ಲಂಡನ್: ಇನ್ಫೊಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರ ಮಗಳು ಅಕ್ಷತಾ ಮೂರ್ತಿ ಅವರ ಗಂಡ ರಿಷಿ ಸುನಕ್ ಅವರು ಸೋಮವಾರ ಇತಿಹಾಸ ಸೃಷ್ಟಿಸಿದ್ದಾರೆ. ಬ್ರಿಟನ್‌ನ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ನಾಯಕತ್ವವನ್ನು ಪಡೆದುಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಹೀಗಾಗಿ, ಆ ದೇಶದ ಪ್ರಧಾನಿ ಹುದ್ದೆಗೆ ಆಯ್ಕೆಯಾದ ಬಿಳಿಯನಲ್ಲದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಸ್ಪರ್ಧೆಯಿಂದ ಸೋಮವಾರ ಹಿಂದಕ್ಕೆ ಸರಿದಾಗಲೇ ಪಕ್ಷದ ನಾಯಕತ್ವವು ರಿಷಿ ಅವರ ಕೈಸೇರುತ್ತದೆ ಎಂಬುದು ಬಹುತೇಕ ಖಚಿತವಾಗಿತ್ತು. ಆಗ ಪೆನಿ ಮಾರ್ಡಂಟ್ ಮಾತ್ರ ಸ್ಪರ್ಧೆಯಲ್ಲಿದ್ದರು. ನಾಮಪತ್ರಕ್ಕೆ ಅಗತ್ಯವಾಗಿದ್ದ ನೂರು ಸಂಸದರ ಬೆಂಬಲ ಪಡೆಯುವಲ್ಲಿ ಅವರು ವಿಫಲರಾದರು. ಹಾಗಾಗಿ, ಅವರು ಹಿಂದಕ್ಕೆ ಸರಿದರು. ಬಳಿಕ, ರಿಷಿ ಅವರ ಗೆಲುವನ್ನು ಘೋಷಿಸಲಾಯಿತು.

ಬೋರಿಸ್ ಜಾನ್ಸನ್ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ, ನಾಯಕತ್ವಕ್ಕೆ ನಡೆದ ಸ್ಪರ್ಧೆಯಲ್ಲಿ ಲಿಜ್ ಟ್ರಸ್ ಎದುರು ರಿಷಿ ಸೋತಿದ್ದರು. ಆದರೆ, ಪ್ರಧಾನಿ ಹುದ್ದೆಗೇರಿದ 44 ದಿನಗಳಲ್ಲಿಯೇ ಟ್ರಸ್ ಅವರು ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರಿಂದ ಪಕ್ಷದ ನಾಯಕ ಸ್ಥಾನ ಮತ್ತು ಪ್ರಧಾನಿ ಹುದ್ದೆಗೆ ವ್ಯಕ್ತಿಯೊಬ್ಬರನ್ನು ಆಯ್ಕೆ ಮಾಡಬೇಕಿತ್ತು. ಬೋರಿಸ್ ಜಾನ್ಸನ್ ಅವರ ಸಚಿವ ಸಂಪುಟದಲ್ಲಿ ರಿಷಿ ಅವರು ಹಣಕಾಸು ಸಚಿವರಾಗಿದ್ದರು. ರಿಷಿ ಅವರ ಬಂಡಾಯವೇ ಬೋರಿಸ್ ಅವರು ಹುದ್ದೆ ಕಳೆದುಕೊಳ್ಳುವುದಕ್ಕೂ ಕಾರಣವಾಗಿತ್ತು.

ಪಕ್ಷದ ನಾಯಕತ್ವ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಘೋಷಿಸಿದ್ದ ರಿಷಿ ಅವರಿಗೆ ನೂರು ಸಂಸದರ ಬೆಂಬಲ ಶುಕ್ರವಾರವೇ ದೊರೆತಿತ್ತು. ಈಗ ಅವರಿಗೆ ಸುಮಾರು 200 ಸಂಸದರ ಬೆಂಬಲ ಲಭಿಸಿದೆ. ಭಾರತವು ದೀಪಾವಳಿ ಹಬ್ಬ ಆಚರಿಸುತ್ತಿರುವ ಸಂದರ್ಭದಲ್ಲಿಯೇ ರಿಷಿ ಅವರಿಗೆ ಮಹತ್ವದ ಹುದ್ದೆ ದೊರೆತಿದೆ.

