ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Lok Sabha | ಬ್ಯಾಂಕಿಂಗ್‌ ಮಸೂದೆ ಮಂಡನೆ

ಬ್ಯಾಂಕ್‌ಗಳ ಆಡಳಿತ ಸುಧಾರಣೆ, ಠೇವಣಿದಾರರ ರಕ್ಷಣೆಗೆ ಒತ್ತು: ಕೇಂದ್ರ
Published : 9 ಆಗಸ್ಟ್ 2024, 23:35 IST
Last Updated : 9 ಆಗಸ್ಟ್ 2024, 23:35 IST
ಫಾಲೋ ಮಾಡಿ
Comments
ಅಧಿಕಾರಾವಧಿ ವಿಸ್ತರಣೆ
ಪ್ರಸ್ತುತ ಸಹಕಾರ ಬ್ಯಾಂಕ್‌ಗಳ ನಿರ್ದೇಶಕರ (ಅಧ್ಯಕ್ಷ ಮತ್ತು ಪೂರ್ಣಕಾಲಿಕ ನಿರ್ದೇಶಕರನ್ನು ಹೊರತುಪಡಿಸಿ) ಅಧಿಕಾರಾವಧಿಯು 8 ವರ್ಷ ಇದೆ. ತಿದ್ದುಪಡಿ ಮಸೂದೆಯಲ್ಲಿ ಈ ಅವಧಿಯನ್ನು 10 ವರ್ಷಕ್ಕೆ ಹೆಚ್ಚಿಸಲಾಗಿದೆ. ಕೇಂದ್ರ ಸಹಕಾರ ಬ್ಯಾಂಕ್‌ನ ನಿರ್ದೇಶಕರು ರಾಜ್ಯ ಸಹಕಾರ ಬ್ಯಾಂಕ್‌ನ ಆಡಳಿತ ಮಂಡಳಿಯಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಸಂಭಾವನೆ ನಿರ್ಧಾರ
ಸರ್ಕಾರವು ಬ್ಯಾಂಕ್‌ಗಳಿಗೆ ಲೆಕ್ಕ ಪರಿಶೋಧಕರನ್ನು ನೇಮಕ ಮಾಡುತ್ತದೆ. ಅವರಿಗೆ ಎಷ್ಟು ಸಂಭಾವನೆ ನೀಡಬೇಕು ಎಂಬ ಸ್ವಾತಂತ್ರ್ಯವನ್ನು ಬ್ಯಾಂಕ್‌ ನೀಡಲಾಗಿದೆ. ಲೆಕ್ಕ ಪರಿಶೋಧಕರ ಕಾರ್ಯ ನಿರ್ವಹಣೆಗೆ ಅನುಗುಣವಾಗಿ ಬ್ಯಾಂಕ್‌ಗಳು ಸಂಭಾವನೆ ನಿಗದಿಪಡಿಸಬಹುದಾಗಿದೆ.
ಆರ್‌ಬಿಐಗೆ ವರದಿ ಸಲ್ಲಿಕೆ 
ಪ್ರಸ್ತುತ ಬ್ಯಾಂಕ್‌ಗಳು ನಿಯಮಾವಳಿ ಅನ್ವಯ ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶುಕ್ರವಾರ ವರದಿ ಸಲ್ಲಿಸುವುದು ಕಡ್ಡಾಯ. ತಿದ್ದುಪಡಿ ಮಸೂದೆಯಲ್ಲಿ ಪ್ರತಿ ತಿಂಗಳ 15ರಂದು ಮತ್ತು ಕೊನೆಯ ದಿನದಂದು ವರದಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.   ಈಗ ನಿಗದಿ‍ಪಡಿಸಿರುವ ಅವಧಿಯು ಪರಿಣಾಕಾರಿ ಹಾಗೂ ನಿಖರವಾದ ವರದಿ ಸಲ್ಲಿಕೆಗೆ ತೊಡಕಾಗಿದೆ. ಹಾಗಾಗಿ ಇದನ್ನು ಬದಲಾಯಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಹೇಳಿದೆ.
ನಿರ್ದೇಶಕರ ಆಸ್ತಿ ಮೌಲ್ಯದ ಮಿತಿ ಏರಿಕೆ
ಕಳೆದ ಆರು ದಶಕದಿಂದಲೂ ಕಂಪನಿಗಳ ನಿರ್ದೇಶಕರ ಆಸ್ತಿ ಮೌಲ್ಯದ ಮಿತಿ ಹೆಚ್ಚಿರಲಿಲ್ಲ. ಈ ಮಸೂದೆಯಲ್ಲಿ ಮಿತಿಯನ್ನು ಹೆಚ್ಚಿಸಲಾಗಿದೆ. ಯಾವುದೇ ಕಂಪನಿಯಲ್ಲಿ ನಿರ್ದೇಶಕರು ₹5 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ಆಸ್ತಿಯ ಒಡೆತನ ಹೊಂದಿದ್ದರೆ ಅದನ್ನು ‘ಸಬ್​ಸ್ಟಾನ್ಷಿಯಲ್ ಇಂಟರೆಸ್ಟ್’ ಎಂದು ನಿರ್ಧರಿಸಲಾಗುತ್ತದೆ. ಅಂತಹ ನಿರ್ದೇಶಕರಿಗೆ ಸಾಲ ನೀಡಲು ಆಡಳಿತ ಮಂಡಳಿಯ ಅನುಮೋದನೆ ಪಡೆಯುವುದು ಕಡ್ಡಾಯ. ಮಸೂದೆ ಪ್ರಕಾರ ನಿರ್ದೇಶಕರು ₹4 ಕೋಟಿ ಮೊತ್ತದ ಷೇರುಗಳ ಒಡೆತನ ಅಥವಾ ಮಾಲೀಕತ್ವ ಹೊಂದಿದ್ದರೆ ಈ ಮಾನದಂಡವನ್ನು ಪರಿಗಣಿಸಬೇಕಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT