ನವದೆಹಲಿ: ಚೀನಾದಿಂದ ಭಾರತಕ್ಕೆ ಆಮದಾಗುವ ವಸ್ತುಗಳ ಸಾಗಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಜರ್ಮನಿಯ ಲಾಜಿಸ್ಟಿಕ್ಸ್ ಕಂಪನಿ ಡಿಎಚ್ಎಲ್ ತಿಳಿಸಿದೆ. ಉಭಯ ದೇಶಗಳ ನಡುವಣ ಗಡಿ ಸಂಘರ್ಷ ಉಲ್ಬಣಿಸಿದ ಬಳಿಕ ವಸ್ತುಗಳ ಸಾಗಾಟ ಅನುಮತಿ ಸಿಗುವುದು ವಿಳಂಬವಾಗುತ್ತಿದೆ. ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅದು ತಿಳಿಸಿದೆ.

ಮತ್ತೊಂದು ಪ್ರಮುಖ ಸರಕುಸಾಗಣೆ ಕಂಪನಿ ಫೆಡೆಕ್ಸ್ ಕಾರ್ಪ್ ಸಹ ವಸ್ತುಗಳ ಸಾಗಾಟ ಸ್ಥಗಿತಗೊಳಿಸಿದೆ ಎಂದು ಬ್ಲೂಂಬರ್ಕ್ವಿಂಟ್ ವರದಿ ಮಾಡಿದೆ. ಈ ಕುರಿತು ಫೆಡೆಕ್ಸ್ ಪ್ರತಿಕ್ರಿಯೆ ನೀಡಿಲ್ಲ.

ವಸ್ತುಗಳ ಸಾಗಾಟಕ್ಕೆ ಕಸ್ಟಮ್ಸ್ ಕ್ಲಿಯರೆನ್ಸ್ ವಿಳಂಬವಾಗುತ್ತಿರುವುದರಿಂದ ‘ಡಿಎಚ್ಎಲ್ ಎಕ್ಸ್ಪ್ರೆಸ್ ಇಂಡಿಯಾ’ ಘಟಕ ತಾತ್ಕಾಲಿಕವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಬೇಕಾಗಿ ಬಂದಿದೆ. ಚೀನಾ, ಹಾಂಕಾಂಗ್, ಮಕಾವುವಿನಿಂದ ಭಾರತಕ್ಕೆ ವಸ್ತುಗಳ ಸಾಗಾಟ ನಿಲ್ಲಿಸಲಾಗಿದೆ ಎಂದು ಡಿಎಚ್ಎಲ್ ಪ್ರತಿನಿಧಿಯೊಬ್ಬರು ರಾಯಿಟರ್ಸ್ಗೆ ಖಚಿತಪಡಿಸಿದ್ದಾರೆ.

ಚೀನಾ, ಚೀನಾ ಕಂಪನಿಗಳ ಜತೆಗಿನ ಒಪ್ಪಂದ ವಜಾಗೊಳಿಸಲು ಕೋರಿ ಸುಪ್ರೀಂಗೆ ಅರ್ಜಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.