ನವದೆಹಲಿ: ಕೇಂದ್ರ ಸರ್ಕಾರ ಮಂಗಳವಾರ ಚಾಲನೆ ನೀಡಿರುವ ‘ಪಿಎಂ ಇ–ಡ್ರೈವ್’ ಯೋಜನೆಯಡಿ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳಿಗೆ ಅವುಗಳ ಬ್ಯಾಟರಿ ಸಾಮರ್ಥ್ಯ ಆಧಾರದ ಮೇಲೆ ಸಬ್ಸಿಡಿ ದೊರೆಯಲಿದೆ.

ಪ್ರತಿ ಕಿಲೊ ವಾಟ್‌ಗೆ ₹5 ಸಾವಿರ ನಿಗದಿಪಡಿಸಲಾಗಿದೆ. ಮೊದಲ ವರ್ಷದಲ್ಲಿ ಗರಿಷ್ಠ ₹10 ಸಾವಿರ ಸಬ್ಸಿಡಿ ದೊರೆಯಲಿದೆ. ಎರಡನೇ ವರ್ಷದಲ್ಲಿ ಪ್ರತಿ ಕಿಲೊ ವಾಟ್‌ಗೆ ₹2,500 ಪಾವತಿಸಲಾಗುತ್ತದೆ. ಸಬ್ಸಿಡಿಯ ಮೊತ್ತವು ₹5 ಸಾವಿರ ದಾಟುವಂತಿಲ್ಲ ಎಂದು ಸರ್ಕಾರ ತಿಳಿಸಿದೆ.

ಇ–ಆಟೊರಿಕ್ಷಾ ಸೇರಿ ತ್ರಿಚಕ್ರ ವಾಹನಗಳಿಗೆ ಮೊದಲ ವರ್ಷ ₹25 ಸಾವಿರ ಹಾಗೂ ಎರಡನೇ ವರ್ಷದಲ್ಲಿ ₹12,500 ಸಬ್ಸಿಡಿ ದೊರೆಯಲಿದೆ. ಎಲ್5 ವರ್ಗಕ್ಕೆ ಸೇರಿದ (ಸರಕು ಸಾಗಣೆ ತ್ರಿಚಕ್ರವಾಹನ) ವಾಹನಗಳಿಗೆ ಪ್ರಥಮ ವರ್ಷ ₹50 ಸಾವಿರ ಹಾಗೂ ದ್ವಿತೀಯ ವರ್ಷದಲ್ಲಿ ₹25 ಸಾವಿರ ಸಬ್ಸಿಡಿ ಸಿಗಲಿದೆ ಎಂದು ತಿಳಿಸಿದೆ.

ಎಲೆಕ್ಟ್ರಿಕ್ ಸ್ಕೂಟರ್ ತಯಾರಿಸುವ ಓಲಾ, ಟಿವಿಎಸ್, ಏಥರ್ ಎನರ್ಜಿ, ಹೀರೊ ವಿದಾ (ಹೀರೊ ಮೋಟೊಕಾರ್ಪ್) ಮತ್ತು ಬಜಾಜ್‌ನ ಚೇತಕ್ ಬ್ಯಾಟರಿ ಸಾಮರ್ಥ್ಯ 2.88ರಿಂದ 4 ಕಿಲೊ ವಾಟ್ ಇದೆ. ಇವುಗಳ ಬೆಲೆ ₹90 ಸಾವಿರದಿಂದ ₹1.5 ಲಕ್ಷ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.