬುದಕ್ಕೆ ಲ್ಯಾಟಿನ್ ಭಾಷೆಯಲ್ಲಿರುವ ಪದವನ್ನು ಬಳಸಿ ‘ಲಿಗ್ನೊಸ್ಯಾಟ್’ ಎಂಬ ಹೆಸರನ್ನು ಈ ಉಪಗ್ರಹಕ್ಕೆ ಇಡಲಾಗಿದೆ. ಕ್ಯೊಟೊ ವಿಶ್ವವಿದ್ಯಾಲಯ ಹಾಗೂ ಸುಮಿಟೊಮೊ ಫಾರೆಸ್ಟರಿ ಜಂಟಿಯಾಗಿ ಇದನ್ನು ಅಭಿವೃದ್ಧಿಪಡಿಸಿವೆ. ಸ್ಪೇಸ್ಎಕ್ಸ್ ಮೂಲಕ ಈ ಮರದ ಉಪಗ್ರಹವು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಲಿದೆ. ನಂತರ ಇದನ್ನು ಭೂಮಿಯಿಂದ 400 ಕಿ.ಮೀ. ದೂರದಲ್ಲಿರುವ ಕಕ್ಷೆಗೆ ಸೇರಿಸಲು ಸಂಶೋಧಕರು ಯೋಜನೆ ರೂಪಿಸಿದ್ದಾರೆ. ಅಂಗೈ ಅಗಲದಷ್ಟಿರುವ ಲಿಗ್ನೊಸ್ಯಾಟ್ ಅನ್ನು ಉಪಗ್ರಹಕ್ಕೆ ಕಳುಹಿಸುವ ಮೂಲಕ ನವೀಕರಿಸಬಹುದಾದ ವಸ್ತುವಿನ ಮೇಲೆ ಕಾಸ್ಮಿಕ್ ಪರಿಣಾಮವನ್ನು ಅರಿಯುವ ಮೂಲಕ ಬಾಹ್ಯಾಕಾಶದಲ್ಲಿ ಮನುಷ್ಯನ ಜೀವನ ಕುರಿತ ಅಧ್ಯಯನ ಇದಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಚಂದ್ರ, ಮಂಗಳನ ಅಂಗಳದಲ್ಲಿ ಮರದ ಮನೆ ಕಟ್ಟುವ ಗುರಿ

‘ಬಾಹ್ಯಾಕಾಶದಲ್ಲಿ ವಾಸಿಸಲು ಮನೆಯ ನಿರ್ಮಾಣಕ್ಕೆ ಅಗತ್ಯವಿರುವ ಮರದಿಂದ ಉಪಗ್ರಹ ನಿರ್ಮಿಸಲಾಗಿದೆ. ಗಗನಯಾನಿಗಳು ನೌಕೆಯ ಮೂಲಕ ಬಾಹ್ಯಾಕಾಶ ತಲುಪಿ ಮನುಷ್ಯನ ಇರುವಿಕೆಯ ಸಾಧ್ಯತೆ ಕುರಿತು ಕ್ಯೊಟೊ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸುತ್ತಿದೆ. ಚಂದ್ರ ಹಾಗೂ ಮಂಗಳನ ಅಂಗಳದಲ್ಲಿ ಗಿಡಗಳನ್ನು ನೆಟ್ಟು, ಮರದ ಮನೆಗಳನ್ನು ನಿರ್ಮಿಸುವ 50 ವರ್ಷಗಳ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಹಾಗೆಯೇ ನಾಸಾ ಪ್ರಮಾಣೀಕೃತ ಉಪಗ್ರಹ ಅಭಿವೃದ್ಧಿಗೆ ಯೋಗ್ಯವಾದ ಮರವನ್ನು ಸಿದ್ಧಪಡಿಸುವ ಗುರಿಯೂ ಇದೆ’ ಎಂದು ವಿಜ್ಞಾನಿ ಟಾಕೊ ಡಾಯ್ ತಿಳಿಸಿದ್ದಾರೆ.

‘1900ರಲ್ಲಿ ವಿಮಾನವನ್ನು ಮರದಿಂದ ನಿರ್ಮಿಸಲಾಗಿತ್ತು. ಬಾಹ್ಯಾಕಾಶದಲ್ಲಿ ನೀರು ಅಥವಾ ಆಮ್ಲಜನಕ ಇಲ್ಲದ ಕಾರಣ ಮರವು ಭೂಮಿಗಿಂತ ಹೆಚ್ಚು ದೀರ್ಘ ಕಾಲ ಬಾಳುವ ಸಾಮರ್ಥ್ಯ ಹೊಂದಿದೆ. ಅವಧಿ ಪೂರ್ಣಗೊಂಡ ಇಂಥ ಮರದ ಉಪಗ್ರಹಗಳು ಬಾಹ್ಯಾಕಾಶ ತ್ಯಾಜ್ಯವಾಗುವ ಬದಲು, ಬೇಗನೆ ಕಳಿತು ವಾತಾವರಣ ಸೇರಲಿವೆ. ಹೀಗಾಗಿ ಮರದ ಉಪಗ್ರಹಗಳ ಬಳಕೆ ಕಾರ್ಯಸಾಧ್ಯ’ ಎಂದು ಕ್ಯೊಟೊ ವಿಶ್ವವಿದ್ಯಾಲಯದ ಅರಣ್ಯ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಕೊಜಿ ಮುರಾಟಾ ಹೇಳಿದ್ದಾರೆ.

