ಬೆಂಗಳೂರು: ಕಳೆದ ತಿಂಗಳು ಕೇಂದ್ರ ಸರ್ಕಾರವು ಖಾದ್ಯ ತೈಲ ಆಮದು ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಹೆಚ್ಚಿಸಿತ್ತು. ಇದರ ಬೆನ್ನಲ್ಲೇ ಏರಿಕೆಯಾಗಿದ್ದ ಅಡುಗೆ ಎಣ್ಣೆ ಬೆಲೆಯು ಇನ್ನೂ ಇಳಿಕೆಯಾಗಿಲ್ಲ.

ಜನಸಾಮಾನ್ಯರು ದೀಪಾವಳಿ ಹಬ್ಬಕ್ಕೆ ಸಜ್ಜಾಗುತ್ತಿದ್ದಾರೆ. ಹಬ್ಬದ ಅಂಗವಾಗಿ ಮನೆಗಳಲ್ಲಿ ವಿಶೇಷ ಖಾದ್ಯ ಸಿದ್ಧಪಡಿಸುವುದು ವಾಡಿಕೆ. ಆದರೆ, ಅಡುಗೆ ಎಣ್ಣೆ ಧಾರಣೆ ಏರಿಕೆಯಾಗಿರುವುದು ಗ್ರಾಹಕರಿಗೆ ಹೊರೆಯಾಗಿದೆ.

ಕೇಂದ್ರವು ಸೆಪ್ಟೆಂಬರ್ 14ರಂದು ಕಚ್ಚಾ ಸೋಯಾಬಿನ್, ತಾಳೆ ಮತ್ತು ಸೂರ್ಯಕಾಂತಿ ಎಣ್ಣೆ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೂನ್ಯದಿಂದ ಶೇ 20ಕ್ಕೆ ಏರಿಕೆ ಮಾಡಿತ್ತು. ಸಂಸ್ಕರಿಸಿದ ತಾಳೆ, ಸೂರ್ಯಕಾಂತಿ ಮತ್ತು ಸೋಯಾಬಿನ್ ಎಣ್ಣೆ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇ 12.5ರಿಂದ ಶೇ 32.5ಕ್ಕೆ ಹೆಚ್ಚಿಸಿತ್ತು.

ಕಡಿಮೆ ಕಸ್ಟಮ್ಸ್ ಸುಂಕ ಇದ್ದಾಗ ಆಮದು ಮಾಡಿಕೊಂಡಿರುವ 30 ಲಕ್ಷ ಟನ್ನಷ್ಟು ಖಾದ್ಯ ತೈಲ ದಾಸ್ತಾನು ಇದೆ. ಇದು 40ರಿಂದ 45 ದಿನದವರೆಗೆ ದೇಶೀಯ ಬೇಡಿಕೆಗೆ ಸಾಕಾಗಲಿದೆ. ಹಾಗಾಗಿ, ದಿಢೀರ್ ದರ ಏರಿಕೆ ಮಾಡಬಾರದು ಎಂದು ಕೇಂದ್ರ ಸೂಚಿಸಿತ್ತು.

ಆದರೆ, ಸ್ಥಳೀಯ ಸಗಟು ಮಾರಾಟಗಾರರು ಮತ್ತು ಖಾದ್ಯ ತೈಲ ಕಂಪನಿಗಳು ಸಗಟು ದರವನ್ನು ಶೇ 10ರಷ್ಟು ಏರಿಕೆ ಮಾಡಿದ್ದವು. ಇದರ ಲಾಭ ಪಡೆದ ಚಿಲ್ಲರೆ ಮಾರಾಟಗಾರರು ಪ್ರತಿ ಕೆ.ಜಿಗೆ ₹10ರಿಂದ ₹30 ದರ ಹೆಚ್ಚಿಸಿದ್ದಾರೆ.

ಭಾರತವು ರಷ್ಯಾ ಮತ್ತು ಉಕ್ರೇನ್ನಿಂದ ಹೆಚ್ಚಿನ ಪ್ರಮಾಣದಲ್ಲಿ ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ. ಮಲೇಷ್ಯಾ ಮತ್ತು ಇಂಡೊನೇಷ್ಯಾದಿಂದ ತಾಳೆ ಎಣ್ಣೆಯು ಪೂರೈಕೆಯಾಗುತ್ತದೆ. ಬ್ರೆಜಿಲ್ ಮತ್ತು ಅರ್ಜೆಂಟೀನಾದಿಂದ ಸೋಯಾಬಿನ್ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ.

