ನವದೆಹಲಿ: 'ಮೆಟಾ ಎಐ' ಈಗ ಹಿಂದಿ ಸೇರಿದಂತೆ ಏಳು ಭಾಷೆಗಳಲ್ಲಿ ಲಭ್ಯವಿದೆ ಎಂದು ಸಾಮಾಜಿಕ ಮಾಧ್ಯಮ ದಿಗ್ಗಜ ಕಂಪನಿ ಮೆಟಾ ಪ್ರಕಟಿಸಿದೆ.

ಇದರೊಂದಿಗೆ ಕೃತಕ ಬುದ್ಧಿಮತ್ತೆಯ (ಎಐ) ಆಧಾರಿತವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಕ್ಷೇತ್ರದತ್ತ ಮೆಟಾ ತನ್ನ ಸಾನಿಧ್ಯವನ್ನು ಮತ್ತಷ್ಟು ವಿಸ್ತರಿಸಿದೆ.

ಸಾಮಾಜಿಕ ಮಾಧ್ಯಮಗಳಾದ ವಾಟ್ಸ್ಆ್ಯಪ್, ಇನ್ಸ್ಟಾಗ್ರಾಮ್, ಮೆಸೆಂಜರ್ ಮತ್ತು ಫೇಸ್ಬುಕ್ ವೇದಿಕೆಗಳಲ್ಲಿ ಮೆಟಾ ಎಐ ಸೌಲಭ್ಯ ಬಳಕೆದಾರರಿಗೆ ಲಭ್ಯವಾಗಲಿದೆ.

ಇಂಗ್ಲಿಷ್, ಹಿಂದಿ, ಫ್ರೆಂಚ್, ಜರ್ಮನ್, ಇಟಲಿಯನ್, ಪೋರ್ಚುಗೀಸ್ ಮತ್ತು ಸ್ಪ್ಯಾನಿಶ್ ಭಾಷೆಗಳಲ್ಲಿ ಮೆಟಾ ಎಐ ಲಭ್ಯವಿರುತ್ತದೆ ಎಂದು ಕ್ಯಾಲಿಫೋರ್ನಿಯಾ ಮೂಲದ ಕಂಪನಿ ತಿಳಿಸಿದೆ.

ಇದರೊಂದಿಗೆ ಮೆಟಾ ಎಐ ಈಗ 22 ರಾಷ್ಟ್ರಗಳಲ್ಲಿ ಲಭ್ಯವಾಗಿದೆ. ಹೊಸದಾಗಿ ಅರ್ಜೆಂಟೀನಾ, ಚಿಲಿ, ಕೊಲಂಬಿಯಾ, ಈಕ್ವಾಡಾರ್, ಮೆಕ್ಸಿಕೊ, ಪೆರು ಮತ್ತು ಕ್ಯಾಮರಾನ್ ಸೇರ್ಪಡೆಗೊಂಡಿದೆ ಎಂದು ತಿಳಿಸಿದೆ.
.ಕೇಳಿದ್ದನ್ನು 'ಕೊಡುವ' ಕೃತಕ ಬುದ್ಧಿಮತ್ತೆಯ ಜಾಣರು.Facebook, Instagram ತಾಂತ್ರಿಕ ಸಮಸ್ಯೆ ಪರಿಹಾರ: ಮೆಟಾ ವಕ್ತಾರ ಆ್ಯಂಡಿ ಸ್ಟೋನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.