ನವದೆಹಲಿ: ‘ಅಸಂಘಟಿತ ವಲಯದಲ್ಲಿರುವ ಮೀನು ಕೃಷಿಕರನ್ನು ಸಂಘಟಿತ ವಲಯಕ್ಕೆ ತರುವ ಮೂಲಕ ಸರ್ಕಾರದ ವಿವಿಧ ಯೋಜನೆಯಡಿ ಸೌಲಭ್ಯ ಕಲ್ಪಿಸಬೇಕಿದೆ’ ಎಂದು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ರಾಜೀವ್ ರಂಜನ್ ಸಿಂಗ್ ಹೇಳಿದ್ದಾರೆ.

ಗುರುವಾರ ನಡೆದ ವಿಶ್ವ ಮೀನುಗಾರಿಕೆ ದಿನಾಚರಣೆಯಲ್ಲಿ ಮಾತನಾಡಿದ ಅವರು, ಜಗತ್ತಿನಲ್ಲಿ ಭಾರತವು ಎರಡನೇ ಅತಿದೊಡ್ಡ ಮೀನು ಉತ್ಪಾದಕ ರಾಷ್ಟ್ರವಾಗಿದೆ. ಶೀಘ್ರದಲ್ಲಿ ಮೊದಲ ಸ್ಥಾನಕ್ಕೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

2013–14ರಲ್ಲಿ ದೇಶದ ಮೀನು ಉತ್ಪಾದನೆಯು 95.79 ಲಕ್ಷ ಟನ್ ಇತ್ತು. 2022–23ರ ವೇಳೆಗೆ 175.45 ಲಕ್ಷ ಟನ್ ಆಗಿದ್ದು, ಶೇ 82ರಷ್ಟು ಏರಿಕೆಯಾಗಿದೆ.

3 ಕೋಟಿ ಜನರು ಮೀನುಗಾರಿಕೆ ವಲಯವನ್ನು ಅವಲಂಬಿಸಿದ್ದಾರೆ. ಕಿಸಾನ್ ಕ್ರೆಡಿಟ್ ಕಾರ್ಡ್, ವಿಮಾ ಸೌಲಭ್ಯವನ್ನು ಒದಗಿಸಬೇಕಿದೆ ಎಂದರು.

ಸಮುದ್ರದಿಂದ ಪ್ಲಾಸ್ಟಿಕ್ ಅನ್ನು ಹೊರತೆಗೆಯಬೇಕಿದೆ. ಅಕ್ರಮ ಮೀನುಗಾರಿಕೆಯನ್ನು ನಿಯಂತ್ರಿಸಬೇಕಿದೆ. ಸರ್ಕಾರವು ಈ ಸವಾಲುಗಳನ್ನು ಎದುರಿಸಲು ಮತ್ತು ಮೀನುಗಾರಿಕೆ ವಲಯದ ಸದೃಢಗೊಳಿಸಲು ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರು.

ಕೇರಳ ಅತ್ಯುತ್ತಮ ಸಾಗರ ರಾಜ್ಯ ಎಂದು ಪ್ರಶಸ್ತಿ ಪಡೆದರೆ, ತೆಲಂಗಾಣ ಅತ್ಯುತ್ತಮ ಒಳನಾಡಿನ ರಾಜ್ಯ ಪ್ರಶಸ್ತಿಗೆ ಭಾಜನವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.