ವಾಷಿಂಗ್ಟನ್: ಕಿರು ವಿಡಿಯೊ ಹಂಚಿಕೊಳ್ಳುವ ಚೀನಾ ಮೂಲದ ಟಿಕ್ಟಾಕ್ ಆ್ಯಪ್, ದೇಶದ ಭದ್ರತೆಗೆ ಅಪಾಯ ತರುತ್ತಿದೆ ಎಂದು ಎಫ್ಬಿಐ ಅಮೆರಿಕ ಸರ್ಕಾರವನ್ನು ಎಚ್ಚರಿಸಿದೆ.

ಚೀನಾ ಸರ್ಕಾರ, ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಟಿಕ್ಟಾಕ್ ಆ್ಯಪ್ನ ಅಲ್ಗಾರಿದಂ ಮೇಲೆ ನಿಯಂತ್ರಣ ಹೊಂದಿದೆ. ಅಮೆರಿಕದಲ್ಲಿ ಟಿಕ್ಟಾಕ್ ನಿರ್ವಹಿಸುವ ರೀತಿಯೇ ಬೇರೆಯಿದೆ. ವಿಡಿಯೊ ಕಂಟೆಂಟ್ಗಳನ್ನು ಬದಲಾಯಿಸಿ, ಬಳಕೆದಾರರ ಮನಸ್ಸಿಗೆ ಘಾಸಿ ತರುವ ಮತ್ತು ರಾಷ್ಟ್ರದ ಭದ್ರತೆಗೆ ಅಪಾಯ ಉಂಟುಮಾಡುವ ಆ್ಯಪ್ ಇದಾಗಿದೆ ಎಂದು ಎಫ್ಬಿಐ ತಿಳಿಸಿದೆ.

ಚೀನಾದಲ್ಲಿ ಟಿಕ್ಟಾಕ್ ಆ್ಯಪ್ ಕಾರ್ಯ ನಿರ್ವಹಿಸುವ ವಿಧಾನವೇ ಬೇರೆ ಇದೆ. ಆದರೆ, ಅಮೆರಿಕಾಗೆ ಪ್ರತ್ಯೇಕ ಅಲ್ಗಾರಿದಂ ಬಳಕೆ ಮಾಡುವ ಮೂಲಕ ರಾಷ್ಟ್ರದ ಭಧ್ರತೆಗೆ ಆಂತರಿಕ ಧಕ್ಕೆ ಉಂಟುಮಾಡಲಾಗುತ್ತಿದೆ ಎಂದು ಎಫ್ಬಿಐ ತಿಳಿಸಿದೆ.

ಅಮೆರಿಕ ಸರ್ಕಾರದ ಜತೆ ಚೀನಾದ ಬೈಟ್ಡ್ಯಾನ್ಸ್ ಒಡೆತನದ ಟಿಕ್ಟಾಕ್, ಸಮರ್ಪಕವಾದ ಮಾಹಿತಿಯನ್ನು ಹಂಚಿಕೊಳ್ಳುತ್ತಿಲ್ಲ. ಇದು ನಿಜಕ್ಕೂ ಆತಂಕಕಾರಿ ಸಂಗತಿ. ಈ ಬಗ್ಗೆ ನಾವು ಗಮನ ಹರಿಸಬೇಕಿದೆ. ಬಳಕೆದಾರರ ಮಾಹಿತಿಯನ್ನು ಕದ್ದು, ಚೀನಾ ಅದನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಎಫ್ಬಿಐ ನಿರ್ದೇಶಕ ಕ್ರಿಸ್ ವೇ ಹೇಳಿದ್ದಾರೆ.

YouTube: ದೇಶದಲ್ಲಿ 17 ಲಕ್ಷ ವಿಡಿಯೊಗಳನ್ನು ಡಿಲೀಟ್ ಮಾಡಿದ ಯೂಟ್ಯೂಬ್

ಭಾರತದಲ್ಲಿ ಟಿಕ್ಟಾಕ್ ಸಹಿತ ಚೀನಾ ಮೂಲದ ಹಲವು ಆ್ಯಪ್ಗಳನ್ನು ದೇಶದ ಭದ್ರತೆಗೆ ಅಪಾಯ ಎಂದು ಪರಿಗಣಿಸಿ ನಿಷೇಧಿಸಲಾಗಿದೆ.

WhatsApp: ಹೊಸ ಅಪ್ಡೇಟ್, ಒನ್ ವ್ಯೂ ಸ್ಕ್ರೀನ್ಶಾಟ್, ರೆಕಾರ್ಡಿಂಗ್ ನಿರ್ಬಂಧ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.