ನವದೆಹಲಿ: ಸರ್ಕಾರದ ಇ–ಮಾರುಕಟ್ಟೆ ಪೋರ್ಟಲ್ ಆದ ‘ಜಿಇಎಂ’ನಲ್ಲಿ ಮಾರಾಟಗಾರರು ಮತ್ತು ಸೇವಾ ಪೂರೈಕೆದಾರರ ವಹಿವಾಟಿನ ಮೇಲೆ ವಿಧಿಸುತ್ತಿದ್ದ ಶುಲ್ಕವನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿದೆ.

‘ಕೇಂದ್ರ ಸರ್ಕಾರದ 100 ದಿನಗಳ ಕಾರ್ಯಕ್ರಮದ ಅಂಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ‘ಜಿಇಎಂ’ನ ಹೆಚ್ಚುವರಿ ಸಿಇಒ ಅಜಿತ್ ಬಿ. ಚೌಹಾಣ್ ತಿಳಿಸಿದ್ದಾರೆ.

ಆಗಸ್ಟ್ 9ರಿಂದ ಜಾರಿಗೆ ಬಂದಿರುವ ಹೊಸ ನೀತಿ ಅನ್ವಯ ಈ ಕ್ರಮಕೈಗೊಳ್ಳಲಾಗಿದೆ. ಇ–ಪೋರ್ಟಲ್‌ನಲ್ಲಿ ₹10 ಲಕ್ಷ ಮೌಲ್ಯದ ಆರ್ಡರ್‌ಗಳ ವಹಿವಾಟಿಗೆ ಯಾವುದೇ ಶುಲ್ಕ ಇರುವುದಿಲ್ಲ. ಈ ಮೊದಲು ₹5 ಲಕ್ಷ ಮೌಲ್ಯದ ವರೆಗಿನ ಆರ್ಡರ್‌ಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿತ್ತು.

₹10 ಲಕ್ಷ ಮೇಲ್ಪಟ್ಟು, ₹10 ಕೋಟಿವರೆಗಿನ ಒಟ್ಟು ಆರ್ಡರ್‌ಗಳ ಮೌಲ್ಯದ ಮೇಲೆ ಶೇ 0.30ರಷ್ಟು ಶುಲ್ಕ ನಿಗದಿಪಡಿಸಲಾಗಿದೆ. ಈ ಮೊದಲು ಶೇ 0.45ರಷ್ಟು ಶುಲ್ಕ ವಿಧಿಸಲಾಗುತ್ತಿತ್ತು. ₹10 ಕೋಟಿ ಮೇಲ್ಪಟ್ಟ ಆರ್ಡರ್‌ಗಳಿಗೆ ₹3 ಲಕ್ಷ ಶುಲ್ಕ ವಿಧಿಸಲಾಗುತ್ತದೆ. ಈ ಮೊದಲು ₹72.5 ಲಕ್ಷ ಮೌಲ್ಯದ ಆರ್ಡರ್‌ಗಳಿಗೆ ಇಷ್ಟು ಮೊತ್ತದ ಶುಲ್ಕ ವಿಧಿಸಲಾಗುತ್ತಿತ್ತು ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.