‘ಸುಂಕ ಏರಿಕೆಗೆ ಅನುಗುಣವಾಗಿ ಸಗಟು ದರದಲ್ಲಿ ಏರಿಕೆಯಾಗಿದೆ. ಇದರಿಂದ ಸಹಜವಾಗಿ ಚಿಲ್ಲರೆ ದರದಲ್ಲೂ ಹೆಚ್ಚಳವಾಗುತ್ತದೆ. ಪೂರೈಕೆ ಹಾಗೂ ಬೇಡಿಕೆಗೆ ಅನುಗುಣವಾಗಿ ಅಡುಗೆ ಎಣ್ಣೆ ಬೆಲೆಯಲ್ಲಿ ಏರಿಳಿತವಾಗುತ್ತದೆ’ ಎನ್ನುತ್ತಾರೆ ಚಳ್ಳಕೆರೆಯ ಸಗಟು ವರ್ತಕ ರಘು.

ಈರುಳ್ಳಿ ಧಾರಣೆ ಏರಿಕೆ

ರಾಜ್ಯದಲ್ಲಿ ಒಂದು ವಾರದಲ್ಲಿ ಸುರಿದ ಮಳೆಗೆ ಈರುಳ್ಳಿ ಫಸಲು ಹಾನಿಗೀಡಾಗಿದೆ. ಇದರಿಂದ ಗುಣಮಟ್ಟದ ಈರುಳ್ಳಿಯ ಚಿಲ್ಲರೆ ದರವು ಕೆ.ಜಿಗೆ ₹70ಕ್ಕೆ ಮುಟ್ಟಿದೆ. ಸದ್ಯ ಬೆಂಗಳೂರಿನ ಯಶವಂತಪುರದ ಎಪಿಎಂಸಿಗೆ ಚಳ್ಳಕೆರೆ ಹಿರಿಯೂರು ಹಗರಿಬೊಮ್ಮನಹಳ್ಳಿ ಕೊಟ್ಟೂರು ಕೂಡ್ಲಿಗಿ ಭಾಗದಲ್ಲಿ ಬೆಳೆದಿರುವ ಈರುಳ್ಳಿ ಪೂರೈಕೆಯಾಗುತ್ತಿದೆ. ‘ಎ’ ಗ್ರೇಡ್ ಈರುಳ್ಳಿಯ ಸಗಟು ದರ ಕ್ವಿಂಟಲ್ಗೆ ₹4500 ಇದೆ. ಮಹಾರಾಷ್ಟ್ರದಿಂದ ಪೂರೈಕೆಯಾಗುವ ಈರುಳ್ಳಿಯ ಸಗಟು ಬೆಲೆ ಕ್ವಿಂಟಲ್ಗೆ ₹5000ದಿಂದ ₹5200 ಇದೆ. ‘ಮಳೆಯಿಂದಾಗಿ ಪೂರೈಕೆ ಕಡಿಮೆಯಾಗಿದೆ. ಇದೇ ಬೆಲೆ ಏರಿಕೆಗೆ ಕಾರಣ. ಬೆಂಗಳೂರಿನ ಮಾರುಕಟ್ಟೆಗೆ ಪ್ರತಿದಿನ 50ರಿಂದ 60 ಟ್ರಕ್ಗಳಲ್ಲಿ ಈರುಳ್ಳಿ ಪೂರೈಕೆಯಾಗುತ್ತದೆ. ಇದರಲ್ಲಿ ಹಸಿ ಸರಕು ಪ್ರಮಾಣ ಹೆಚ್ಚಿದೆ’ ಎಂದು ವರ್ತಕ ಲೋಕಪ್ಪ ತಿಳಿಸಿದರು. ‘ಮುಂದಿನ ವಾರದಿಂದ ಗದಗ ಹಾವೇರಿ ವಿಜಯಪುರ ಬಾಗಲಕೋಟೆ ಜಿಲ್ಲೆಯಲ್ಲಿ ಬೆಳೆದಿರುವ ಫಸಲು ಮಾರುಕಟ್ಟೆಗೆ ಪೂರೈಕೆಯಾಗಲಿದೆ’ ಎಂದರು.

ಟೊಮೆಟೊ ಕೆ.ಜಿಗೆ ₹80

ಚಿಲ್ಲರೆ ಮಾರುಕಟ್ಟೆಯಲ್ಲಿ ಗುಣಮಟ್ಟದ ಕೆ.ಜಿ ಟೊಮೆಟೊ ಧಾರಣೆಯು ₹80ಕ್ಕೆ ಮುಟ್ಟಿದೆ. ರಾಜ್ಯದಲ್ಲಿಯೇ ಅತಿಹೆಚ್ಚು ಪ್ರಮಾಣದಲ್ಲಿ ಟೊಮೆಟೊ ಬೆಳೆಯುವ ಕೋಲಾರ ಜಿಲ್ಲೆಯಲ್ಲಿ ಮಳೆಯಿಂದಾಗಿ ಈ ಬಾರಿ ನಾಟಿ ಮಾಡಿದ್ದ ಫಸಲಿನ ಪೈಕಿ ಶೇ 50ರಷ್ಟು ಹಾನಿಗೀಡಾಗಿದೆ. ಅಲ್ಲದೆ ಎಲೆ ಮುಟುರು ರೋಗ (ಬಿಳಿನೊಣ ಬಾಧೆ) ಕಾಣಿಸಿಕೊಂಡಿದೆ. ಇದರಿಂದ ಇಳುವರಿ ಕುಂಠಿತವಾಗಿದ್ದು ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿದೆ. ಹಾಗಾಗಿ ಬೆಲೆ ಏರಿಕೆಯ ಹಾದಿ ಹಿಡಿದಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಇರಾನ್ನಿಂದ ಬೆಳ್ಳುಳ್ಳಿ ಪೂರೈಕೆ ಸ್ಥಗಿತ

ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷವು ಭಾರತಕ್ಕೆ ಬೆಳ್ಳುಳ್ಳಿ ಪೂರೈಕೆ ಮೇಲೆ ಪರಿಣಾಮ ಬೀರಿದೆ. ಸದ್ಯ ಸಗಟು ದರವು ಕೆ.ಜಿಗೆ ₹250ರಿಂದ ₹450 ಇದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ‘ಎ’ ಗ್ರೇಡ್ ಬೆಳ್ಳುಳ್ಳಿ ಧಾರಣೆಯು ₹500 ದಾಟಿದೆ. ‘ಮಧ್ಯಪ್ರದೇಶದಿಂದ ಮಾತ್ರವೇ ಬೆಂಗಳೂರಿನ ಮಾರುಕಟ್ಟೆಗೆ ಬೆಳ್ಳುಳ್ಳಿ ಪೂರೈಕೆಯಾಗುತ್ತಿದೆ. ವಾರಕ್ಕೊಮ್ಮೆ ಅಫ್ಗಾನಿಸ್ತಾನದಿಂದ 20ರಿಂದ 30 ಟನ್ ಪೂರೈಕೆಯಾಗುತ್ತಿದೆ. ಇದು ಇಲ್ಲಿನ ಬೇಡಿಕೆಗೆ ಸಾಕಾಗುವುದಿಲ್ಲ’ ಎಂದು ಬೆಂಗಳೂರಿನ ಗುಜರಾತ್ ಟ್ರೇಡರ್ಸ್ನ ವರ್ತಕ ಜುಬೇರ್ ತಿಳಿಸಿದರು. ‘ಪಶ್ಚಿಮ ಏಷ್ಯಾ ಬಿಕ್ಕಟ್ಟು ಉಲ್ಬಣಗೊಂಡಿದ್ದು ಹಡಗಿನ ಮೂಲಕ ಸರಕು ಸಾಗಣೆಗೆ ಅಡ್ಡಿಯಾಗಿದೆ. ಇದರಿಂದ ಇರಾನ್ನಿಂದ ಬೆಳ್ಳುಳ್ಳಿ ಪೂರೈಕೆಯು ಸಂಪೂರ್ಣ ಸ್ಥಗಿತಗೊಂಡಿದೆ’ ಎಂದರು. ‘ರಾಜಸ್ಥಾನ ಮತ್ತು ಗುಜರಾತ್ನಲ್ಲಿ ರೈತರ ಬಳಿ ಸರಕು ಇಲ್ಲ. ಹಾಗಾಗಿ ಮಧ್ಯಪ್ರದೇಶದಿಂದ ಪೂರೈಕೆಯಾಗುವ ಬೆಳ್ಳುಳ್ಳಿಯನ್ನಷ್ಟೇ ನಂಬಿಕೊಳ್ಳುವಂತಾಗಿದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.