ಲೋಹದ ಉಪಗ್ರಹಗಳ ನಿಷೇಧಕ್ಕೆ ಆಗ್ರಹ

‘ಸದ್ಯ ಬಳಕೆಯಲ್ಲಿರುವ ಉಪಗ್ರಹಗಳು ಅಲ್ಯುಮಿನಿಯಂ ಆಕ್ಸೈಡ್ ಎಂಬ ರಾಸಾಯನಿಕವನ್ನು ವಾತಾವರಣಕ್ಕೆ ಹೊರಸೂಸುತ್ತವೆ. ಆದರೆ ಮರದಿಂದ ಇದು ಅಸಾಧ್ಯ. ಹೀಗಾಗಿ ಭವಿಷ್ಯದಲ್ಲಿ ಲೋಹದ ಉಪಗ್ರಹಗಳನ್ನು ನಿಷೇಧಿಸಬೇಕು. ಒಂದೊಮ್ಮೆ ನಮ್ಮ ಈ ಚೊಚ್ಚಲ ಪ್ರಯೋಗಕ್ಕೆ ಯಶಸ್ಸು ಸಿಕ್ಕಲ್ಲಿ, ಇಲಾನ್ ಮಸ್ಕ್ ಅವರ ಸ್ಪೇಸ್ಎಕ್ಸ್ಗೆ ಇದನ್ನು ಮುಂದುವರಿಸಲು ಕೋರಲಾಗುವುದು’ ಎಂದಿದ್ದಾರೆ.

ಈ ಉಪಗ್ರಹ ಬಳಕೆಗಾಗಿ ಜಪಾನ್ನಲ್ಲೇ ಬೆಳೆಯುವ ಮಂಗೋಲಿಯಾದ ಹೊನೊಕಿ ಎಂಬ ಮರವನ್ನು ಬಳಸಲಾಗಿದೆ. ಇದನ್ನು ಖಡ್ಗದ ಕವಚಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಈಗಾಗಲೇ 10 ತಿಂಗಳು ಬಳಸಲಾಗಿದೆ. ಈ ಉಪಗ್ರಹ ನಿರ್ಮಾಣದಲ್ಲಿ ಯಾವುದೇ ಲೋಹದ ಸ್ಕ್ರೂಗಳು ಹಾಗೂ ಅಂಟು ಬಳಸಿಲ್ಲ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಬಾಹ್ಯಾಕಾಶದಲ್ಲಿ ಪ್ರತಿ 45 ನಿಮಿಷಗಳಿಗೊಮ್ಮೆ ಸೂರ್ಯನ ಬೆಳಕು ಹಾಗೂ ಕತ್ತಲು ಆವರಿಸುವುದರಿಂದ ಮೈನಸ್ 100 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶದಿಂದ 100 ಡಿಗ್ರಿ ಸೆಲ್ಸಿಯಸ್ವರೆಗೂ ತಾಪಮಾನ ಬದಲಾಗುತ್ತದೆ. ಒಮ್ಮೆ ಕಕ್ಷೆಗೆ ಸೇರಿದ ನಂತರ ಮುಂದಿನ ಆರು ತಿಂಗಳ ಕಾಲ ಈ ಉಪಗ್ರಹದಲ್ಲಿರುವ ಎಲೆಕ್ಟ್ರಾನಿಕ್ ಉಪಕರಣಗಳು ಅಲ್ಲಿನ ಪರಿಸರದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬ ಮಾಹಿತಿಯನ್ನು ನಿರಂತರವಾಗಿ ಭೂಮಿ ಮೇಲಿರುವ ಕೇಂದ್ರಕ್ಕೆ ಕಳುಹಿಸುತ್ತದೆ.

ಡಾಟಾ ಸೆಂಟರ್ಗಳನ್ನೂ ಮರದಿಂದ ನಿರ್ಮಿಸುವ ಉದ್ದೇಶ

ಬಾಹ್ಯಾಕಾಶದ ವಿಕಿರಣಗಳು ಮರದ ಉಪಗ್ರಹದ ಒಳಗಿರುವ ಸೆಮಿಕಂಡಕ್ಟರ್ ಮೇಲೆ ಕಡಿಮೆ ಪ್ರಮಾಣದ ಹಾನಿ ಮಾಡುತ್ತಿದೆಯೇ ಎಂಬುದನ್ನು ಲಿಂಗೊಸ್ಯಾಟ್ ಅಳೆಯಲಿದೆ. ಇದು ಸಾಧ್ಯವಾದಲ್ಲಿ, ಡಾಟಾ ಸೆಂಟರ್ಗಳನ್ನೂ ಭವಿಷ್ಯದಲ್ಲಿ ಮರದಿಂದಲೇ ನಿರ್ಮಿಸುವ ಕುರಿತೂ ಚಿಂತಿಸಬಹುದು ಎಂದು ಸುಮಿಟೊಮೊ ಫಾರೆಸ್ಟರಿ ತ್ಸುಕುಬಾ ಸಂಶೋಧನಾ ಕೇಂದ್ರದ ವ್ಯವಸ್ಥಾಪಕ ಕೆಂಜಿ ಕರಿಯಾ ತಿಳಿಸಿದ್ದಾರೆ.

‘ಮರದ ಬಳಕೆ ಈಗಿಲ್ಲದಿರಬಹುದು. ಆದರೆ ಚಂದ್ರ ಹಾಗೂ ಮಂಗಳನ ಅಂಗಳದಲ್ಲಿ ನಾಗರಿಕತೆ ಆರಂಭಿಸಬೇಕೆಂದರೆ ಮರವನ್ನೇ ಹೊಸ ತಂತ್ರಜ್ಞಾನ ರೂಪದಲ್ಲಿ ಬಳಸುವುದು ಸೂಕ್ತ. ಇದರಿಂದ ಮರದ ಉದ್ದಿಮೆಯೂ ಬೆಳೆಯಲಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.