ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರಿನ ಜಲಯೋಧರು..

Published : 25 ಮೇ 2024, 23:55 IST
Last Updated : 25 ಮೇ 2024, 23:55 IST
ಫಾಲೋ ಮಾಡಿ
Comments
ಬಾವಿ ತೋಡಲು ಹೊರಟ ಜಲಯೋಧರು...
ಬಾವಿ ತೋಡಲು ಹೊರಟ ಜಲಯೋಧರು...
ಇವರ ಕೈಕೆಸರಾದರೆ ಜಲಧಾರೆ...

ಇವರ ಕೈಕೆಸರಾದರೆ ಜಲಧಾರೆ...

ಚಿತ್ರ: ಸೃಷ್ಠಿ ಮಣಿಪಾಲ್

ಹಿರೀಕರಿಂದ ಬಂದ ಬಳುವಳಿ
ನೀರು ಹಾಗೂ ಮಣ್ಣಿನ ಬಗೆಗಿನ ಜ್ಞಾನ ಇವರಿಗೆ ಹಿರೀಕರಿಂದ ಬಂದಿದೆ. ಸಾಂಪ್ರದಾಯಿಕವಾಗಿ ಬಾವಿ ತೋಡುವ ಇವರು, 40-50 ಅಡಿ ಆಳದವರೆಗೂ ಕೊರೆಯುತ್ತಾರೆ. ಕೆಳಗೆ ಹೋದಂತೆಲ್ಲಾ ಆಮ್ಲಜನಕ ಕಡಿಮೆಯಾಗಿ ಮೃತಪಡುವ ಆತಂಕವೂ ಇದೆ. ಭೂತಾಯಿಯ ಮಡಿಲಲ್ಲೇ ಬೆಳೆದ ಇವರಿಗೆ, ಇದನ್ನು ತಿಳಿಯುವ ಕೌಶಲ, ಕಲೆ ರಕ್ತಗತವಾಗಿದೆ. ಸಮಯಪ್ರಜ್ಞೆ ಜೊತೆಗೆ ಅನುಭವವೂ ಬೆನ್ನ ಹಿಂದೆ ಇರುವುದರಿಂದ ಕೆಲಸ ಸವಾಲೆನಿಸದು. ಜಾಗ, ಮಣ್ಣಿನ ವಿಧಾನ, ಭೂಮಿಯ ಮೇಲ್ಮೈ ಲಕ್ಷಣ ನೋಡಿಕೊಂಡು ಕೆಲಸ ಮಾಡುತ್ತಾರೆ. ಆಳವಾದ ಬಾವಿಗೆ ಇಳಿಯುವ ಮುನ್ನ ಮೇಣದಬತ್ತಿಯನ್ನು ಹಚ್ಚಿ ಬುಟ್ಟಿಯಲ್ಲಿ ಕೆಳಗೆ ಇಳಿಸುತ್ತಾರೆ. ಅದು ಆರಿಹೋದರೆ ಆಮ್ಲಜನಕ ಪ್ರಮಾಣ ಕಡಿಮೆ ಇದೆ ಎಂದರ್ಥ. ಹೀಗಾದರೆ ನಾಲ್ಕೈದು ಕೊಡ ನೀರು ಸುರಿದ ಬಳಿಕ ಬಾವಿಗೆ ಇಳಿಯುತ್ತಾರೆ. 
ಮೆಟ್ರೊ ನಿಲ್ದಾಣದ ಗೋಡೆಯಲ್ಲಿ ಬಾವಿ ತೋಡುತ್ತಿರುವ ಜಲಯೋಧರ ಚಿತ್ರ 
ಮೆಟ್ರೊ ನಿಲ್ದಾಣದ ಗೋಡೆಯಲ್ಲಿ ಬಾವಿ ತೋಡುತ್ತಿರುವ ಜಲಯೋಧರ ಚಿತ್ರ 
ಒಡಿಶಾ ಮೂಲದವರು...
ಬೋವಿ ಸಮುದಾಯದವರು ಒಡಿಶಾ ಮೂಲದವರು ಎನ್ನುವುದು ಇದೇ ಸಮುದಾಯದ ದಾವಣಗೆರೆಯ ರವಿಕುಮಾರ್‌ ಎಸ್‌. ನೀಡಿದ ಮಾಹಿತಿ. ಕೆಲಸ ಅರಸಿಕೊಂಡು ದೇಶದ ವಿವಿಧ ಭಾಗಗಳಿಗೆ ವಲಸೆ ಹೋಗಿದ್ದಾರೆ. ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ದೆಹಲಿ, ಹರಿಯಾಣ, ರಾಜಸ್ಥಾನ, ಹಿಮಾಚಲ, ಉತ್ತರ ಪ್ರದೇಶ ಸೇರಿದ ದೇಶದ ವಿವಿಧ ಭಾಗಗಳಲ್ಲಿ ಚದುರಿದ್ದಾರೆ. ಹಿಂದೆ ಕೋಟೆ, ಅರಮನೆ, ಕೆರೆ ನಿರ್ಮಾಣಕ್ಕೆ ಇವರನ್ನು ಬಳಸಲಾಗುತ್ತಿತ್ತು. ದೇಶದ ಪ್ರಮುಖ ಜಲಾಶಯಗಳು, ಸ್ಮಾರಕಗಳ ನಿರ್ಮಾಣದ ಹಿಂದೆ ಈ ಸಮುದಾಯದವರ ಶ್ರಮ ಇದೆ. ಚಾಮರಾಜ ಒಡೆಯರ್ ಅವರ ಕಾಲದಲ್ಲಿ ಶಿಕ್ಷಣದಲ್ಲಿ ಇವರಿಗೆ ಮೀಸಲಾತಿ ನೀಡಲಾಗಿತ್ತಂತೆ. ಕಲ್ಲು ವಡ್ಡರು, ಮಣ್ಣು ವಡ್ಡರು, ಲಕ್ಕ ವಡ್ಡರು, ಉಪ್ಪು ವಡ್ಡರು ಎಂಬ ವೃತ್ತಿ ಆಧಾರಿತ ಗುಂಪುಗಳು ಇವೆ ಎಂದು ಅವರು ಹೇಳಿದರು.
ಈ ಬಾರಿಯಷ್ಟು ನೀರಿನ ಸಮಸ್ಯೆ ಯಾವತ್ತೂ ಎದುರಾಗಿರಲಿಲ್ಲ. ಜೇಬಿಗೆ ಭಾರವಾದರೂ ಟ್ಯಾಂಕ್‌ ನೀರೇ ಅನಿವಾರ್ಯವಾಗಿತ್ತು. ಅದೂ ಕೂಡ ಬಳಕೆಗೆ ಯೋಗ್ಯವಾಗಿರಲಿಲ್ಲ. ನೀರು ಮರುಪೂರಣದ ಬಗ್ಗೆ ಮಾಹಿತಿ ಪಡೆದುಕೊಂಡು ಇಂಗು ಬಾವಿ ತೋಡಿಸಿದ್ದೇನೆ.
ಜಯಲಕ್ಷ್ಮಿ ಹರಿಹರನ್, ಹೊರಮಾವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT