ಬೆಂಗಳೂರು: ಇತ್ತೀಚಿಗೆ ಕೆಲವು ಯುಟ್ಯೂಬರ್‌ಗಳು ತಮ್ಮ ಅತಿರೇಕದ ವರ್ತನೆಗಳಿಂದ ಮತ್ತು ಹುಚ್ಚಾಟಗಳಿಂದಲೇ ಹೆಚ್ಚು ಕುಖ್ಯಾತಿಗೆ ಒಳಗಾಗುತ್ತಿದ್ದಾರೆ.

ಹಾಗೇಯ ಇಲ್ಲೊಬ್ಬ ಯುಟ್ಯೂಬರ್ ಸ್ನೇಕ್ ಪಟಾಕಿಗಳನ್ನು (ಹಾವಿನ ಗುಳಿಗೆ ಪಟಾಕಿಗಳು) ರೈಲು ಹಳಿ ಮೇಲೆ ಇಟ್ಟು ಬೆಂಕಿ ಹಚ್ಚಿ, ಮೋಜು ನೋಡಿರುವ ಘಟನೆ ಬೆಳಕಿಗೆ ಬಂದಿದೆ.

ಘಟನೆಗೆ ಸಂಬಂಧಿಸಿದ ವಿಡಿಯೊವನ್ನು Trains Of India ಎಂಬ ಟ್ವಿಟರ್ ಹ್ಯಾಂಡಲ್ X ತಾಣದಲ್ಲಿ ಹಂಚಿಕೊಂಡಿದ್ದು ‘ದುಷ್ಕರ್ಮಿ ಯುಟ್ಯೂಬರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ’ ಎಂದು ವಾಯವ್ಯ ರೈಲ್ವೆ ವಲಯಕ್ಕೆ ಮನವಿ ಮಾಡಿದೆ.

ಈ ವಿಡಿಯೊವನ್ನು ನವೆಂಬರ್ 7 ರಂದು ಹಂಚಿಕೊಳ್ಳಲಾಗಿದ್ದು ರಾಜಸ್ತಾನದ Phulera-Ajmer ವಿಭಾಗದ Dantra ರೈಲು ನಿಲ್ದಾಣದ ಬಳಿ ಘಟನೆ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.

ವಿಡಿಯೊದ ಆರಂಭದಲ್ಲಿ ಆ ಯುಟ್ಯೂಬರ್, ರೈಲ್ವೆ ಹಳಿ ಮೇಲೆ ಪಟಾಕಿಗೆ ಬೆಂಕಿ ಹಚ್ಚಿ, ದಟ್ಟ ಹೊಗೆ ಹೋಗುವುದನ್ನು ನೋಡುತ್ತಾ... ಎಷ್ಟು ಮಜಾ ಬರುತ್ತಿದೆ ನೋಡಿ ಎನ್ನುತ್ತಾನೆ. ನಂತರ, ದಟ್ಟ ಹೊಗೆ ಮಾಲಿನ್ಯವನ್ನು ಹೆಚ್ಚಿಸುತ್ತಿದೆ’ ಎಂದೆನ್ನುತ್ತಾನೆ.

ಇದಕ್ಕೆ ವಾಯವ್ಯ ರೈಲ್ವೆ ಕೂಡ ಪ್ರತಿಕ್ರಿಯಿಸಿದ್ದು, ಪ್ರಕರಣವನ್ನು ತನ್ನ ವ್ಯಾಪ್ತಿಯ ರೈಲ್ವೆ ಪೊಲೀಸರಿಗೆ ವರ್ಗಾಯಿಸಿದೆ.

ಇನ್ನು ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು, ಯುವಕನ ವಿರುದ್ಧ ಅನೇಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈಲು ಅವಘಡಗಳನ್ನು ತಡೆಯಲು ರೈಲ್ವೆ ಇಲಾಖೆ, ರೈಲ್ವೆ ಪೊಲೀಸರು ಎಷ್ಟು ಪ್ರಯತ್ನಪಟ್ಟರೂ ಇಂತಹ ಕೆಲವು ಬುದ್ದಿಗೇಡಿಗಳಿಂದಲೇ ಆಗಾಗ ಅಪಘಾತಗಳು ಸಂಭವಿಸುತ್ತವೆ. ರೈಲ್ವೆ ಪೊಲೀಸರು ಕೂಡಲೇ ಆತನನ್ನು ಬಂಧಿಸಿ ಜೈಲಿಗೆ ಅಟ್ಟಬೇಕು ಎಂದು ಮನವಿ ಮಾಡಿದ್ದಾರೆ.
.ಡೀಪ್ಫೇಕ್ ವಿಡಿಯೊ: ನಟಿ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.