ನವದೆಹಲಿ: ದೇಶದಲ್ಲೆ ಅತೀ ಹೆಚ್ಚು ತೆರಿಗೆ ಪಾವತಿಸುತ್ತಿರುವ ರಾಜ್ಯಗಳಲ್ಲಿ ದೆಹಲಿಯು ಒಂದು. ಕಳೆದ ವರ್ಷ ನಾವು ₹2.32 ಲಕ್ಷ ಕೋಟಿ ತೆರಿಗೆಯನ್ನು ಕೇಂದ್ರ ಸರ್ಕಾರಕ್ಕೆ ಪಾವತಿಸಿದ್ದೇವೆ. ಆದರೂ ಕೇಂದ್ರವು ತೆರಿಗೆ ಪಾಲಿನಲ್ಲಿ ದೆಹಲಿಗೆ ಒಂದು ಪೈಸೆಯೂ ಕೊಟ್ಟಿಲ್ಲ ಎಂದು ಸಚಿವೆ ಅತಿಶಿ ಆಕ್ರೋಶ ಹೊರಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಬಜೆಟ್ನಲ್ಲಿ ದೆಹಲಿ ಮಹಾನಗರ ಪಾಲಿಕೆಗೆ (ಎಂಸಿಡಿ) ₹10 ಸಾವಿರ ಕೋಟಿ ಮೀಸಲಿಡಬೇಕು ಎಂದು ಮನವಿ ಮಾಡಿದ್ದೆವು. ಆದರೆ, ಕೇಂದ್ರವು ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ’ ಎಂದು ಟೀಕಿಸಿದ್ದಾರೆ.

ದೆಹಲಿಯು ದೇಶದ ಬೆಳವಣಿಗೆಯ ಎಂಜಿನ್ ಆಗಿದ್ದು, ಕೇಂದ್ರಕ್ಕೆ ₹2ಲಕ್ಷ ಕೋಟಿಗೂ ಹೆಚ್ಚು ಆದಾಯ ತೆರಿಗೆ ಮತ್ತು ₹25,000 ಕೋಟಿ ಕೇಂದ್ರ ಜಿಎಸ್ಟಿ ಪಾವತಿಸಿದೆ. ಆದರೂ ಕೇಂದ್ರದ ಬಳಿ ನಾವು ಕೇವಲ ₹20,000 ಕೋಟಿ ಅನುದಾನ ಕೇಳಿದ್ದೆವು. ಇದು ಕೇಂದ್ರ ಬಜೆಟ್ನ ಕೇವಲ ಶೇ 0.4ರಷ್ಟಿತ್ತು. ಆದರೆ, ಎಂಸಿಡಿಗೆ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಗುಡುಗಿದ್ದಾರೆ.

ಕೇಂದ್ರದ ಬಿಜೆಪಿ ಸರ್ಕಾರವು ಕಳೆದ 11 ವರ್ಷಗಳಲ್ಲಿ ಮಂಡಿಸಿರುವ ಬಜೆಟ್ನಲ್ಲಿ ದೆಹಲಿಗೆ ಒಮ್ಮೆಯಾದರೂ ವಿಶೇಷ ಯೋಜನೆ ಅಥವಾ ಅನುದಾನವನ್ನು ಘೋಷಣೆ ಮಾಡಿದ್ದರೆ ತೋರಿಸಲಿ ಎಂದು ಅತಿಶಿ ಸವಾಲು ಹಾಕಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಮೂರನೇ ಅವಧಿಯ ಸರ್ಕಾರದ ಮೊದಲ ಬಜೆಟ್ ಅನ್ನು ‘ಇದು ದೇಶದ ಜನರಿಗಾಗಿ ಮಂಡಿಸಿರುವ ಬಜೆಟ್ ಅಲ್ಲ. ಇದು ಕೇವಲ ‘ಕುರ್ಚಿ ಉಳಿಸಿಕೊಳ್ಳಲು ಮಂಡಿಸಿರುವ ಬಜೆಟ್’ ಆಗಿದೆ ಎಂದು ಅತಿಶಿ ಕುಟುಕಿದ್ದಾರೆ.
.Union Budget Live: ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಸಿಕ್ಕಿದೆ– ನಿತೀಶ್.Budget 2024|ದೆಹಲಿಗೆ ₹10 ಸಾವಿರ ಕೋಟಿ ಅನುದಾನ ನೀಡಿ: ಕೇಂದ್ರಕ್ಕೆ ಆತಿಶಿ ಆಗ್ರಹ.Union BUdget | ಅಭಿವೃದ್ಧಿಗೆ ಪೂರಕವಲ್ಲದ ‘ಕಾಪಿ ಕ್ಯಾಟ್ ಬಜೆಟ್’: ಖರ್ಗೆ.'ಕುರ್ಚಿ ಉಳಿಸಿ', 'ಕಾಪಿ-ಪೇಸ್ಟ್' ಬಜೆಟ್: ಕೇಂದ್ರದ ವಿರುದ್ಧ ರಾಹುಲ್ ವಾಗ್ದಾಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.