ನವದೆಹಲಿ: ಆನ್ಲೈನ್ ಮೂಲಕ ಆಹಾರ ಪೂರೈಸುವ ಸ್ವಿಗ್ಗಿ ಕಂಪನಿಯ ಆರಂಭಿಕ ಸಾರ್ವಜನಿಕ ಕೊಡುಗೆಗೆ (ಐಪಿಒ) ಹೂಡಿಕೆದಾರರಿಂದ ಉತ್ತಮ ಸ್ಪಂದನೆ ದೊರೆತಿದೆ. ಕಂಪನಿಯು ನಿರೀಕ್ಷಿಸಿದ್ದ ₹11,327 ಕೋಟಿ ಬಂಡವಾಳ ಸಂಗ್ರಹವಾಗಿದೆ.

ಒಟ್ಟು 16.07 ಕೋಟಿ ಷೇರುಗಳಿಗೆ ಬಿಡ್ ಆಹ್ವಾನಿಸಲಾಗಿತ್ತು. ಒಟ್ಟು 40.59 ಕೋಟಿ ಬಿಡ್ಗಳು ಸಲ್ಲಿಕೆಯಾಗಿವೆ. ಕಂಪನಿಯ ಷೇರುಗಳಿಗೆ ಒಟ್ಟಾರೆ 2.54 ಪಟ್ಟು ಬೇಡಿಕೆ ಕಂಡುಬಂದಿದೆ ಎಂದು ಷೇರುಪೇಟೆಯ ಅಂಕಿಅಂಶಗಳು ತಿಳಿಸಿವೆ.

ಅರ್ಹ ಸಾಂಸ್ಥಿಕ ಹೂಡಿಕೆದಾರರ (ಕ್ಯುಐಬಿ) ವಿಭಾಗದಲ್ಲಿ 4.16 ಪಟ್ಟು ಹಾಗೂ ಚಿಲ್ಲರೆ ವೈಯಕ್ತಿಕ ಹೂಡಿಕೆದಾರರ ವಿಭಾಗದಿಂದ 1.03 ಪಟ್ಟು ಅರ್ಜಿಗಳು ಸಲ್ಲಿಕೆಯಾಗಿವೆ. ಸಾಂಸ್ಥಿಕೇತರ ವಿಭಾಗದಿಂದ ಶೇ 30ರಷ್ಟು ಅರ್ಜಿ ಸ್ವೀಕರಿಸಲಾಗಿದೆ.

ಕಂಪನಿಯು ಆರಂಭಿಕ ಹೂಡಿಕೆದಾರರ (ಆ್ಯಂಕರ್ ಇನ್ವೆಸ್ಟರ್) ಮೂಲಕ ₹5,085 ಕೋಟಿ ಬಂಡವಾಳ ಸಂಗ್ರಹಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.