ಬ್ರಿಟನ್‌ನ ಸುಮಾರು 2 ಶತಮಾನಗಳ ಇತಿಹಾಸದಲ್ಲಿ, 42 ವರ್ಷದ ರಿಷಿ ಅವರು ಅತ್ಯಂತ ಕಿರಿಯ ಪ್ರಧಾನಿ ಎನಿಸಿಕೊಳ್ಳಲಿದ್ದಾರೆ. ರಿಷಿ ತಕ್ಷಣವೇ ಪ್ರಧಾನಿ ಹುದ್ದೆ ವಹಿಸಿಕೊಳ್ಳುವುದು ಸಾಧ್ಯವಿಲ್ಲ. ಮೊದಲನೆಯದಾಗಿ, ಟ್ರಸ್ ಅವರು ಹುದ್ದೆಗೆ ರಾಜೀನಾಮೆ ಕೊಡಬೇಕು ಮತ್ತು ಅದು ಅಂಗೀಕಾರವಾಗಬೇಕು.

ಅಧಿಕಾರ ಹಸ್ತಾಂತರ ಯಾವಾಗ ನಡೆಯಬೇಕು ಮತ್ತು ಕಾರ್ಯಕ್ರಮ ಹೇಗಿರಬೇಕು ಎಂಬುದರ ಕುರಿತು ಚರ್ಚೆ ಆರಂಭವಾಗಿದೆ ಎಂದು ಟ್ರಸ್ ಅವರ ವಕ್ತಾರರು ತಿಳಿಸಿದ್ದಾರೆ.

ದೊಡ್ಡ ಹೊಣೆಗಾರಿಕೆ

ಬ್ರಿಟನ್ ಆರ್ಥಿಕವಾಗಿ ಅತ್ಯಂತ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ರಿಷಿ ಅವರಿಗೆ ಪ್ರಧಾನಿ ಹುದ್ದೆ ಸಿಕ್ಕಿದೆ. ಆರ್ಥಿಕ ಪ್ರಗತಿ ಅತ್ಯಂತ ನಿಧಾನಗೊಂಡಿದೆ, ಹಣದುಬ್ಬರ ಏರುತ್ತಲೇ ಇದೆ. ಕೊರತೆ ಬಜೆಟ್‌ನಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಣಕಾಸು ವಿಶ್ವಾಸಾರ್ಹತೆ ಕುಗ್ಗಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಹಣಕಾಸು ವಿಶ್ವಾಸಾರ್ಹತೆಯನ್ನು ಮರಳಿ ಸ್ಥಾಪಿಸುವುದು ರಿಷಿ ಅವರ ಮೊದಲ ಹೊಣೆಗಾರಿಕೆ. ನಿರ್ಗಮಿತ ಪ್ರಧಾನಿ ಟ್ರಸ್ ಅವರ ಆರ್ಥಿಕ ನೀತಿಯು ಬ್ರಿಟನ್‌ನ ಬಾಂಡ್ ಮಾರುಕಟ್ಟೆಯು ನೆಲಕಚ್ಚುವಂತೆ ಮಾಡಿತ್ತು. ತೆರಿಗೆ ಕಡಿತ ಮಾಡುವ ಟ್ರಸ್ ಅವರ ನಿರ್ಧಾರವು ಆರ್ಥಿಕವಾಗಿ ಇನ್ನಷ್ಟು ಸಂಕಷ್ಟಕ್ಕೆ ಕಾರಣವಾಗಿತ್ತು.

ತೆರಿಗೆ ಕಡಿತ ಮಾಡದೆ ರಿಷಿ ಅವರಿಗೂ ಬೇರೆ ದಾರಿ ಇಲ್ಲ. ಹಾಗೆಯೇ ಸರ್ಕಾರದ ವೆಚ್ಚವನ್ನೂ ಕಡಿತ ಮಾಡಬೇಕಿದೆ. ಇವೆಲ್ಲವೂ ಜನಪ್ರಿಯವಲ್ಲದ ನಿರ್ಧಾರಗಳು. ಹೀಗಾಗಿ, ಊಹಿಸಲಾಗದ ರಾಜಕೀಯ ಪರಿಣಾಮಗಳು ಉಂಟಾಗಬಹುದು ಎಂದು ವಿಶ್ಲೇಷಕರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.