ಬೀದರ್: ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಚಳಕಾಪುರ ಗ್ರಾಮದಲ್ಲಿ ಎರಡು ಸಮುದಾಯದವರ ನಡುವೆ ನಡೆದಿರುವ ಘರ್ಷಣೆಯಿಂದ ತೀವ್ರ ಆಘಾತವಾಗಿದ್ದು, ಶಾಂತಿ ಮರು ಸ್ಥಾಪನೆಗೆ ಎಲ್ಲರೂ ಸಹಕರಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಮನವಿ ಮಾಡಿದ್ದಾರೆ.
.ಮಹಿಳೆಯರು ಆರ್ಥಿಕವಾಗಿ ಸಬಲರಾಗಲಿ: ಈಶ್ವರ ಬಿ. ಖಂಡ್ರೆ.
ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತರೆಲ್ಲರೂ ಸಹೋದರರಂತೆ ಬಾಳುತ್ತಿರುವ ಬೀದರ್ ಜಿಲ್ಲೆ ಸರ್ವ ಜನಾಂಗದ ಶಾಂತಿಯ ತೋಟವೆಂದು ಹೆಸರಾಗಿದೆ. ಜಾತಿಯತೆಯ ನಿರ್ಮೂಲನೆಗೆ ಶ್ರಮಿಸಿದ ಬಸವಾದಿ ಶರಣರ ನಾಡಿನಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಅವರಿಗೆ ಅಪಾರ ಗೌರವ ನೀಡಲಾಗುತ್ತದೆ. ಇಂತಹ ಭಾವೈಕ್ಯತೆಯ ನೆಲದಲ್ಲಿ ನಡೆಯುವ ಸಣ್ಣ ಘಟನೆಗಳೂ ಜಿಲ್ಲೆಯ ಖ್ಯಾತಿಗೆ ಕಳಂಕ ತರುತ್ತವೆ ಎಂದು ಬುಧವಾರ ತಿಳಿಸಿದ್ದಾರೆ.

ಆಗಿರುವ ಕಹಿ ಘಟನೆ ಮರೆತು ಎಲ್ಲರೂ ಶಾಂತಿ ಮರು ಸ್ಥಾಪನೆಗೆ ಪ್ರಯತ್ನಶೀಲರಾಗಬೇಕು. ಗ್ರಾಮದಲ್ಲಿ ನಡೆದಿರುವ ಘಟನೆ ಅತ್ಯಂತ ನೋವಿನ ಸಂಗತಿ. ಸಮಾಜದ ಸ್ವಾಸ್ಥ್ಯ ಕದಡದಂತೆ, ಶಾಂತಿಗೆ ಭಂಗ ಬಾರದಂತೆ ಪ್ರಜ್ಞಾವಂತರಾದ ಬೀದರ್ ಜಿಲ್ಲೆಯ ಜನತೆ ಸಹಕರಿಸಬೇಕು ಎಂದು ಕೋರಿದ್ದಾರೆ.
.ಶೇ 95ರಷ್ಟು ಜನರಿಗೆ ಗ್ಯಾರಂಟಿ ಯೋಜನೆ ಲಾಭ: ಸಂಸದ ಸಾಗರ್ ಖಂಡ್ರೆ .
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಘಟನಾ ಸ್ಥಳಕ್ಕೆ ಧಾವಿಸಿ, ಶಾಂತಿ ಸಭೆ ನಡೆಸಿ, ಶಾಂತಿ ಮರುಸ್ಥಾಪಿಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಚಳಕಾಪುರದ ಹನುಮಾನ ಜಾತ್ರೆ ಸಂದರ್ಭದಲ್ಲಿ ಪರಿಶಿಷ್ಟ ಜಾತಿಯವರು ಹಾಗೂ ಲಿಂಗಾಯತರ ನಡುವೆ ಘರ್ಷಣೆ ನಡೆದಿದ್ದು, ಎರಡೂ ಕಡೆಯವರ ವಿರುದ್ಧ ಪ್ರಕರಣ ದಾಖಲಾಗಿದೆ.
.ವರ್ಷದಲ್ಲಿ 103 ಎಕರೆ ಅರಣ್ಯ ಒತ್ತುವರಿ ತೆರವು: ಸಚಿವ ಈಶ್ವರ ಖಂಡ್ರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.