ವಾಷಿಂಗ್ಟನ್: ಉಕ್ರೇನ್‌ಗೆ ಅತ್ಯಾಧುನಿಕ ರಾಕೆಟ್ ವ್ಯವಸ್ಥೆಯ ಸಹಕಾರ ನೀಡುತ್ತಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಂಗಳವಾರ ಖಚಿತಪಡಿಸಿದ್ದಾರೆ. ರಷ್ಯಾದ ಆಕ್ರಮಣ ಪಡೆಗಳ ಪ್ರಮುಖ ಗುರಿಗಳತ್ತ ನುಗ್ಗುವ ಸಾಮರ್ಥ್ಯವನ್ನು ಅಮೆರಿಕದ ಈ ರಾಕೆಟ್ ಲಾಂಚರ್‌ಗಳು ನೀಡಲಿವೆ.

'ಉಕ್ರೇನಿಯ್ನರಿಗೆ ಅತ್ಯಾಧುನಿಕ ರಾಕೆಟ್ ವ್ಯವಸ್ಥೆಗಳು ಹಾಗೂ ಶಸ್ತ್ರಾಸ್ತ್ರಗಳನ್ನು ಪೂರೈಸಲಿದ್ದೇವೆ. ಅದರಿಂದಾಗಿ ಉಕ್ರೇನ್ ಯುದ್ಧ ಭೂಮಿಯಲ್ಲಿ ನಿರ್ದಿಷ್ಟ ಗುರಿಯ ಮೇಲೆ ದಾಳಿ ನಡೆಸಲು ಸಹಕಾರಿಯಾಗಲಿದೆ' ಎಂದು ಬೈಡನ್ ಹೇಳಿದ್ದಾರೆ.

ಹೈಮರ್ಸ್‌ಗಳನ್ನು (Himars) ಅಥವಾ ಹೈ ಮೊಬಿಲಿಟಿ ಆರ್ಟಿಲರಿ ರಾಕೆಟ್ ಸಿಸ್ಟಮ್ ಅನ್ನು ಕಳುಹಿಸುತ್ತಿರುವುದಾಗಿ ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

ಉಕ್ರೇನ್‌ನ ಪೂರ್ವ ಭಾಗದಲ್ಲಿ ರಷ್ಯಾ ಪಡೆಗಳ ವಿರುದ್ಧದ ಹೋರಾಟದಲ್ಲಿ ಹೆಚ್ಚು ವ್ಯಾಪಿಯ ಗುರಿಯನ್ನು ತಲುಪಬಹುದಾದ ಶಸ್ತ್ರಾಸ್ತ್ರಗಳು ಪ್ರಮುಖ ಪಾತ್ರವಹಿಸಲಿವೆ. ರಾಕೆಟ್ ಲಾಂಚರ್‌ಗಳ ವ್ಯವಸ್ಥೆಗೆ ಅಮೆರಿಕದ ನೆರವು ಹೆಚ್ಚಿನ ಬಲ ನೀಡಲಿದೆ. 'ಹೈಮರ್ಸ್ ಬಹಳ ದೂರದ ಗುರಿಗಳನ್ನು ನಿಖರವಾಗಿ ತಲುಪಲು ಸಹಕಾರಿಯಾಗಿವೆ. ಆದರೆ, ರಷ್ಯಾದ ಆಕ್ರಮಣವನ್ನು ತಪ್ಪಿಸಲು ಹೈಮರ್ಸ್ ಬಳಸಲಾಗುತ್ತದೆಯೇ ಹೊರತು, ರಷ್ಯಾದ ವಿರುದ್ಧ ಅಲ್ಲ' ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹೈಮರ್ಸ್ 300 ಕಿ.ಮೀ. ದೂರದ ಗುರಿಯನ್ನು ತಲುಪಿಸುವ ಸಾಮರ್ಥ್ಯ ಹೊಂದಿವೆ. ಪ್ರಸ್ತುತ ಅಮೆರಿಕ ಉಕ್ರೇನ್‌ಗೆ ನೀಡುತ್ತಿರುವ ಹೈಮರ್ಸ್ 80 ಕಿ.ಮೀ. ವ್ಯಾಪ್ತಿಯನ್ನು ಹೊಂದಿರಲಿವೆ.

ಇದನ್ನೂ ಓದಿ–ತೈಲ ಆಮದು ನಿಷೇಧಿಸಿದರೆ ರಷ್ಯಾ ಯುದ್ಧ ವೆಚ್ಚ ಇಳಿಸಬೇಕಾಗುತ್ತದೆ: ಐರೋಪ್ಯ ಒಕ್ಕೂಟ

ಫೆಬ್ರುವರಿಯಲ್ಲಿ ರಷ್ಯಾ ಮತ್ತು ಉಕ್ರೇನ್ ಸಂಘರ್ಷ ಆರಂಭವಾದಾಗಿನಿಂದ ಅಮೆರಿಕ 4.5 ಬಿಲಿಯನ್ (450 ಕೋಟಿ) ಡಾಲರ್ ಮೊತ್ತದ ಶಸ್ತ್ರಾಸ್ರ ಸಹಕಾರವನ್ನು ಉಕ್ರೇನ್‌ಗೆ ನೀಡಿದೆ.

ಹೈಮರ್ಸ್ ಜೊತೆಗೆ ಆಗಸ ಮಾರ್ಗದಲ್ಲಿ ನಿಗಾವಹಿಸುವ ರಡಾರ್‌ಗಳು, ಕಡಿಮೆ ವ್ಯಾಪ್ತಿಯ ಟ್ಯಾಂಕ್ ನಿರೋಧಕ ರಾಕೆಟ್‌ಗಳು, ಹೆಲಿಕಾಪ್ಟರ್‌ಗಳು, ವಾಹನಗಳು, ಬಿಡಿ ಭಾಗಗಳು ಹಾಗೂ ಇತರೆ ಶಸ್ತ್ರಾಸ್ತ್ರಗಳು ಸೇರಿದಂತೆ 700 ಮಿಲಿಯನ್ (70 ಕೋಟಿ) ಡಾಲರ್ ಮೊತ್ತದ ಸಹಕಾರವನ್ನು ಅಮೆರಿಕ ಬುಧವಾರ ಘೋಷಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.